ನಿರಾತಂಕವಾಗಿ ಪ್ರಾರಂಭವಾದ ಎಸ್.ಎಸ್.ಎಲ್.ಸಿ ಪರೀಕ್ಷೆ

ಆದ್ಯೋತ್ ಸುದ್ದಿನಿಧಿ:
ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ. ಪರೀಕ್ಷೆ ಕೊವಿಡ್ ಆತಂಕದ ನಡುವೆಯೂ ನಿರಾತಂಕವಾಗಿ ಪ್ರಾರಂಭಗೊಂಡಿದೆ
ಎಲ್ಲೆಡೆ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸೇಷನ್‌ ಸೇರಿದಂತೆ ಸಕಲ ಸುರಕ್ಷತಾ ಕ್ರಮಗಳೊಂದಿಗೆ ಸಿದ್ಧತೆಗಳನ್ನು ನಡೆಸಲಾಗಿರುವುದು ಕಂಡುಬಂದಿದೆ.
ಪ್ರೌಢ ಶಿಕ್ಷಣ ಇಲಾಖೆ ಒಂದು ವಾರಗಳಿಂದಲೇ ಸಿದ್ಧತೆ ನಡೆಸಿತ್ತು. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಣ್ಣ ಪುಟ್ಡ ಗೊಂದಲಗಳು ಕಂಡುಬಂದಿದೆ.ಇದನ್ನು ಹೊರತುಪಡಿಸಿದಂತೆ ಎಲ್ಲವೂ ಪೂರ್ವ ಯೋಜನೆಯಂತೆ ಸರಾಗವಾಗಿ ನಡೆಯಿತು.ಪರೀಕ್ಷಾ ಕೇಂದ್ರಗಳ ಬಳಿ ಪೊಲೀಸ್ ಪಹರೆ ಕೂಡ ಹಾಕಲಾಗಿತ್ತು.

ಯಾವುದೇ ತೊಂದರೆ ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸಿದರು. ಥರ್ಮಲ್ ಸ್ಕ್ಯಾನರ್ ಮೂಲಕ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿ ಸ್ಯಾನಿಟರ್ ಬಳಕೆ ಮಾಡಿಸಿ ಮಾಸ್ಕ್ ಧರಿಸಿ ಹೋಗುವಂತೆ ನೋಡಿಕೊಳ್ಳಲಾಗಿತ್ತು.
ಒಟ್ಟಾರೆ ಸುರಕ್ಷಿತ ರೀತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಾರಂಙವಾಗಿದ್ದು ಉಳಿದ ಐದು ಪರೀಕ್ಷೆಗಳು ಇದೇ ರೀತಿಯಲ್ಲಿ ನಡೆಯಲಿ ಎಂದು ಆದ್ಯೋತ್ ನ್ಯೂಸ್ ಹಾರೈಕೆ.
ತಾಯಿ ಮರಣ ಹೊಂದಿದರು ಪರೀಕ್ಷೆ ಬರೆದ ವಿದ್ಯಾರ್ಥಿ
ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕ್ಯಾಸಲರಾಕ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ನಿಲೇಶ ಗಾಂವ್ಕರ್ ತನ್ನ ತಾಯಿ ಮರಣ ಹೊಂದಿದ ನೋವಿನ ನಡುವೆಯೂ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಗುರುವಾರ ಬೆಳಿಗ್ಗೆ ಈ ವಿದ್ಯಾರ್ಥಿಯ ತಾಯಿ ಹೃದಯಾಘಾತದಿಂದ ಮರಣ ಹೊಂದಿದ್ದರು.ಪರೀಕ್ಷೆ ಬರೆಯಬೇಕೋ ಬೇಡವೋ ಎಂದು ಗೊಂದಲದಲ್ಲಿದ್ದ ವಿದ್ಯಾರ್ಥಿಗೆ ನೊಡೆಲ್ ಅಧಿಕಾರಿ ರಮೇಶ ಚೌಧರಿ ವಿದ್ಯಾರ್ಥಿಗೆ ಧೈರ್ಯ ತುಂಬಿ ಅವರ ಪೋಷಕರೊಂದಿಗೆ ಮಾತನಾಡಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಿದ್ದಾರೆ.
ಅಲ್ಲದೆ ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಯನ್ನು ಮನೆಗೆ ತಲುಪಿಸುವ ಕೆಲಸವನ್ನೂ ಮಾಡಿ ಪ್ರಶಂಸೆಗಳಿಸಿದ್ದಾರೆ.

About the author

Adyot

Leave a Comment