ಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನ

ಆದ್ಯೊತ್ ಸುದ್ದಿನಿಧಿ:
ಚಿತ್ರರಂಗದ ಧ್ರುವತಾರೆ ಡಾ.ರಾಜಕುಮಾರ
ಅವರೊಂದಿಗೆ ಕೆಲಸ ಮಾಡಿದ ಹಿರಿಯ ನಟ-ನಿರ್ದೇಶಕ-ನಿರ್ಮಾಪಕ ಚಂದ್ರಹಾಸ ಆಳ್ವ ಅವರನ್ನು ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಈಶ್ವರಿಯ ವಿಶ್ವವಿದ್ಯಾಲಯದ ಜ್ಞಾನಲೋಕ ಮ್ಯೂಸಿಯಂ ನಿರ್ದೇಶಕ
ಡಾ.ಬಿ.ಕೆ.ಬಸವರಾಜ ರಾಜ ಋಷಿಗಳು ಹೇಳಿದರು.

ಅವರು ನಗರದ ಈ ಬೈರಿದೇವರಕೊಪ್ಪದ ಈಶ್ವರಿ ವಿಶ್ವವಿದ್ಯಾಲಯದಲ್ಲಿ
ಹುಬ್ಬಳ್ಳಿಯ ಡಾ. ಸಂಗಮೇಶ್ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ, ಕನ್ನಡ ಧ್ವನಿ ಟ್ರಸ್ಟ್ ಹಾಗೂ ಅಭಿ ಕ್ರಿಯೇಶನ್ಸ್ ಗದಗ ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ನಡೆದ “ಹೆಮ್ಮೆಯ ಕನ್ನಡಿಗ”ರ ಸನ್ಮಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ನಟ-ನಿರ್ದೇಶಕ ಚಂದ್ರಹಾಸ ಅಳ್ವ ಮಾತನಾಡಿ ಸಿನಿಮಾಗಳ
ಮೂಲಕ ಕನ್ನಡ ಉಳಿಯುವುದಕ್ಕೆ ನಾವು ಕಂಕಣ ಬದ್ಧರಾಗಿ ಕೆಲಸ
ಮಾಡುತ್ತಿದ್ದೇವೆ. ಕನ್ನಡದಲ್ಲಿ ಇನ್ನಷ್ಟು ಉತ್ತಮ ಚಿತ್ರಗಳು ಮೂಡಿ
ಬರಬೇಕು. ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾಗಳು
ಹೆಚ್ಚಾಗಬೇಕಿದೆ. ಇತ್ತೀಚಿಗೆ ಧಾರ್ಮಿಕ ಸಿನಿಮಾಗಳು ಕಡಿಮೆಯಾಗುತ್ತಿವೆ.
ಆದರೆ ಅಂತ ಸಿನಿಮಾ ನೋಡುವ ಒಂದು ವರ್ಗ ಇದ್ದೇ ಇದೆ. ಇಂದು ಕನ್ನಡ ಸಿನಿಮಾಗಳ ಟ್ರೆಂಡ್ ಬದಲಾಗಿದೆ ಎಂದು ಸಹಪಾಠಿಗಳಾದ ರಜನಿಕಾಂತ, ಅಶೋಕ ಅವರ ಆ ದಿನಗಳ ಮೆಲುಕು ಹಾಕಿದರಲ್ಲದೆ ನಿರ್ದೇಶಕ ಪುಟ್ಟಣ್ಣ ಕಣಗಾಲರ ಗರಡಿಯಲ್ಲಿ ಪಳಗಿದ ಕುರಿತು ವಿಷಯ ಹಂಚಿಕೊಂಡರು.

ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಮಾತನಾಡಿ ಚಿತ್ರರಂಗದಲ್ಲಿ ಚಂದ್ರಹಾಸ ಆಳ್ವ ಅವರು ತಮ್ಮದೇ ಆದ ಚಾಪನ್ನು ಮೂಡಿಸಿದವರು. ರೀಲ್ ನಿಂದ ಇಂದಿನ ಡಿಜಿಟಲ್ ಯುಗದವರೆಗಿನ ಕೆಲಸವನ್ನು ಬಲ್ಲವರು. ಹೀಗಾಗಿ ರೀಲ್ ಮತ್ತು ಡಿಜಿಟಲ್ ಯುಗದ ಕೊಂಡಿಯಾಗಿ ನಮ್ಮ ಜೊತೆಗಿದ್ದಾರೆ. ಸಾಮಾಜಿಕ ಸಂದೇಶ ನೀಡುವ ಹಲವು ಚಿತ್ರಗಳನ್ನು ಆಳ್ವ ನೀಡಿದ್ದಾರೆ. ಇವರು ಈ ಸಾಧನೆಯನ್ನು ಗಮನಿಸಿ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮದಡಿ ಅವರನ್ನು ಮತ್ತು ಸಂಕಲನಕಾರ ಮುತ್ತುರಾಜ್ ಟಿ, ಸಿನಿ ಛಾಯಾಗ್ರಾಹಕ , ಸಹಾಯಕ ನಿರ್ದೇಶಕ ಶಶಿಧರ ದೇವಾಡಿಗ ಅವರನ್ನೂ ಸನ್ಮಾನಿಸಿಸುತ್ತಿರುವುದು ನಮಗೆ ಹರ್ಷ ಎನಿಸುತ್ತಿದೆ ಎಂದರು.

ಹಿರಿಯ ಪತ್ರಕರ್ತ ಡಾ.ವೀರೇಶ್ ಹಂಡಿಗಿ ಸನ್ಮಾನಿತರ ಕುರಿತು
ಮಾತನಾಡಿದರು. ವಿಶ್ರಾಂತ ಪ್ರಾಚಾರ್ಯ ಡಾ. ಪ್ರಭು ಗಂಜಿಹಾಳ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ರಾಮದುರ್ಗಕರ್ ಸ್ವಾಗತಿಸಿ, ನಿರೂಪಿಸಿದರು. ಬಸವರಾಜ ಕರ್ಕಿ ವಂದಿಸಿದರು

About the author

Adyot

Leave a Comment