ಮೇಕೆದಾಟು ಯೋಜನೆಗೆ ಅರಣ್ಯ ಭೂಮಿಗೆ ಪರ್ಯಾಯವಾಗಿ ಉ.ಕ.ಜಿಲ್ಲೆಯ ಕಂದಾಯ ಭೂಮಿ ನೀಡಲು ನಿರ್ಧಾರ

ಆದ್ಯೊತ್ ಸುದ್ದಿನಿಧಿ:
ಮೇಕೆದಾಟು ಯೋಜನೆಯ ಅರಣ್ಯ ಭೂಮಿಗೆ ಪರ್ಯಾಯವಾಗಿ ಉತ್ತರಕನ್ನಡ ಜಿಲ್ಲೆಯ ಕಂದಾಯ ಭೂಮಿ ಕೊಡುವ ಪ್ರಕ್ರೀಯೆ ಸರ್ಕಾರ ಪ್ರಾರಂಭಿಸಿರುವುದು ಜಿಲ್ಲೆಯ ಜನರು ನಿರಾಶ್ರಿತರಾಗುವ ಎಲ್ಲಾ ಸಾಧ್ಯತೆಗಳೂ ಇದೆ.


ಈ ಕುರಿತು ಮಾತನಾಡಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಮೇಕೆದಾಟು ಯೋಜನೆಯ ಅರಣ್ಯ ಭೂಮಿಗೆ ಪರ್ಯಾಯವಾಗಿ ಉತ್ತರಕನ್ನಡ ಜಿಲ್ಲೆಯ ಕಂದಾಯ ಭೂಮಿ ಕೊಡುವ ಪ್ರಕ್ರೀಯೆ ಪ್ರಾರಂಭಿಸಿರುವ ಸರಕಾರದ ನಡೆ
ಖಂಡನಾರ್ಹವಾಗಿದ್ದು ಜಿಲ್ಲೆಯಲ್ಲಿ ಭೂಮಿ ಇಲ್ಲದೇ ಜನರು
ನಿರಾಶ್ರೀತವಾಗುತ್ತಿರುವ ಸಂದರ್ಭದಲ್ಲಿ ಈ ಯೋಜನೆಗೆ ಜಿಲ್ಲೆಯ ಕಂದಾಯ ಭೂಮಿ ನೀಡುವ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಸರಿಯ ಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯ ೧೫೧೩ ಅರಣ್ಯವಾಸಿಯ ಸಾವಿರಾರು ಹಂಗಾಮಿ ಲಾಗಣಿದಾರರಿಗೆ ಭೂಮಿ ಹಕ್ಕು ನೀಡಲು ಅರಣ್ಯಕ್ಕೆ ಪರ್ಯಾಯ ಕಂದಾಯ ಭೂಮಿ ಸೂಚಿಸದ ಜಿಲ್ಲಾಡಳಿತ ,ಮೇಕೇದಾಟು ಯೋಜನೆಗೆ ಜಿಲ್ಲೆಯ ಕಂದಾಯ ಭೂಮಿ ನೀಡುವ ಪ್ರಕ್ರೀಯೆಗೆ ಚಾಲನೆ ನೀಡುತ್ತೀರುವುದು ವಿಷಾಧಕರ. ೮೪ ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳನ್ನ ಭೂಮಿ ಹಕ್ಕಿನಿಂದ ವಂಚಿತರಾಗುವ ಸಂದರ್ಭದಲ್ಲಿ ಇರುವಂತ ಕಂದಾಯ ಭೂಮಿನ್ನು ಯೋಜನೆಗೆ ಪರಿವರ್ತಿಸುವ ಔಚಿತ್ಯವೇನು? ಮೇಕೇದಾಟು ಯೋಜನೆಗೆ ಸುಮಾರು ೧೨ ಸಾವಿರ ಹೆಕ್ಟೇರ್ ಅರಣ್ಯ ಭೂಮಿ ನಾಶವಾಗುವುದರಿಂದ, ಅಷ್ಟೇ ಪ್ರಮಾಣದ ಕಂದಾಯ ಭೂಮಿ ಅರಣ್ಯಕ್ಕೆ ಹಸ್ತಾಂತರಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ರಾಮನಗರ, ಮಂಡ್ಯ, ಚಾಮರಾಜನಗರ, ದಕ್ಷಿಣಕನ್ನಡ, ಶಿವಮೊಗ್ಗದಲ್ಲಿ ಅರಣ್ಯಕ್ಕೆ ಪರ್ಯಾಯ ಭೂಮಿಯಾಗಿ, ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ವರ್ಗಾಯಿಸುವ ಕಾರ್ಯ ಪ್ರಾರಂಭವಾಗಿದೆ. ಈ ಪ್ರಕ್ರೀಯೆಯಲ್ಲಿ ಉತ್ತರಕನ್ನಡ ಜಿಲ್ಲೆಯು ಶೇ. ೮೦ ರಷ್ಟು ಅರಣ್ಯ ಪ್ರದೇಶ ಹೊಂದಿರುವಂತಹ ಜಿಲ್ಲೆಯಿಂದಲೂ ಕಂದಾಯ ಭೂಮಿ ಅರಣ್ಯಕ್ಕೆ ವರ್ಗಾಯಿಸುವ ಪ್ರಕ್ರಿಯೆ ವಿಧಿ ವಿಧಾನ ಪ್ರಾರಂಭವಾಗಿರುವುದು ತಿಳಿದು ಬಂದಿದೆ.

ಮೇಕೇದಾಟು ಯೋಜನೆಗೆ ೯ ಸಾವಿರು ಕೋಟಿ ವೆಚ್ಚವಾಗುವ ಆಣೆಕಟ್ಟು ನಿರ್ಮಾಣದಿಂದ ಕರ್ನಾಟಕದಿಂದ ಪರಿಷ್ಕೃತ ಡಿಪಿಆರ್ ಯೋಜನೆಗೆ ೮.೯೦ ಲಕ್ಷ ಮರಕಡಿಯಲಾಗುವುದೆಂಬ ವರದಿಯಲ್ಲಿ ಉಲ್ಲೇಖವಾಗಿದೆ .ಈ ಯೋಜನೆಗೆ ರಾಜ್ಯ ಸರ್ಕಾರವು ವಿವಿಧ ಜಿಲ್ಲೆಗಳಿಂದ ಅರಣ್ಯಕ್ಕೆ ಬದಲಾಗಿ ೧೨.೬ ಸಾವಿರ ಎಕರೆ ಪ್ರದೇಶ ಕಂದಾಯ ಭೂಮಿ ಪರ್ಯಾಯವಾಗಿ ಕೊಡಲು ಕಾರ್ಯ ಪ್ರವೃತ್ತವಾಗಿದೆ ಮೇಕೇದಾಟು ಯೋಜನೆಯ ಸಾಧಕ ಭಾಧಕ ಕುರಿತು ಹೋರಾಟಗಾರರ ವೇದಿಕೆಯು ಚರ್ಚಿಸದೇ, ಜಿಲ್ಲೆಯಲ್ಲಿರುವಂತ ಜನರಿಗೆ , ಜನರ ಬದುಕಿಗೆ ಮತ್ತು ಸಾಗುವಳಿಗೆ ಭೂಮಿ ಇಲ್ಲದಿರುವಂತ ಸಂದರ್ಭದಲ್ಲಿ ಹಾಗೂ ೧೯೭೮ ರ ಪೂರ್ವ , ಹಂಗಾಮಿ ಲಾಗಣಿದಾರರಿಗೆ ಕಾನೂನುಭದ್ದ ಹಕ್ಕು ಪತ್ರ ನೀಡಲು ಕೇಂದ್ರ ಸರ್ಕಾರಕ್ಕೆ ಪರ್ಯಾಯ ಭೂಮಿ ಕೊಡಲು ಸಾಧ್ಯವಾಗದ ಸಂದರ್ಭದಲ್ಲಿ ಸರ್ಕಾರದ ಇಂತಹ ಪ್ರಯತ್ನ ಎಂದು ರವೀಂದ್ರ ನಾಯ್ಕ ಮಾಹಿತಿ ನೀಡಿದ್ದಾರೆ.

ಜಿಲ್ಲಾಡಳಿತ ನೇರತಿರಸ್ಕರಿಸಲಿ:
ಜಿಲ್ಲೆಯ ಬೌಗೋಳಿಕವಾಗಿ ಶೇ. ೮೦ ರಷ್ಟು ಅರಣ್ಯದಿಂದ ಆವೃತ್ತವಾಗಿರುವ ಜಿಲ್ಲೆಯಲ್ಲಿ ಇರುವಂತ ಕಂದಾಯ ಭೂಮಿಯನ್ನು ಆರಣ್ಯ ಪ್ರದೇಶಕ್ಕೆ ಮಾರ್ಪಡಡಿಸಿ ಅರಣ್ಯ ಪ್ರಮಾಣ ಹೆಚ್ಚಿಸಲು ಸರ್ಕಾರ ಹೋರಟಿರುವುದು ಆಶ್ಚರ್ಯಕರವಾಗಿದ್ದು ಬೇರೆ ಜಿಲ್ಲೆಯ ಯೋಜನೆಗೆ ಅರಣ್ಯ ಭೂಮಿ ಪರಿವರ್ತನೆಗೆ ಉತ್ತರಕನ್ನಡ ಜಿಲ್ಲೆಯ ಕಂದಾಯ ಭೂಮಿ ನೀಡುವಂತ ವಿಚಾರವನ್ನು ಜಿಲ್ಲಾಡಳಿತ ನೇರವಾಗಿ ತಿರಸ್ಕರಿಸಬೇಕು
ಎಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

About the author

Adyot

Leave a Comment