ಸಿದ್ದಾಪುರದಲ್ಲಿ ಅನಂತ ಜನಸ್ಪಂದನ ಕೇಂದ್ರ ಪ್ರಾರಂಭ

ಆದ್ಯೊತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪರಿಹಾರ ಕಲ್ಪಿಸಿಕೊಡುವ ಉದ್ದೇಶದಿಂದ ಅನಂತೆ ಜನ ಸ್ಪಂದನ ಕೇಂದ್ರವನ್ನು
ಪ್ರಾರಂಭಿಸಲಾಗಿದೆ.


ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ
ತಾಲೂಕಿನ ಸಾರ್ವಜನಿಕರಿಗೆ ಅತೀ ಅವಶ್ಯಕವಿರುವ ದಾಖಲಾತಿಗಳನ್ನು ಮಾಡಿಸಲು ಕಚೇರಿಯಿಂದ ಕಚೇರಿಗೆ ಅಲೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ದೂರ ದೂರದ ಊರಿನಿಂದ ತಾಲೂಕು ಕೇಂದ್ರಕ್ಕೆ ಬಂದು ಕೆಲಸವಾಗದೆ ಹೋಗುವಂತಾಗುತ್ತಿದೆ. ಅರ್ಜಿ ಫಾರಂ ಗಳನ್ನು ತುಂಬಲು ಆಗದೆ ಪರದಾಡುವ ಜನರೂ ಇದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸಹಕರಿಸಿ ಪರಿಹಾರ ಕಲ್ಪಿಸಲು ಈ ಕೇಂದ್ರದ ಮೂಲಕ ಪ್ರಯತ್ನಿಸಲಾಗುವುದು. ದೊಡ್ಡ ದೊಡ್ಡ ಅನಾಹುತಗಳಾದಾಗ ಸಾವಿರಾರು ಜನ ಸೇರಿ ಪ್ರತಿಭಟನೆ ಮಾಡುವುದು ನಮಗೆ ಗೊತ್ತೆ ಇದೆ. ಆದರೆ ಜನಸಾಮಾನ್ಯರ ದಿನನಿತ್ಯದ ಸಮಸ್ಯೆಗಳ ಪರಿಹಾರಕ್ಕೆ ಎಲ್ಲಿ ಹೋಗಬೇಕೆಂಬ ಸಮಸ್ಯೆ ಕಾಡುತ್ತದೆ. ಅಂತಹವರ ನೆರವಿಗೆ ನಾವೆಲ್ಲರೂ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.

ವೋಟರ್ ಐಡಿ ಪ್ರಿಂಟ್, ಉದ್ಯಮ ನೊಂದಣಿ, ರೇಷನ್ ಕಾರ್ಡ್ ಆಧಾರ್ ಕಾರ್ಡ್ ಪ್ರಿಂಟ್, ಇ ಶ್ರಮ ಕಾರ್ಡ್, ವಿದ್ಯಾರ್ಥಿ ಬಸ್ ಪಾಸ್.ಸಂಧ್ಯಾ ಸುರಕ್ಷಾ ಯೋಜನೆ,ಪಿ.ಎಂ ಕಿಸಾನ್,ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಹಾಸ್ಟೆಲ್, ಕಾಲೇಜು ಅಪ್ಲಿಕೇಶನ್ ಸೇರಿದಂತೆ ಹಲವು ಸೇವೆಗಳು ಲಭ್ಯವಿದೆ. ಈ ಎಲ್ಲಾ ಸೇವೆಗಳೂ ಉಚಿತವಾಗಿರಲಿದೆ ಹಾಗೂ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಆದಾಯ ಮತ್ತು ಆಸ್ತಿ ಪ್ರಮಾಣ ಪತ್ರ, ಅಂಗವಿಕಲರ ವೇತನ,ಪಾನ್ ಕಾರ್ಡ್ ತಿದ್ದುಪಡಿ ಸೇರಿದಂತೆ ಹಲವು ಸೇವೆಗಳು ಸರ್ಕಾರದ ನಿಗದಿತ ದರಗಳನ್ನು ಒಳಗೊಂಡಿರುತ್ತದೆ ಎಂದು ಅನಂತಮೂರ್ತಿ ಹೆಗಡೆ ಮಾಹಿತಿ ನೀಡಿದರು.


ಪ್ರಾಯೋಗಿಕವಾಗಿ ಈ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು ಮುಂದೆ ಏನೇನು ಸೇವೆಯನ್ನು ಕೊಡಬಹುದು ಯಾವ ರೀತಿ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಪ್ರಯತ್ನಿಸಬಹುದು ಎಂದು ತಿಳಿಯಬೇಕಿದೆ. ಇದೊಂದು ಹೊಸತನದ ಪ್ರಯತ್ನವಾಗಿದೆ. ಮುಂದುವರೆಸುವ ಜವಾಬ್ದಾರಿ ಎಲ್ಲಾ ಮಾಧ್ಯಮಗಳ ಮೇಲಿದೆ. ಮುಂದಿನ ದಿನಗಳಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಿದ್ದಾರೆ ಕಚೇರಿಯಲ್ಲಿ ನುರಿತ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು ಕಾನೂನು ಸಲಹೆ ನೀಡಲು ವಕೀಲರ ಸೇವೆಯನ್ನೂ ಉಚಿತವಾಗಿ ನೀಡಲಾಗುವುದು. ರಜಾ ದಿನ ಹೊರತು ಪಡಿಸಿ ಮುಂಜಾನೆ ೧೦ಗಂಟೆಯಿAದ ಸಂಜೆ ೫.೩೦ರವರೆಗೆ ಕಚೇರಿ ತೆರೆದಿರುತ್ತದೆ. ಸಮಸ್ಯೆ ನಿಮ್ಮದು ಪರಿಹಾರ ನೀಡುವ ಪ್ರಯತ್ನ ನಮ್ಮದು. ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ತಿಮ್ಮಪ್ಪ ಎಂ.ಕೆ. ಅಣ್ಣಪ್ಪ ಶಾನಬಾಳೆಗದ್ದೆ,ಪ್ರದೀಪ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment