ಸಿದ್ದಾಪುರ ತಾಲೂಕಾ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸತೀಶ ಹೆಗಡೆ ನೇಮಕ

ಆದ್ಯೋತ್ ಸುದ್ದಿನಿಧಿ:
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ
ಸಿ.ಎಸ್. ಷಡಾಕ್ಷರಿ ಸಿದ್ದಾಪುರ ತಾಲೂಕಾ ನೌಕರರ ಸಂಘದ ಅಧ್ಯಕ್ಷರನ್ನಾ
ಗಿ ಈ ಹಿಂದಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು,ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕನ್ನಳ್ಳಿ ಶಿಕ್ಷಕರು ಆದ ಸತೀಶ ಹೆಗಡೆ ರವರನ್ನು ನೇಮಕ ಮಾಡಿ ಆದೇಶ ನೀಡಿದ್ದಾರೆ.

ಇವರಿಗೆ ನಿಕಟಪೂರ್ವ ಅಧ್ಯಕ್ಷ ರಾಜೇಶ ಆರ್ ನಾಯ್ಕ, ಪದಾಧಿಕಾರಿಗಳು, ಸದಸ್ಯರು, ತಾಲೂಕಿನ ಎಲ್ಲಾ ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಶುಭ ಕೋರಿದ್ದಾರೆ.

ಸತೀಶ ಹೆಗಡೆ ರವರು ಎಲ್ಲಾ ಇಲಾಖೆಗಳ ಉತ್ತಮ ಸಮನ್ವಯತೆಯಿಂದ ಸಹಕಾರ ಪಡೆದು, ಎಲ್ಲಾ ಜನಪ್ರತಿನಿಧಿಗಳು,ಅಧಿಕಾರಿಗಳು, ವಿಶ್ವಾಸ ಪಡೆದು ಸರಕಾರಿ ನೌಕರರ ಸಂಘವನ್ನು ಬಲಪಡಿಸುವ ಜೊತೆ ನೌಕರರ ಆಶೋತ್ತರಗಳಿಗೆ ಸದಾ ಸ್ಪಂದಿಸುವೆ ಎಂದು ತಿಳಿಸಿರುತ್ತಾರೆ.

About the author

Adyot

Leave a Comment