ಆದ್ಯೊತ್ ಸುದ್ದಿನಿಧಿ:
ರಾಜ್ಯ ಸರ್ಕಾರದ ಜನವಿರೋಧಿ ಆಸ್ತಿ ತೆರಿಗೆ ಮಾರ್ಗಸೂಚಿ ವಿರುದ್ಧ ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಹಿತ್ತಲಕೊಪ್ಪ ನೇತೃತ್ವದಲ್ಲಿ
ಸೆ.30 ಬುಧವಾರ ಸಿದ್ದಾಪುರ ತಹಸೀಲ್ದಾರ ಕಚೇರಿಯ ಎದುರು ಬೃಹತ್
ಧರಣಿ ಹಾಗೂ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.


ಈ ಕುರಿತು ಮಾಹಿತಿ ನೀಡಿರುವ ತಿಮ್ಮಪ್ಪ ಎಂ.ಕೆ.
ಕಾಂಗ್ರೇಸ್ ಸರ್ಕಾರವು ಆಗಸ್ಟ್ 13, ರಂದು ಹೊರಡಿಸಿರುವ ಆದೇಶದಿಂದ ನಮ್ಮ ಭಾಗದ ಜನರ ತಲೆತಲಾಂತರದ ಶ್ರಮ, ಬೇರು ಮತ್ತು ಮನೆ-ಮಠಗಳನ್ನು ನಾಶಪಡಿಸುವ ಗಂಡಾಂತರ ತಂದೊಡ್ಡಿದೆ. ಅರಣ್ಯ, ಬೆಟ್ಟ, ಸರ್ಕಾರಿ ಭೂಮಿ ಹಾಗೂ ಗ್ರಾಮಠಾಣ ಪ್ರದೇಶಗಳಲ್ಲಿ ರಕ್ತ-ಬೆವರು ಹರಿಸಿ ಜೀವನ ಕಟ್ಟಿಕೊಂಡಿರುವ ಬಡವರ ಮನೆಗಳ ಆಸ್ತಿ ತೆರಿಗೆ ರಸೀದಿಗಳನ್ನು ರದ್ದುಗೊಳಿಸಿ, ಅವರನ್ನು ಕಾಗದದ ಮೇಲೆಯೇ ಅನಾಥರನ್ನಾಗಿ ಮಾಡಲು ಈ ಸರ್ಕಾರ ಸಂಚು ರೂಪಿಸಿದೆ. ಇದರಿಂದ ತಾಲೂಕಿನ ಬಹುತೇಕ ಜನರು ನಿರಾಶ್ರಿತರಾಗಲಿದ್ದಾರೆ. ಸರಕಾರ ಈ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ವಿವಿಧ ರೈತ ಸಂಘಟನೆಗಳು,ಸಾಮಾಜಿಕ ಸಂಘಟನೆಗಳು,ಈ ಹೋರಾಟಕ್ಕೆ ಕೈಜೋಡಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ
