ಆದ್ಯೊತ್ ಸುದ್ದಿನಿಧಿ:
ಆಯುರ್ವೇದ ಮತ್ತು ಯೋಗದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಸೂಚನೆಯಂತೆ ಸೆ. ೨೩ ರಂದು ಸಿದ್ದಾಪುರ ಧನ್ವಂತರಿ ಆಯುರ್ವೇದ ಮಹಾವಿದ್ಯಾಲ ಮತ್ತು ಸಂಶೋದನಾ ಕೇಂದ್ರದಲ್ಲಿ ಆಯುರ್ವೇದ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ


ಈ ಕುರಿತು ಮಾಹಿತಿ ನೀಡಿದ ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷ ಶಶಿಭೂಷಣ ಹೆಗಡೆ,ಆಯುರ್ವೇದ ಮತ್ತು ಯೋಗದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯುರ್ವೇದ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಉತ್ತರಕನ್ನಡಜಿಲ್ಲೆಯಲ್ಲಿರುವ ಏಕೈಕ ಆಯುರ್ವೇದ ಮಹಾವಿದ್ಯಾಲಯ ಇದಾಗಿರುವುದರಿಂದ ನಮ್ಮ ಮೇಲೆ ವಿಷೇಶ ಜವಾಬ್ದಾರಿ ಇದೆ.ರಾಷ್ಟ್ರೀಯಆಯುರ್ವೇದ ದಿನದಂದು ಆಯುರ್ವೇದ ಮಹಾವಿದ್ಯಾಲಯದಿಂದ ಜಾಥಾ ಹಮ್ಮಿಕೊಳ್ಳಲಾಗಿದೆ.ಸೆ. ೨೩ ರ ಬೆಳಿಗ್ಗೆ ೧೧.೩೦ ರಿಂದ ವೇದಿಕೆ ಕಾರ್ಯಕ್ರಮ ಇರಲಿದ್ದು ೧೨ ಗಂಟೆಗೆಜಾಥಾ ಆರಂಭಗೊಳ್ಳುತ್ತದೆ. ಜಿಲ್ಲಾಧಿಕಾರಿಗಳು ಮತ್ತುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದರು.

ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ರೂಪಾ ಭಟ್ಟ ಮಾತನಾಡಿ,ಆರೋಗ್ಯಕರ ನಾಳೆಗಾಗಿ ಆಯುರ್ವೇದ ಎಂಬ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮುಂದಿನ ಪೀಳಿಗೆ ಆರೋಗ್ಯಕರವಾಗಿರಲು ಆಯುರ್ವೇದ ಬಹಳ ಮುಖ್ಯ. ಜನರಿಗೆ ಈ ಕುರಿತು ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.


ಕಾರ್ಯಕ್ರಮದ ಸಂಯೋಜಕಿ ಡಾ.ನಮಿತಾ ಭಟ್ಟ ಮಾತನಾಡಿ,ರಾಷ್ಟ್ರೀಯಆಯುರ್ವೇದ ದಿನದ ಅಂಗವಾಗಿ ಈಗಾಗಲೇ ಹಲವು ಶಿಬಿರಗಳನ್ನು ಹಮ್ಮಿಕೊಂಡಿದ್ದೇವೆ. ಮಕ್ಕಳಿಗೆ ಆಯುರ್ವೇದವನ್ನು ಪರಿಚಯಿಸುವ ಉದ್ದೇಶದಿಂದ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದೆ.ಯುವಕರಿಗಾಗಿ ಆಯುರ್ವೇದದ ಕುರಿತಾದ ರೀಲ್ಸ್ ಮೇಕಿಂಗ್ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಆಯುರ್ವೇದ ಕೇವಲ ಒಂದುಚಿಕಿತ್ಸಾ ವಿಧಾನವಾಗಿರದೇ ಜೀವನ ಪದ್ಧತಿಯಾಗಿದೆ ಎಂಬುದನ್ನು ಮನವರಿಕೆ ಮಾಡುವ ಅವಶ್ಯಕತೆ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಾಘವೇಂದ್ರ ಎಲ್ ಉಪಸ್ಥಿತರಿದ್ದರು.
