ಸಂಕಷ್ಟದಲ್ಲಿ ರಾಜ್ಯದ ಪೊಲೀಸ್ ರು

ಆದ್ಯೋತ್ ಸುದ್ದಿನಿಧಿ:
ರಾಜ್ಯದಲ್ಲಿ ಕೊವಿಡ್19 ಅಬ್ಬರ ಹೆಚ್ಚಾಗುತ್ತಿದೆ.ಲಾಕ್ ಡೌನ್ ಸಡಿಲಗೊಳಿಸಿ ಸಂಚಾರ ವ್ಯವಸ್ಥೆ ಪ್ರಾರಂಭಗೊಳಿಸಿದಾಗಲೇ ಕೊವಿಡ್ ಪ್ರಕರಣ ಹೆಚ್ಚಾಗತೊಡಗಿತ್ತು.ಈಗ ರೇಲ್ವೆ ಸಂಚಾರವೂ ಪ್ರಾರಂಭವಾಗುವುದರೊಂದಿಗೆ ಇನ್ನಷ್ಟು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.
ಈಗಾಗಲೇ ಕೊವಿಡ್ ವಾರಿಯಸ್೯ ಮೇಲೆ ಕೊವಿಡ್ ಆಕ್ರಮಣ ನಡೆಸುತ್ತಿದ್ದು ವೈದ್ಯಕೀಯ ಸಿಬ್ಬಂದಿ,ಆಶಾಕಾರ್ಯಕರ್ತೆ ಯರು ಕೆಲವು ಪ್ರಮಾಣದಲ್ಲಿ ರೋಗಕ್ಕೆ ತುತ್ತಾಗುತ್ತಿದ್ದಾರೆ ಆದರೆ ಹೆಚ್ಚನ ಸಂಖ್ಯೆಯಲ್ಲಿ ಪೊಲೀಸ್ ರು ಈ ರೋಗಕ್ಕೆ ತುತ್ತಾಗಿತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕೊವಿಡ್ ಪ್ರಾರಂಭವಾದಾಗಿನಿಂದ ಆರೋಗ್ಯ ಇಲಾಖೆಯವರಷ್ಟೆ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು ಪೊಲೀಸ್ ಇಲಾಖೆ..
ತಮ್ಮ ನಾಯಕರು ಹೇಳಿದ್ದಕ್ಕಾಗಿ ಜನರು ಲಾಕ್ ಡೌನ್ ಪಾಲಿಸಿದರು ಎಂದು ಆಡಳಿತ ನಡೆಸುವವರು ತಮ್ಮ ಬೆನ್ನು ತಾವೆ ತಟ್ಟಿಕೊಳ್ಳುತ್ತಿರಬಹುದು ಆದರೆ ಲಾಕ್ ಡೌನ್-1,2,3,4
ಯಶಸ್ಸಾಗಲು ಪೊಲೀಸ್ ಇಲಾಖೆಯ ಕೊಡುಗೆಅಪಾರವಾದುದು
ಎನ್ನುವುದನ್ನು ಯಾರೂ ಅಲ್ಲಗಳೆಯುವುದಿಲ್ಲ.

ರಾಜಕಾರಣಿಗಳು,ಆಡಳಿತ ನಡೆಸುವವರು ಎಷ್ಟೇ ಒತ್ತಡ ತಂದರೂ ಅದನ್ನು ಮೆಟ್ಟಿ ನಿಂತು ತಮ್ಮ ಕರ್ತವ್ಯ ನಿಭಾಯಿಸಿದರು.
ಸೀಲ್ ಡೌನ್ ಸಂದರ್ಭದಲ್ಲಿ ಮತಾಂಧರಿಂದ ಹಲ್ಲೆಯಾದರೂ ತಾಳ್ಮೆ ಕಳೆದುಕೊಳ್ಳಲಿಲ್ಲ.
ಜಿಲ್ಲಾ ಚೆಕ್ ಪೋಸ್ಟ್ ಗಳಲ್ಲಿರಲಿ,ಅಂತರರಾಜ್ಯ ಚೆಕ್ ಪೊಸ್ಟ್ ಗಳಲ್ಲಿರಲಿ ಹಗಲು-ರಾತ್ರಿ ಎನ್ನದೆ ಕಾವಲು ಕಾದು ಕೊವಿಡ್ ಹರಡದಂತೆ ತಡೆಯುವಲ್ಲಿ ತಮ್ಮ ಅಪಾರ ಕಾಣಿಕೆ ನೀಡಿದರು.
ಸರಕಾರ,ಇಲಾಖೆಗಳು ಬೇರೆ ಬೇರೆ ಕೊವಿಡ್ ವಾರಿಯರ್ಸಗೆ ಹಲವು ಸಹಾಯವನ್ನು ನೀಡಿದರೆ ಚೆಕ್ ಪೊಸ್ಟ್ ನಲ್ಲಿ ರಾತ್ರಿಯೂಕಾರ್ಯ ನಿರ್ವಹಿಸುವ ಪೊಲೀಸ್ ರಿಗೆ ಊಟವನ್ನೂ ನೀಡದೆ ಕೆಲಸ ತೆಗೆಸಿಕೊಳ್ಳಲಾಯಿತು.

ಸರಕಾರ ಕೆಲವು ಇಲಾಖೆಯ ವಾರಿಯಸ್೯ಗೆ ಸಹಾಯಧನವನ್ನು ನೀಡಿತು ಆದರೆ ಪೊಲೀಸ್ ರಿಗೆ ತಿಂಗಳ ಸಂಬಳವನ್ನೂ ನೀಡದೆ
ನಿರ್ಲಕ್ಷಿಸಲಾಗಿದೆ.
ಇದೆಲ್ಲದರ ನಡುವೆ ಕೊವಿಡ್ ಕರ್ತವ್ಯ ಮಾಡುತ್ತಿರುವ ಪೊಲೀಸ್ ರಲ್ಲಿ ಕೊವಿಡ್ ಕಂಡು ಬರುತ್ತಿದ್ದು ಇದು ಆತಂಕಕ್ಕೆಕಾರಣವಾಗಿದೆ.

ರಾಜ್ಯದಲ್ಲಿ ಸುಮಾರು ಎರಡುನೂರಕ್ಕೂ ಹೆಚ್ಚು ಪೊಲೀಸ್ ರಿಗೆ ಕೊವಿಡ್ ಕಾಣಿಸಿಕೊಂಡಿದೆ ಒಂದೆರಡು ಹಿರಿಯ ಅಧಿಕಾರಿಗಳದ್ದಾದರೆ ಹೆಚ್ಚಿನವರು ಸಾರ್ವಜನಿಕರ ಜೊತೆ ನೇರ ಸಂಪರ್ಕದಲ್ಲಿರುವ ಕಾನಸ್ಟೇಬಲ್ ಗಳದ್ದಾಗಿದೆ.
ಕಳೆದ ಮೂರು ತಿಂಗಳಿಂದ ರಜೆಯನ್ನು ಪಡೆಯದೆ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ರ ಬಗ್ಗೆ ಸರಕಾರ ಸಹಾನುಭೂತಿಯಿಂದ ವರ್ತಿಸಬೇಕು,ಒಂದಿಷ್ಟು ಸಹಾಯಧನವನ್ನು ನೀಡುವುದರ ಜೊತೆಗೆ,ಕೊವಿಡ್ ಸಂಬಂಧಿತ ಕಾರ್ಯನಿರ್ವಹಿಸುವ ಪೊಲೀಸ್ ರಿಗೆ ಊಟ-ತಿಂಡಿ ವ್ಯವಸ್ಥೆಯನ್ನಾದರೂ ಮಾಡಬೇಕು,ಕೊವಿಡ್ ಸೊಂಕಿನಿಂದ ಕಾಪಾಡುವ ಸಾಧನಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಬೇಕು.ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 80000 ಪೊಲೀಸ್ ರ ಸ್ವಾಬ್ ಸಹಿತ ಎಲ್ಲಾರೀತಿಯ ಆರೋಗ್ಯ ಪರೀಕ್ಷೆ ನಡೆಸಿ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು.ಎಂದು
ಸಾರ್ವಜನಿಕರ ಆಗ್ರಹವಾಗಿದೆ

About the author

Adyot

Leave a Comment