ಸಿದ್ದಾಪುರ ನಿಲ್ಕುಂದದಲ್ಲಿ ಕಾಟಾಚಾರಕ್ಕೆ ನಡೆದ ಪ್ರಜಾಸೇವಾ ಆಂದೋಲನ

ಆದ್ಯೊತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಗೇರಿಯಲ್ಲಿ ಪ್ರಜಾಸೇವಾ ಆಂದೋಲನವು ಶಾಸಕರು,ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಹಲವು ಪ್ರಮುಖ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಎರಡನೇ ಶನಿವಾರದಂದು ಅಬ್ಬರದ ಪ್ರಚಾರದಿಂದ ಪ್ರಾರಂಭವಾಗಿತ್ತು. ಆದರೆ ನಾಲ್ಕನೇ ಶನಿವಾರದಂದು ನಿಲ್ಕುಂದ ಗ್ರಾಪಂನಲ್ಲಿ ಆಯೋಜಿಸಲಾಗಿದ್ದ ಎರಡನೇ ಕಾರ್ಯಕ್ರಮದಲ್ಲಿ ಕನಿಷ್ಠ ತಹಸೀಲ್ದಾರರೂ ಇಲ್ಲದೆ ಸಾರ್ವಜನಿಕಕರಿಗೆ ಸರಿಯಾದ ಮಾಹಿತಿಯನ್ನೂ ನೀಡದೆ ಕಾಟಾಚಾರಕ್ಕೆ ನಡೆಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.


ಪಶ್ಚಿಮಪದವೀಧರ ಕ್ಷೇತ್ರದ ಚುನಾವಣೆಯು ಘೋಷಣೆಯಾಗಿದ್ದು ಚುನಾವಣಾ ನೀತಿಸಂಹಿತೆ ಜಾರಿಯಾದ್ದರಿಂದ ಶಾಸಕರು ಭಾಗವಹಿಸುವಂತಿರಲಿಲ್ಲ. ಸಭೆಯನ್ನು ನಡೆಸಬೇಕೋ ಬೇಡವೋ ಎಂಬ ಗೊಂದಲ ಅಧಿಕಾರಿವರ್ಗದಲ್ಲಿತ್ತು. ಹೀಗಾಗಿ ಸಾರ್ವಜನಿಕರಿಗೆ ತಿಳಿಸುವ,ಪ್ರಚಾರ ಮಾಡುವ ಗೋಜಿಗೆ ಪಂಚಾಯತ್‌ನವರು ಮಾಡಲಿಲ್ಲ,ತಾಲೂಕು ಆಡಳಿತವೂ ಮಾಡಲಿಲ್ಲ. ಪತ್ರಕರ್ತರಿಗೂ ಯಾವುದೇ ಮಾಹಿತಿ ನೀಡಲಿಲ್ಲ. ಆದರೆ ಶುಕ್ರವಾರ ರಾತ್ರಿ ಎಂಟುಗAಟೆಗೆ ಸಭೆ ನಡೆಸುವಂತೆ ಹಿರಿಯ ಅಧಿಕಾರಿಗಳಿಂದ ಸೂಚನೆ ಬಂದಿತ್ತು ಜನರ ಸಮಸ್ಯೆಯ ಅರ್ಜಿಯನ್ನು ತೆಗೆದುಕೊಳ್ಳಬಹುದು ಆದರೆ ಯಾವುದೇ ಪರಿಹಾರವನ್ನು ನೀಡುವವುದು ಬೇಡ ಎಂಬ ಆದೇಶವೂ ಇತ್ತು ಎನ್ನುತ್ತಾರೆ ಕಂದಾಯ ಇಲಾಖೆಗೆ ಸೇರಿದ ಕೆಲವು ಅಧಿಕಾರಿಗಳು.

ನಿಲ್ಕುಂದ ಎಂಬ ತಾಲೂಕಿನ ಕಟ್ಟಕಡೆಯ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಹುಡುಕಬೇಕಾದ ಸ್ಥಿತಿ ಇದೆ. ಇಲ್ಲಿ ಯಾವುದೇ ಮೊಬೈಲ್‌ಗಳು ಕಾರ್ಯನಿರ್ವಹಿಸುವುದಿಲ್ಲ ನೆಟ್‌ವರ್ಕ್ ಸಮಸ್ಯೆ ಯಾವಾಗಲೂ ಇರುತ್ತದೆ ಹೀಗಿದ್ದರೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ತನಗೆ ಲಭ್ಯವಿದ್ದ ಒಂದಿಷ್ಟು ಜನರಿಗೆ ಸಭೆಯ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಸಭ ನಡೆಯುತ್ತಿರುವ ವಿಷಯ ತಿಳಿದು ಸಭೆ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಒಂದಿಷ್ಟು ಸಾರ್ವಜನಿಕರು ಸಭೆಯ ಔಚಿತ್ಯವನ್ನು ಪ್ರಶ್ನಿಸಿದರು. ಕೇವಲ ಸಮಸ್ಯೆಗಳ ಅರ್ಜಿ ಒಯ್ಯುವುದಾದರೆ ಇಲ್ಲಿ ಸಭೆ ನಡೆಸುತ್ತಿರುವುದು ಯಾತಕ್ಕೆ ಎಂದು ಪ್ರಶ್ನಿಸಿದರು. ಜನರನ್ನು ಸಮಾಧಾನ ಪಡಿಸುವ ಕೆಲಸಕ್ಕೆ ಕೆಲವು ಅಧಿಕಾರಿಗಳು ಮುಂದಾಗಿದ್ದಾರೆ. ಜನರ ಸಮಸ್ಯೆ ಸುಲಭದಲ್ಲಿ ಬಗೆಹರಿಸಲು ಮುಂದಾಗಿರುವ ಸರಕಾರದ ಉತ್ತಮ ಯೋಜನೆ ಅದಿಕಾರಿಗಳ ಬೇಜವಾಬ್ದಾರಿ ತನದಿಂದ ಹಳ್ಳಹಿಡಿಯುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಪ್ರಜಾಸೇವಾ ಆಂದೋಲನದಂತಹ ಜನಪ್ರಿಯ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಮಂಜಸವಲ್ಲ. ಚುನಾವಣೆ ಮುಗಿದ ನಂತರ ಕಾರ್ಯಕ್ರಮವನ್ನು ಮುಂದುವರಿಸಬಹುದಿತ್ತು ಹಿರಿಯಅಧಿಕಾರಿಗಳು ಸರಕಾರದ ಮುಖ್ಯಸ್ಥರನ್ನು ಮೆಚ್ಚಿಸಲು ಮುಂದಾಗಿರುವುದು ಸ್ಪಷ್ಟವಾಗುತ್ತದೆ.ಹಿರಿಯ ಅಧಿಕಾರಿಗಳ ಈ ಗೊಂದಲದ ನಿರ್ಣಯದಿಂದಾಗಿ ನೆಟ್ವರ್ಕ್ ವ್ಯವಸ್ಥೆಯೂ ಇಲ್ಲದ ನಿಲ್ಕುಂದ ಗ್ರಾಮದಲ್ಲಿ ಪ್ರಜಾ ಸೇವೆ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಲಾಖೆ ಅಧಿಕಾರಿಗಳಿಗೂ ಬೇಸರ ಮೂಡಿಸಿದೆ.

ಈ ಕುರಿತು ಆದ್ಯೊತ್ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಶಾಸಕ ಭೀಮಣ್ಣ ನಾಯ್ಕ,ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವಾಗ ಪ್ರಜಾಸೇವಾ ಆಂದೋಲನ ನಡೆಸುವುದು ಬೇಡ ಎಂದು ನಾನು ತಹಸೀಲ್ದಾರರಿಗೆ ಸೂಚಿಸಿದ್ದೆ ಆದರೆ ಆಧಿಕಾರಿಗಳ ಆದೇಶ ಎಂದು ಅವರು ಈ ಸಭೆಯನ್ನು ನಡೆಸಲು ಮುಂದಾಗಿದ್ದಾರೆ ಆದರೆ ತಹಸೀಲ್ದಾರರೇ ಸಭೆಯಲ್ಲಿ ಇಲ್ಲದಿರುವುದು ತಪ್ಪು. ನಿಲ್ಕುಂದದAತಹ ಗ್ರಾಮದಲ್ಲಿ ಪ್ರಜಾಸೇವಾ ಆಂದೋಲನದAತಹ ಜನಪರ ಕಾರ್ಯಕ್ರಮವನ್ನು ಸರಿಯಾದ ತಯಾರಿಇಲ್ಲದೆ ನಡೆಸಬಾರದು ಎಲ್ಲಾ ಸೌಲಭ್ಯವನ್ನು ಸರಿಪಡಿಸಿಕೊಂಡು ನಂತರ ಇಂತಹ ಕಾರ್ಯಕ್ರಮ ಮಾಡಬೇಕು ಮುಂದಿನದಿನಗಳಲ್ಲಿ ಸರಿಯಾದ ತಯಾರಿಯಿಲ್ಲದೆ ಕಾರ್ಯಕ್ರಮ ನಡೆಸಲು ಮುಂದಾದರೆ ಸೂಕ್ತ ಕ್ರಮಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ

About the author

Adyot

Leave a Comment