ಸಿದ್ದಾಪುರ: ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಶಿರಳಗಿ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಕೇಂದ್ರಸರಕಾರದ ಪೆಟ್ರೋಲೀಯಂ ಇಲಾಖೆಯ ಸಿಆರ್‌ಎಸ್ ನಿಧಿಯಿಂದ ಜನಶ್ರೀಧನ್ ಫೌಂಡೇಶನ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಟ್ಯಾಬ್ ವಿತರಣಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಆಧುನಿಕ ತಂತ್ರಜ್ಞಾನದಿಂದ ಅಗಾಧವಾದ ಜ್ಞಾನವನ್ನು ಪಡೆಯಬಹುದು ಹಾಗೆಯೇ ಅದರಿಂದ ಕೆಟ್ಟದ್ದನ್ನು ಕಲಿಯಬಹುದು. ಇಂದಿನ ಯುಗವು ಡಿಜಿಟಲ್ ಯುಗವಾಗಿದೆ ಇಲ್ಲಿಎಲ್ಲವೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ ಇಂತಹ ತಂತ್ರಜ್ಞಾನಗಳ ಅಧ್ಯಯನ ವಿದ್ಯಾರ್ಥಿ ದೆಸೆಯಿಂದಲೇ ದೊರಕಿದರೆ ಒಳ್ಳೆಯದು. ಆಧುನಿಕ ತಂತ್ರಜ್ಞಾನಕ್ಕೆ ನಾವು ತೆರೆದುಕೊಳ್ಳಬೇಕಾಗಿದೆ. ನಮ್ಮ ಕೌಶಲ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ತೆರೆದುಕೊಳ್ಳಲು ಇದು ಅನುಕೂಲವಾಗಿತ್ತದೆ.ಸರಕಾರದಿಂದ ಸಿಗುವ ಹಲವು ಯೋಜನೆಗಳನ್ನು ನಿರಂತರವಾಗಿ ತರುವ ಪ್ರಯತ್ನವನ್ನು ಮಾಡುತ್ತಿದ್ದೆನೆ ಸರಕಾರದ ಹೊರತಾಗಿಯು ಕೆಲವು ಯೋಜನೆಗಳು ಇರುತ್ತವೆ ಅಂತಹ ಯೋಜನೆಗಳನ್ನು ನನ್ನ ಕ್ಷೇತ್ರಕ್ಕೆ ತರುತ್ತಿದ್ದೆನೆ. ಅಂತಹ ಯೋಜನೆಗಳಲ್ಲಿ ಈ ಟ್ಯಾಬ್ ವಿತರಣೆಯೂ ಒಂದು ಜಿಲ್ಲೆಯ ಮೂರು ತಾಲೂಕಿನ ಶಾಲೆಗಳಿಗೆ ಹತ್ತುಲಕ್ಷರೂ. ವೆಚ್ಚದ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲಾಗುತ್ತಿದೆ.ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲಾಗುತ್ತಿದೆ ಡಿಜೆಇಟೆಲ್ ಪ್ರಾಥಮಿಕ ತಿಳುವಳಿಕೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹೆಚ್ಚುತ್ತದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.


ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳಿಂದ ಜಗತ್ತಿಗೆ ಸವಾಲಿನ ದಿನಗಳು ಎದುರಾಗುತ್ತಿದೆ. ಈಂತಹ ಸವಾಲ್‌ನ್ನು ಎದುರಿಸುವ ಶಕ್ತಿ ಭಾರತಕ್ಕಿದೆ ಇದೆ ಕಾರಣ ನರೇಂದ್ರ ಮೋದಿಯಂತಹ ಸಮರ್ಥರ ನಾಯಕತ್ವ ನಮಗೆ ಇದೆ. ಕೊರೊನಾ ಸಮಯದಲ್ಲಿ ನಾವೆಲ್ಲ ದೇಶವಾಸಿಗಳು ಒಗ್ಗಟ್ಟನ್ನು ಪ್ರದರ್ಶಿಸಿದ್ದೆವು ಈಗ ಪುನಃ ನಾವೆಲ್ಲ ಒಗ್ಗಟ್ಟಿನಿಂದ ಸವಾಲ್‌ನ್ನು ಎದುರಿಸುವ ಸಮಯ ಬಂದಿದೆ ಡಿಸೆಲ್,ಪೆಟ್ರೋಲ್,ಗ್ಯಾಸ್ ಬೆಲೆ ಏರಿಕೆಯಾಗುತ್ತಿರುವುದು ಸತ್ಯ ಆದರೆ ಬೇರೆ ದೇಶಕ್ಕೆ ಹೋಲಿಸಿದರೆ ನಾವು ಸುರಕ್ಷಿತವಾಗಿ,ಸದೃಢವಾಗಿದ್ದೆವೆ ನಮಗೆ ದೇಶ ಮುಖ್ಯ ಎನ್ನುವ ಭಾವನೆ ಮೂಡಬೇಕಾಗಿದೆ ರಾಷ್ಟ್ರವೂ ದುರ್ಭಲವಾಗದಂತೆ ನಾವು ನೋಡಿಕೊಳ್ಳಬೇಕಾಗಿದೆ ಎಂದು ಕಾಗೇರಿ ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್.ನಾಯ್ಕ, ಕಾಗೇರಿಯವರು ಶಿಕ್ಷಣ ಮಂತ್ರಿಯಾಗಿ ಸಾಖಷ್ಟು ಕೊಡುಗೆಗೆಗಳನ್ನು ಶಿಕ್ಷಣಕ್ಷೇತ್ರಕ್ಕೆ ನೀಡಿದ್ದಾರೆ ಶಿರಸಿ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಿ ಅನುಕೂಲ ಕಲ್ಪಿಸಿದ್ದಾರೆ ವರ್ಗಾವಣೆಯಲ್ಲಿ ಮಧ್ಯವರ್ತೀಗಳ ಹಾವಳಿಯನ್ನು ತಪ್ಪಿಸಿ ಕೌನ್ಸಿಲಿಂಗ್ ಮೂಲಕ ಪಾರದರ್ಶಕತೆಯನ್ನು ತಂದಿದ್ದರು ಕನ್ನಡದಲ್ಲಿ ಹಾಜರ್-ಗೈರು ತರುವ ಮೂಲಕ,ಸ್ಪಷ್ಟ ಓದು ಶುದ್ಧ ಬರವಣಿಗೆ ಹೀಗೆ ಮಾತೃಭಾಷೆಯ ಕಲಿಕೆಗೆ ಒತ್ತು ನಿಡಿದ್ದರು ಹಲವು ಹೊಸತನ್ನು ತರುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತಮದಿದ್ದದರು ಈಗ ಸಂಸದರಾದ ಮೇಲೂ ಶಿಕ್ಷಣ ಕ್ಷೇತ್ರದ ಬಗ್ಗೆ ಖಾಳಜಿವಹಿಸಿ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ದೊರಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ ಮಡಿವಾಳ,ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ಸಹಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ.ನಾಯ್ಕ, ತಿಮ್ಮಪ್ಪ ಮಡಿವಾಳ,ಶ್ರೀಕಾಂತ ಭಟ್ ಮುಂತಾದವರು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಪ್ರೇಮಲತಾ ರಾಯ್ಕರ ಸ್ವಾಗತಿಸಿದರು.

ನರೇಂದ್ರ ಮೋದಿಯವರು ಪ್ರಧಾನಿಯಾಗಿ ನೆಹರೂ ದಾಖಲೆಯನ್ನು ಮುರಿದಿದ್ದಾರೆ. ಗುಜರಾತ ಮುಖ್ಯಮಂತ್ರಿಯಾಗಿ ೧೨ ವರ್ಷ, ಪ್ರಧಾನಿಯಾಗಿ ೧೨ ವರ್ಷ ಹೀಗೆ ೨೪ ವರ್ಷಗಳಲ್ಲಿ ಒಂದೇ ಒಂದು ದಿನವೂ ರಜೆಯನ್ನು ಪಡೆದಿಲ್ಲ,ಅನಾರೋಗ್ಯವೆಂದು ಒಂದು ದಿನವೂ ಹೇಳಿಲ್ಲ, ಕುಟುಂಬದ ಸ್ವಾರ್ಥವೇ ಅವರಲ್ಲಿ ಇಲ್ಲ ಬ್ರಷ್ಟಾಚಾರ ರಹಿತ ಆಡಳಿತ ಮಾಡುವ ಮೂಲಕ ಈಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ-ವಿಶ್ವೇಶ್ವರ ಹೆಗಡೆ ಕಾಗೇರಿ

About the author

Adyot

Leave a Comment