“ಪ್ರಜಾಪ್ರಭುತ್ವ ಉಳಿಸಿ – ಅರಾಜಕತೆ ಅಳಿಸಿ” ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕರೆ

ಆದ್ಯೊತ್ ಸುದ್ದಿನಿಧಿ:
ನವಂಬರ್-೫ ರಂದು ಶಿವಮೊಗ್ಗ ದಲ್ಲಿ ನಡೆಯಲಿರುವ “ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ” ಬೃಹತ್ ಪಾದಯಾತ್ರೆಯಲ್ಲಿ ಭಾಗವಹಿಸುವ ಕುರಿತು ಜಿಲ್ಲಾ ಬಿಜೆಪಿ ಘಟಕದಿಂದ ಶಿರಸಿಯ ದೀನದಯಾಳ ಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಿತು

ಸಭೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರದಾನಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್,ಬಿಜೆಪಿ ಸಿಕ್ಕ ಅವಕಾಶದಲ್ಲೆಲ್ಲಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸಿದೆ. ವಿರೋಧ ಪಕ್ಷದಲ್ಲಿದ್ದಾಗ ಸಂವಿಧಾನದತ್ತ ಹಕ್ಕುಗಳ ನಿಯಮಾನುಸಾರ ಆಡಳಿತ ಪಕ್ಷವನ್ನು ಎಚ್ಚರಿಸಿದೆ, ಚುನಾವಣೆಗಳ ಮೂಲಕ ಗೆದ್ದು ಸಮರ್ಥ ಆಡಳಿತ ನೀಡುತ್ತಿದೆ. ಆದರೆ ‘ರೆಜಿಮ್ ಚೇಂಜ್’ ಹುಚ್ಚು ಕನಸು ಕಾಣುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಈಗಿನ ಕಾಂಗ್ರೆಸ್ ಪಕ್ಷ ಇದಕ್ಕೆ ವ್ಯತಿರಿಕ್ತವಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸಿ ಅರಾಜಕತೆ ನಿರ್ಮಿಸಲು ಹೊರಟಿದೆ ಎಂದರು.

ಹಿಂದೆ ಕಾಕ್ರೋಚ್ ಹೆಸರಿನಲ್ಲಿ ದೊಂಬಿ ಸೃಷ್ಟಿಸಲು ಹುನ್ನಾರ ನಡೆಸಿದವರು ಈಗ ನೇರವಾಗಿ ಕಾಂಗ್ರೆಸ್ ಅಥವಾ ಇಂಡಿ ಘಟಬಂಧನದ ನೇತೃತ್ವದಲ್ಲಿಯೇ ಅಣಕು ಸಂಸತ್ತು ಇತ್ಯಾದಿ ಹೋರಾಟ ನಡೆಸುತ್ತಿದ್ದಾರೆ.
ಇದೆಲ್ಲದರ ಹಿಂದಿನ ರಹಸ್ಯ ಅರಾಜಕತೆಯ ನಿರ್ಮಾಣ. ಅದಕ್ಕಾಗಿ ಸಂವಿಧಾನ ಬಾಹಿರ ಮಾರ್ಗಗಳನ್ನು ಅನುಸರಿಸುವ ಜೊತೆಗೆ ಅನೇಕ ವಿದೇಶೀ ಭಾರತ ವಿರೋಧಿ ಶಕ್ತಿಗಳೊಂದಿಗೂ ಕೈ ಜೋಡಿಸಿ ದಂಗೆ ಎಬ್ಬಿಸುವ ಹುನ್ನಾರ ನಡೆಸಿದೆ. ಈ ರೀತಿ ದಂಗೆಯಾದ ಬಾಂಗ್ಲಾ, ಯುರೋಪ್ ಮಾದರಿಯನ್ನು ತನ್ನ ಪ್ರೇರಣೆಯಾಗಿಟ್ಟುಕೊಂಡಿರುವ ಪ್ರಜಾಪ್ರಭುತ್ವ ವಿರೋಧಿ ಹೋರಾಟಗಾರರ ವಿರುದ್ಧ ಧ್ವನಿ ಎತ್ತುವ ಸಂದರ್ಭ ಬಂದಿದೆ. ಆದ್ದರಿಂದ ನವೆಂಬರ್ 05, ಗುರುವಾರ ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ನಡೆಯುವ ವಿಭಾಗ ಮಟ್ಟದ ಈ ಬೃಹತ್ ಪಾದಯಾತ್ರೆಯಲ್ಲಿ ಶಿರಸಿ ನಗರದಿಂದ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಡಲ ಅಧ್ಯಕ್ಷ
ಆನಂದ ಸಾಲೇರ್ , ಇತ್ತೀಚೆಗೆ ನಡೆದ ಕರ್ನಾಟಕ ಪಶ್ಚಿಮ ಪದವೀಧರ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಬೂತ್ ಮಟ್ಟದಿಂದ ಸಂಘಟನೆ ಬಲಪಡಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ರಮಾಕಾಂತ ಭಟ್, ಜಿಲ್ಲಾ ರೈತ
ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಬಳ್ಳಾರಿ ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಮಹಂತೇಶ ಅಭಿಮಾನಿ ನಿರ್ವಹಿಸಿದರು, ನಾಗರಾಜ್ ನಾಯ್ಕ ವಂದಿಸಿದರು.

About the author

Adyot

Leave a Comment