ಸಿದ್ದಾಪುರ ಕಾನಸೂರು ವಸತಿಶಾಲೆ ವಿದ್ಯಾರ್ಥಿ ಆತ್ಮಹತ್ಯೆ; ಒಕ್ಕಲಿಗ ಸಮುದಾಯದಿಂದ ಪ್ರತಿಭಟನೆ

ಆದ್ಯೊತ್ ಸುದ್ದಿನಿಧಿ
ಸಿದ್ದಾಪುರ ಕಾನಸೂರು ಇಂದಿರಾಗಾAಧಿ ವಸತಿ ಶಾಲೆಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯ ಸಾವಿಗೆ ನಿಷ್ಪಕ್ಷಪಾತವಾಗಿ ನ್ಯಾಯಒದಗಿಸುವಂತೆ ಆಗ್ರಹಿಸಿ ಗುರುವಾರ ತಾಲೂಕುಒಕ್ಕಲಿಗರ ಸಮುದಾಯದವರಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.


ವಿದ್ಯಾರ್ಥಿ ಸಾವು ಆತ್ಮಹತ್ಯೆ ಎಂದು ಬಿಂಬಿಸಲಾಗಿದೆ. ಇದು ಆತ್ಮಹತ್ಯೆ ಅಲ್ಲ. ಸಾವಿನಲ್ಲಿ ಅನುಮಾನ ಇದೆ ಎಂದು ಸ್ವತಃ ಅವರ ತಾಯಿ ಈಗಾಗಲೇ ಪೊಲೀಸ್ ಇಲಾಖೆಗೆ ದೂರನ್ನು ನೀಡಿದ್ದರು ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ. ನಮಗೆ ನ್ಯಾಯದೊರೆತ ಹೊರತು ನಾವು ಇಲ್ಲಿಂದ ಹೋಗುವುದಿಲ್ಲ. ಸ್ವತಃ ಎಸ್‌ಪಿ ಯವರು ಸ್ಥಳಕ್ಕೆ ಆಗಮಿಸಿ ಯಾವಕ್ರಮಕೈಗೊಂಡಿದ್ದಾರೆ ಎಂದು ಹೇಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು


ವಿದ್ಯಾರ್ಥಿ ಸಾವಿನ ಕುರಿತು ಸೂಕ್ತ ತನಿಖೆ ಆಗದಿದ್ದರೆ ತಾಲೂಕು ಆಡಳಿತವೇ ಕೊಲೆ ಮಾಡಿದಂತಾಗುತ್ತದೆ. ಬಂಡಲ ವಸತಿ ಶಾಲೆಯಲ್ಲಿ ನಡೆದ ಘಟನೆಗೆ ಸಂಬAಧ ಪಟ್ಟು ಮೂವರನ್ನು ಅಮಾನತ್ತು ಮಾಡಲಾಗಿದೆ. ಆದರೆ ಕಾನಸೂರು ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದರೂ ಇಲ್ಲಿಯ ಸಿಬ್ಬಂದಿಯ ಮೇಲೆ ಯಾವುದೇ ಕ್ರಮ ಇಲ್ಲ. ರಾಜಕೀಯ ಒತ್ತಡ ಏನಾದರು ಇದೆಯಾ?ನಾವು ನ್ಯಾಯಕ್ಕಾಗಿ ಹೋರಾಡುತಿದ್ದೇವೆ.

ಯಾವರೀತಿಯಾಗಿ ಸಾವಾಗಿದೆ.ಎನ್ನುವುದನ್ನು ಯಾಕೆ ಮುಚ್ಚಿಟ್ಟಿದ್ದಿರಿ.ನಮಗೆ ಸಾಧಾರಣ ತನಿಖೆ ಬೇಡ.ವಿಶೇಷ ತನಿಖಾ ತಂಡ ರಚಿಸಬೇಕು. ಕಾನಸೂರು ಇಂದಿರಾಗಾಂಧಿ ವಸತಿ ಶಾಲೆಯ ಎಲ್ಲ ಶಿಕ್ಷಕರ ಮೇಲೆ ಪ್ರಕರಣದಾಖಲಿಸಬೇಕು.ಘಟನೆ ನಡೆದು ಹತ್ತು
ದಿನವಾದರೂ ವಿದ್ಯಾರ್ಥಿ ಹೇಗೆ ಸಾವನ್ನಪ್ಪಿದ ಎಂದು ತಿಳಿದುಬಂದಿಲ್ಲ. ಹೀಗಾದರೆ ನಮಗೆ ಹೇಗೆ ನ್ಯಾಯ ದೊರಕಲು ಸಾಧ್ಯ?.ತನಿಖೆ ಮಾಡುತಿದ್ದೇವೆ ಎಂದು ಪೊಲೀಸರು ಹೇಳುತಿದ್ದಾರೆ ಯಾವಾಗ ತನಿಖೆ ಮುಗಿಯುತ್ತದೆ ಎಂದು ಪೊಲೀಸರುತಿಳಿಸಲಿ ಜಿಲ್ಲೆಯ ಎಲ್ಲಾ ವಸತಿ ಶಾಲೆಯಲ್ಲಿ ವ್ಯವಸ್ಥೆ ಹದಗೆಡುತ್ತಿದೆ. ವಿದ್ಯಾರ್ಥಿಗಳು ಅನೇಕ ಸಮಸ್ಯೆ ಎದುರಿಸುತಿದ್ದಾರೆ. ಇದು ಒಂದು ಸಮಾಜದವರಿಗೆ ಆದ ಅನ್ಯಾಯ ಅಲ್ಲ. ಈ ಹೋರಾಟಕ್ಕೆ ಎಲ್ಲರ ಹಾಗೂ ಎಲ್ಲ ಪಕ್ಷದವರ ಬೆಂಬಲವೂ ಇದೆ.ಮೃತ ವಿದ್ಯಾರ್ಥಿಯ ಪಾಲಕರಿಗೆ ನ್ಯಾಯ ಸಿಗಬೇಕು ಎನ್ನುವ ಕುರಿತು ನಮ್ಮ ಹೋರಾಟ.ತನಿಖೆಯಾವ ಹಂತದಲ್ಲಿದೆ. ಯಾರ, ಯಾರ ಮೇಲೆ ಕ್ರಮಕೈಗೊಂಡಿದ್ದಿರಿ, ತನಿಖೆಯಾಕಾಗಿ ವಿಳಂಬವಾಗುತ್ತಿದೆ ಎಂದು ಪ್ರಶ್ನಿಸಿ ಎಸ್‌ಪಿ ಯವರು ಸ್ಥಳಕ್ಕೆ ಬಂದು ಉತ್ತರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಿದ್ದಾಪುರ, ಶಿರಸಿ, ಹೊನ್ನಾವರ, ಕುಮಟಾ, ಸೊರಬ, ಸಾಗರ ಮತ್ತಿತರ ತಾಲೂಕಿನಿಂದ ಆಗಮಿಸಿದ ಐದುನೂರಕ್ಕೂ ಹೆಚ್ಚು ಜನರು ತಿಮ್ಮಪ್ಪ ನಾಯಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ತಹಸೀಲ್ದಾರ ಕಚೇರಿಯ ಎದುರಿನ ಸಾಗರ ರಸ್ತೆಯಲ್ಲಿ ಸುಮಾರು ಒಂದುತಾಸುರಸ್ತೆತಡೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಮಾತನಾಡಿ, ಈಗಾಗಲೇ ಎಲ್ಲಾ ರೀತಿಯ ತನಿಖೆ ಮಾಡುತ್ತಿದ್ದೇವೆ. ನಿಮಗೆ ಯಾರ ಮೇಲಾದರೂ ಸಂಶಯ ಇದ್ದರೆ ಹೇಳಿ ಎಂದಾಗ ಮೃತ ವಿದ್ಯಾರ್ಥಿಯ ತಾಯಿ ಜಯಶ್ರೀ ಗೌಡ ಅವರು ಎಲ್ಲ ಶಿಕ್ಷಕರ ಮೇಲೆ ಪ್ರಕರಣದಾಖಲಿಸುತ್ತೇನೆ ಎಂದು ಹೇಳಿದರು. ಅದಕ್ಕೆ ಅವರು ಒಪ್ಪಿಗೆ ನೀಡಿ ಇನ್ನು ಒಂದು ವಾರದೊಳಗೆ ತನಿಖೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ ಮೇಲೆ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಮೋಹನ ಗೌಡ, ಭಾಸ್ಕರ ಪಟಗಾರ, ವಿನಾಯಕ ಪಟಗಾರ, ಶ್ರೀಧರ ಗೌಡ, ಮಹೇಶ ಗೌಡ, ಮಹಾಬಲೇಶ್ವರಗೌಡ, ಸುಮ ಗೌಡ, ಪದ್ಮಾವತಿಗೌಡ, ಸೀತಾರಾಮ ಗೌಡ, ಅಣ್ಣಪ್ಪಗೌಡ, ವಿ.ಆರ್.ಗೌಡ, ಮಂಜುನಾಥಗೌಡ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ತಿಮ್ಮಪ್ಪ ಎಂ.ಕೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಜೆಡಿಎಸ್ ಮುಖಂಡ ಉಪೇಂದ್ರ ಪೈ, ಎನ್‌ಎಸ್‌ಯುಐನ ವಿಶ್ವಗೌಡ ಇತರರಿದ್ದರು. ಸ್ಥಳದಲ್ಲಿ ಸಿದ್ದಾಪುರ ಸಿಪಿಐ ಜೆ.ಬಿ.ಸೀತಾರಾಮ, ಪಿಎಸ್‌ಐ ನಾಗಪ್ಪ, ಶಾಂತಿನಾಥ ಪಾಸನೆ ಹಾಗೂ ಸಿಬ್ಬಂದಿಗಳಿದ್ದರು.

About the author

Adyot

Leave a Comment