ಭಾವೈಕ್ಯಬ್ರಹ್ಮ ಚಲನಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ ಮುಕ್ತಾಯ

ಆದ್ಯೋತ್ ಸುದ್ದಿನಿಧಿ:
ಶ್ರೀ ಅಂಜನಾದ್ರಿ ಸಿನಿ ಪ್ರೊಡಕ್ಷನ್ ಗಂಗಾವತಿ/ಬೆಂಗಳೂರ ಅವರ ಲಿಂಗಸಗೂರು ತಾಲೂಕಿನ ಸುಕ್ಷೇತ್ರ ಅಂಕಲಿಮಠದ ನಿರುಪಾದೀಶ್ವರ ಶರಣರ ಜೀವನ ಚರಿತ್ರೆ ಆಧಾರಿತ ಭಾವೈಕ್ಯಬ್ರಹ್ಮ ಚಲನಚಿತ್ರದ ಚಿತ್ರೀಕರಣದ ಎರಡನೆ ಹಂತದ ಚಿತ್ರೀಕರಣ ಬಾಗಲಕೋಟೆಯ ಸುತ್ತಮುತ್ತಲು ನಡೆದು ಮುಕ್ತಾಯಗೊಂಡಿತು.
ಮಾ.ಆನಂದಅನುರಾಗ,ಸಿದ್ಧನಕೊಳ್ಳದ ಡಾ.ಶಿವಕುಮಾರ ಸ್ವಾಮಿಗಳ ಅಭಿನಯದಲ್ಲಿ “ದರುಶನ ನೀಡಬನ್ನಿ ಕಾದಿಹೆ ಬಾಗಿಲಲಿ”ಎಂಬ ಹಾಡನ್ನು ಸಿದ್ಧನಕೊಳ್ಳದ ಸಿದ್ಧೇಶ್ವರ ಮಠ ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
“ಮುಗಿಲೇರಿ ಕುಣಿವಾ ಬನ್ನಿ ಸಂಕೋಚ ಏತಕೆ ?” ಎನ್ನುವ ಹಾಡಿನ ಚಿತ್ರೀಕರಣವನ್ನು ನಯನಾ ಅಭಿನಯದಲ್ಲಿ ಕೆಲೂರ, ಐಹೊಳೆ,ಗುಳೇದಗುಡ್ಡ ಸುತ್ತಮುತ್ತ ಚಿತ್ರೀಕರಿಸಲಾುತು.

ಇದಲ್ಲದೆ ನಯನಾ,ಮಾ.ಆನಂದ ಅವರ ಹಲವು ಸನ್ನಿವೇಶವನ್ನು ಹುಬ್ಬಳ್ಳಿಯಲ್ಲಿ ಚಿತ್ರೀಕರಣ ಮಾಡಲಾುತು. ಇನ್ನೂ ಎರಡು ಹಾಡುಗಳು ಬಾಕಿ ಇದ್ದು, ಲಿಂಗಸಗೂರು ತಾಲೂಕಿನ ಮುದಗಲ್, ಜಲದುರ್ಗ, ಬಾಗಲಕೋಟ ಜಿಲ್ಲೆಯ ಸಿದ್ಧನಕೊಳ್ಳ,ಕೆಲೂರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗುವುದು.
ಈಗಾಗಲೇ 70% ಚಿತ್ರೀಕರಣ ಮುಗಿಸಲಾಗಿದೆ.ಅಂತಿಮ ಹಂತದ ಚಿತ್ರೀಕರಣ ಇದೇ ತಿಂಗಳಲ್ಲಿ ಆರಂಭವಾಗಲಿದ್ದು ಬಾಗಲಕೋಟ ಜಿಲ್ಲೆಯ ಕೆಲವು ಪ್ರಮುಖ ಸ್ಥಳ,ರಾಯಚೂರು, ಗಂಗಾವತಿ, ಕೊಪ್ಪಳ, ಬೆಂಗಳೂರು, ಬೆಳಗಾವಿ ಜಿಲ್ಲೆಯ ಅಂಕಲಗಿಮಠ ಸುತ್ತಮುತ್ತಲ ನಡೆಯಲಿದೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ.
ನಿರುಪಾಧೀಶ್ವರರ ಮಹಿಮೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ.

ಮಾ.ಆನಂದ ನಿರುಪಾಧೀಶ್ವರರಾಗಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ಮಾಪಕ, ನಿರ್ದೇಶಕ ವಿಜಯಕುಮಾರ ಗದ್ದಿ ತಿಳಿಸಿದ್ದಾರೆ.
ಲಿಂಗಸಗೂರು ತಾಲೂಕಿನ ಅಮರೇಶ್ವರ ರಂಗಭೂಮಿಯ ಕಲಾವಿದರ ಸಂಘದ ಅಧ್ಯಕ್ಷರಾದ ನಿರುಪಾದಿ ಕವಿಗಳ-ಕತೆ ಸಂಭಾಷಣೆ,ಯುವ ಸಂಗೀತ ನಿರ್ದೆಶಕ ಅನುರಾಗ ಗದ್ದಿ-ಸಂಗೀತ,ಕೆ.ಕಲ್ಯಾಣ, ಡಾ.ವಿ.ನಾಗೇಂದ್ರಪ್ರಸಾದ-ಸಾಹಿತ್ಯ ಇರುವ ಚಲನಚಿತ್ರವನ್ನು ವಿಜಯಕುಮಾರ ಗದ್ದಿ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ.
ಶಿವಶರಣ ಸುಗ್ನಳ್ಳಿ ,ರಂಜಿತ್ ತಿಗಡಿ ಗೋವಿಂದರಾಜ್, ಮದನ ಹರಣಿ-ಸಹಕಾರ,ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ ಅವರದಿದೆ.
ಮಾಸ್ಟರ್ ಆನಂದ ನಿರುಪಾದೀಶ್ವರರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು,ಸಿದ್ಧನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮಿಗಳು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕಾಮಿಡಿ ಕಿಲಾಡಿ ಖ್ಯಾತಿಯ ನಯನ,ವಾಣಿಶ್ರೀ,ಜ್ಯೋತಿ ಮುರೂರ,ಅಪೂರ್ವ, ಮಹಾಂತೇಶ ಹಳ್ಳೂರ, ಅಂಜನಪ್ಪ
ಮುಂತಾದ ಪ್ರಮುಖ ಕಲಾವಿದರ ಜೊತೆಗೆ ಉತ್ತರ ಕರ್ನಾಟಕದ ಕಲಾವಿದರು ಅಭಿನಯಿಸುತ್ತಿದ್ದಾರೆ.

About the author

Adyot

Leave a Comment