ಸಿದ್ದಾಪುರದಲ್ಲಿ ಬಿಜೆಪಿಯಿಂದ “ನಮ್ಮ ಮನೆ ನಮ್ಮ ಹಕ್ಕು” ಜನಾಗ್ರಹ ಆಂದೋಲನ

ಆದ್ಯೊತ್ ಸುದ್ದಿನಿಧಿ
ಸರಕಾರವು ಇತ್ತೀಚೆಗೆ ಅರಣ್ಯ ಭೂಮಿ,ಬೆಟ್ಟಭೂಮಿ,ಸರಕಾರಿ ಭೂಮಿ,ಗಾಂವಠಾಣಾಮುಂತಾದ ಸ್ಥಳಗಳಲ್ಲಿ ನಿರ್ಮಿಸಲಿರುವ ವಸತಿ ಸಮುಚ್ಚಯದಿಂದ ಆಸ್ತಿ ತೆರಿಗೆ ಸ್ವೀಕರಿಸಿದಂತೆ ಆದೇಶವನ್ನು ಹೊರಡಿಸಿದ್ದು
ಇದಕ್ಕೆ ಮಾರ್ಗಸೂಚಿಯನ್ನೂ ಕಳುಹಿಸಿದೆ ಇದರಿಂದ ಜಿಲ್ಲೆಯ
ಬಹುತೇಕ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಅಲ್ಲದೆ ನಿರಾಶ್ರೀತರಾಗುವ ಭಯವಾಗುತ್ತಿದ್ದು ಇದನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಸಿದ್ದಾಪುರ ತಾಲೂಕಿನ ಕವಂಚೂರು ಗ್ರಾಮಪಂಚಾಯತ್ ಎದುರು ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಹಿತ್ತಲಕೊಪ್ಪ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು
ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ತಿಮ್ಮಪ್ಪ ಹಿತ್ತಲಕೊಪ್ಪ, ವಸತಿಗೆ ಸಂಬಂಧಿಸಿದಂತೆ ಸರಕಾರವು ಇತ್ತೀಚೆಗೆ ಒಂದು ಆದೇಶವನ್ನು ಮಾಡಿದ್ದು ಸರಕಾರಿ ಭೂಮಿ ಸೇರಿದಂತೆ ಅಧಿಕೃತವಲ್ಲದ ಭೂಮಿಯಲ್ಲಿ ವಸತಿ ಇರುವವರಿಂದ ಆಸ್ತಿಕರ ತೆಗೆದುಕೊಳ್ಳುವುದು ಬೇಡ ಎಂದು ಸೂಚಿಸಿದೆ. ನಮ್ಮ ತಾಲೂಕಿನಲ್ಲಿ ಹೆಚ್ಚಿನ ವಸತಿಗಳು ಸರಕಾರಿ ಭೂಮಿಗಳಲ್ಲೆ ಇದೆ ಈಗಾಗಲೇ ಇವುಗಳಿಗೆ ಮನೆನಂ. ಇದ್ದು ಇದರಿಂದ ಹಲವು ಸೌಲಭ್ಯಗಳನ್ನು ಪಡೆದಿರುತ್ತಾರೆ ಆದರೆ ಸರಕಾರದ ಈ ಆದೇಶದಿಂದ ಸರಕಾರದ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ.
ಇಲ್ಲಿಯ ಬಹುತೇಕ ಜನರು ನಿರಾಶ್ರೀತರಾಗುತ್ತಾರೆ. ಸರಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಇಂತಹ ಆದೇಶವನ್ನು ನೀಡಿರಬೇಕು ಎಂಬ ಅನುಮಾನ ಕಾಡುತ್ತಿದ್ದು ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.


ಬಿಜೆಪಿ ನಿಕಟಪೂರ್ವ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಮಾತನಾಡಿ, ತಾಲೂಕಿನಲ್ಲಿರುವ ರೈತ ಸಂಘಟನೆಗಳು ಕೇವಲ ನಾಮಕಾವಸ್ತೆಯಲ್ಲಿದೆ. ಜಿಲ್ಲೆಯಲ್ಲಿ ಹೆಚ್ಚಿನ ವಸತಿಗಳು ಸರಕಾರಿ ಭೂಮಿಯಲ್ಲಿದೆ ಈಗಾಗಲೇ ಹಲವು ಯೋಜನೆಗಳಿಂದ ಜಿಲ್ಲೆಯ ಜನರು ನಿರಾಶ್ರೀತರಾಗಿದ್ದಾರೆ ಈಗ ಸರಕಾರದ ಈ ಆದೇಶದಿಂದ ಇನ್ನಷ್ಟು ನಿರಾಶ್ರೀತರಾಗುತ್ತಾರೆ
ಸರಕಾರದ ಇಂತಹ ಆದೇಶದ ಬಗ್ಗೆ ಶಾಸಕರು ಧ್ವನಿ ಎತ್ತುತ್ತಿಲ್ಲ ಈ ಕುರಿತು ಬಿಜೆಪಿಯು ದೊಡ್ಡಮಟ್ಟದ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಪ್ರದಾನ ಕಾರ್ಯದರ್ಶಿ ತೋಟಪ್ಪ ನಾಯ್ಕ ಮಾತನಾಡಿ,ಕಳೆದ ಮೂರೂವರೆ ವರ್ಷದಿಂದ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳೂ ಬಂದಿಲ್ಲ ಶಾಲೆಗಳ ಕೊಠಡಿಗಳು ಬಿದ್ದು ಹೋಗುತ್ತಿದೆ. ಆಸ್ಪತ್ರೆಯಲ್ಲಿ ವೈದ್ಯರೂ,ಸಿಬ್ಬಂದಿಗಳೂ ಇಲ್ಲ,ಗ್ಯಾರಂಟಿ ಯೋಜನೆಗಳು ಸರಿಯಾಗಿ ಬರುತ್ತಿಲ್ಲ ಬಡವರ ಪರವಾಗಿ ಇರುವ ಶಾಸಕ ತಾನೆಂದು ಹೇಳಿಕೊಳ್ಳುವ ಶಾಸಕರಿಗೆ ಈ ಬಗ್ಗೆ ಗಮನವಿಲ್ಲವೇ?ನಮ್ಮ ಶಾಸಕರಿಗೆ ಈ ಬಗ್ಗೆ ಅರಿವಿಲ್ಲ ಸರಕಾರ ಅಧಿವೇಶನದಲ್ಲಿ ಈ ಬಿಲ್ ಪಾಸಾಗುವಾಗ ನಮ್ಮ ಶಾಸಕರು ಏನು ಮಾಡುತ್ತಿದ್ದರು? ಈಗ ಮನವಿ ಕೊಡುತ್ತೇವೆ ಎಂಬ ಮಾತನಾಡುತ್ತಾರೆ. ತಾನು ಬಡವರ ಪರ ಎಂದು ಹೇಳುವ ಶಾಸಕರು ಇಲ್ಲಿಯವರೆಗೆ ಎಷ್ಟು ಮನೆಗಳನ್ನು ತಂದಿದ್ದಾರೆ ಹಿಂದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಐದು ಸಾವಿರ ಮನೆಗಳನ್ನು ಕ್ಷೇತ್ರಕ್ಕೆ ತಂದಿದ್ದಲ್ಲದೆ ಹಿಂದೆ ಮನೆನಂ. ಇರುವವರಿಗೆಲ್ಲರಿಗೂ ಮನೆ ಸಿಗುವಂತೆ ಮಾಡಿದ್ದರು. ಹಾಲಿ ಶಾಸಕರು ಈ ಬಗ್ಗೆ ಧ್ವನಿ ಎತ್ತದಿದ್ದರೆ ಮುಂದಿನ ದಿನಗಳಲ್ಲಿ ಶಾಸಕರು ತಾಲೂಕಿಗೆ ಭೇಟಿ ನೀಡಲು ನಾವು ಬಿಡುವುದಿಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಮಂಜುನಾಥ ಭಟ್ಟ, ಮಾಜಿ ಜಿಪಂ ಸದಸ್ಯ ಈಶ್ವರ ನಾಯ್ಕ,ಜಿ.ಕೆ.ನಾಯ್ಕ ಕೊಪ್ಪ,ಮಂಜುನಾಥ ನಾಯ್ಕ ಕಲ್ಲೂರು,ರಾಘವೇಂದ್ರ ಚೌಡ ಮಡಿವಾಳ ಹಿತ್ತಲಕೊಪ್ಪ
,ಸುರೇಶ ಬಾಲಿಕೊಪ್ಪ,ಲಕ್ಷ್ಮಣ ನಾಯ್ಕ ಮುಂತಾದವರು ಭಾಗವಹಿಸಿದ್ದರು

About the author

Adyot

Leave a Comment