ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನಲ್ಲಿ ಅಕ್ರಮ ಮಧ್ಯ ಮಾರಾಟ,ಮಟ್ಕಾ,ಗಾಂಜಾ ಮಾರಾಟ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ. ಇದಕ್ಕೆ ಶಿರಸಿ ಉಪವಿಭಾಗದ ಡಿವೈಎಸ್‌ಪಿ ಹಾಗೂ ಸ್ಥಳೀಯ ಠಾಣೆಯ ಸಿಪಿಐ ಕಾರಣರಾಗಿದ್ದಾರೆ ಹೀಗಾಗಿ ಇವರನ್ನು ಅಮಾನತ್ ಮಾಡಬೇಕೆಂದು ಆಗ್ರಹಿಸಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ನೇತೃತ್ವದಲ್ಲಿ ಸಾರ್ವಜನಿಕರು ರಾಮಕೃಷ್ಣ ಹೆಗಡೆ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರಭಾರೆ ತಹಸೀಲ್ದಾರ ರಮೇಶ ಹೆಗಡೆ ಮೂಲಕ ಮುಖ್ಯಮಂತ್ರಿ ಹಾಗೂ ಗೃಹಸಚೀವರಿಗೆ ಮನವಿ ಸಲ್ಲಿಸಿದರು.


ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಸಂತ ನಾಯ್ಕ, ಶಿರಸಿ-ಸಿದ್ದಾಪುರ ಸೇರಿ ೧೫ಕ್ಕೂ ಹೆಚ್ಚು ಕ್ಲಬ್‌ಗಳು ನಡೆಯುತ್ತಿದೆ. ಅಕ್ರಮ ಮಧ್ಯಮಾರಾಟ ಹಳ್ಳಿಹಳ್ಳಿಗಳಲ್ಲಿ ನಡೆಯುತ್ತಿದೆ ಮಟ್ಕಾ,ಗಾಂಜಾ ಮಾರಾಟ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ ಇದೆಲ್ಲದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಡಿವೈಎಸ್‌ಪಿಯವರಾಗಲಿ,ಸ್ಥಳೀಯ ಠಾಣೆಯ ಸಿಪಿಐ ಆಗಲಿ ಯಾವುದೇ ಕ್ರಮ ತೆಗೆದುಕೊಳ್ಳದೆ ನನ್ನ ವಿರುದ್ಧ ವಯಕ್ತಿಕ ದ್ವೇಷ ಸಾಧಿಸುವ ಪ್ರಯತ್ನ ಮಾಡಿ ನನ್ನ ತೇಜೋವಧೆ ಮಾಡುತ್ತಿದ್ದಾರೆ ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಿ ಅವರ ವಿರುದ್ಧ ಉನ್ನತಮಟ್ಟದ ತನಿಖಕೆ ನಡೆಸಬೇಕು ಎಂದು ಆಗ್ರಹಿಸಿದರು.


ನನ್ನ ಮೇಲೆ ಹಲವು ಕೇಸ್‌ಗಳಿವೆ ಆದರೆ ಇವೆಲ್ಲವೂ ನಾನು ಸಾರ್ವಜನಿಕ ಹೋರಾಟ ಮಾಡಿದಾಗ ಆಗಿರುವ ಕೆಸ್‌ಗಳು ಅಲ್ಲದೆ ಇವೆಲ್ಲವೂ ನ್ಯಾಯಾಲಯದಲ್ಲಿ ತೀರ್ಮಾನವಾಗಿದೆ ರಾಜಕೀಯವಗಿ ನನ್ನನ್ನು ಮುಗಿಸಲು ವ್ಯವಸ್ಥಿತ ಸಂಚುಗಳು ನಡೆಯುತ್ತಿದೆ ಕಳೆದ ೨೦ ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದೆನೆ ಇಂತಹ ಎಷ್ಟೋ ಘಟನೆಯನ್ನು ಎದುರಿಸಿದ್ದೆನೆ ತಾಲೂಕಿನ ಎಲ್ಲಾ ಘಟನೆಗೂ ನನ್ನ ಕಡೆಗೆ ಬೆರಳು ಮಾಡುತ್ತಿದ್ದಾರೆ ನಮ್ಮದೆ ಸರಕಾರವಿದ್ದು, ನಮ್ಮದೇ ಶಾಸಕರಿದ್ದರೂ ನಾವು ಪೊಲೀಸ್ ಇಲಾಖೆಯ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾದ ಸ್ಥಿತಿ ಬಂದಿರುವುದು ವಿಷಾಧಕರವಾಗಿದೆ.ನಮ್ಮ ಶಾಸಕರು ಸೌಮ್ಯ ಸ್ವಭಾದವರು ಇದರ ದುರುಪಯೋಗವನ್ನು ಇಂತಹ ಅಧಿಕಾರಿಗಳು ಪಡೆಯುತ್ತಿದ್ದಾರೆಈ ಇಬ್ಬರು ಅಧಿಕಾರಿಗಳ ಮೇಲೆ ಹದಿನೈದು ದಿನದಲ್ಲಿ ಕ್ರಮವಾಗಬೇಕು ಇಲ್ಲದಿದ್ದರೆ ತಾಲೂಕಿನ ಸಾರ್ವಜನಿಕರ ಜೊತೆಗೆ ಮುಖ್ಯಮಂತ್ರಿಗಳನ್ನು ಹಾಗೂ ಗೃಹಮಂತ್ರಿಗಳನ್ನು ಖುದ್ಧಾಗಿ ಭೇಟಿಯಾಗಿ ಪ್ರತಿಭಟನಾ ದೂರು ನೀಡಲಾಗುವುದು ಎಂದು ಹೇಳಿದರು.

ಮಾಜಿಜಿಪಂ ಸದಸ್ಯೆ ಸುಮಂಗಲಾ ನಾಯ್ಕ ಮಾತನಾಡಿ, ನಮ್ಮ ಕುಟುಂಬದವರು ಸಾರ್ವಜನಿಕ ಜೀವನದಲ್ಲಿರುವವರು ನಮ್ಮ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದೆ ಇದಕ್ಕೆ ಬ್ರಷ್ಟ ಅಧಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ತಾಲೂಕಿನಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದೆ ಇದನ್ನು ತಡೆಯುವ ಯಾವ ಪ್ರಯತ್ನವನ್ನೂ ಪೊಲೀಸ್ ಇಲಾಖೆ ಮಾಡುತ್ತಿಲ್ಲ ಇದರ ಬಗ್ಗೆ ನಾವು ಮಾತನಾಡಿದರೆ ನಮ್ಮ ಮೇಲೆ ಸುಳ್ಳು ಮೊಕದ್ದಮೆ ಹಾಕಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಗರದ ವಕೀಲ ಬೋಜರಾಜ ಮಾತನಾಡಿ, ನಮ್ಮ ಪ್ರತಿಭಟನೆ ಸರಕಾರದ ವಿರುದ್ಧವಾಗಲಿ ಪೊಲಿಸ್ ಇಲಾಖೆಯ ವಿರುದ್ಧವಾಗಲಿ ಅಲ್ಲ ಬ್ರಷ್ಟಧಿಕಾರಿಗಳ ವಿರುದ್ಧ. ರಾಜಕೀಯವಾಗಿ ಬೆಳೆಯುತ್ತಿರುವ ಯುವ ನಾಯಕನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ ಶಾಸಕರು ಕೂಡಲೇ ಇಂತಹ ಪೊಲೀಸ್ ಅಧಿಕಾರಿಗಳನ್ನು ಇಲ್ಲಿಂದ ಕಳುಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಕೀಲ ಎಂ.ಎನ್.ನಾಯ್ಕ, ಯುವಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ನಾಯ್ಕ,ಬಿಎಸ್‌ಎನ್‌ಡಿಪಿ ಅಧ್ಯಕ್ಷ ವಿನಾಯಕ ನಾಯ್ಕ ದೊಡ್ಡಗದ್ದೆ, ಸಾಮಾಜಿಕ ಕಾರ್ಯಕರ್ತ ಅಣ್ಣಪ್ಪ ನಾಯ್ಕ ಮುಂತಾದವರು ಮಾತನಾಡಿದರು.
