ಆದ್ಯೊತ್ ಸುದ್ದಿನಿಧಿ;
ಶಿರಸಿ ಅಂಬೇಡ್ಕರ್ ಭವನದಲ್ಲಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚೀವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಪ್ರಜಾಸೇವಾ ಆಂದೋಲನ ಸಭೆ ನಡೆಯಿತು.


ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ ನದಿತಿರುವ ಯೋಜನೆಗಳ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡುವುದರಿಂದ ಪ್ರಯೋಜನವಿಲ್ಲ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗಬೇಕು. ನೀರಾವರಿ ಯೋಜನೆಯಿಂದ ಸಾವಿರಾರು ಎಕರೆ ಜಮೀನು ಮುಳುಗಡೆಯಾಗಬಹುದಾದರೂ, ಮತ್ತೊಂದೆಡೆ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ನಾನು ಕೂಡ ಮುಳುಗಡೆ ಪ್ರದೇಶದಿಂದ ಬಂದವನು. ಹೀಗಾಗಿ ನದಿ ತಿರುವು ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚೆಯಾಗಲಿ.ನದಿ ತಿರುವು ಯೋಜನೆ ಕುರಿತು ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಇಂತಹ ಯೋಜನೆಗಳಿಂದ ಕೋಟ್ಯಂತರ ಜನರ ಬದುಕಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಕೆಲವು ಹಾನಿಗಳೂ ಆಗಬಹುದು. ಹೀಗಾಗಿ ಎಲ್ಲ ಆಯಾಮಗಳನ್ನು ಪರಿಶೀಲಿಸಿ ಚರ್ಚಿಸಬೇಕು ಎಂದು ಹೇಳಿದರು.

ದಿನನಿತ್ಯದ ಸಾಮಾನುಗಳ ಹಾಗೂ ಹಾಲಿನ,ಬಸ್ಟಿಕೆಟ್ ದರಗಳ ಬೆಲೆ ಏರಿಕೆಯಾಗಿರುವುದು ಸಹಜವಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣವಾಗಿದ್ದು, ಈ ಬಗ್ಗೆ ಬಿಜೆಪಿ ಮುಖಂಡರಿಗೆ ವಿವೇಚನೆ ಇಲ್ಲ . ಇಂಧನ ದರ ಏರಿಕೆಯಾಗದಿದ್ದರೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಅನಿವಾರ್ಯತೆ ಇರಲಿಲ್ಲ. ಹಿಂದಿನ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಹಾಗೂ ಸದಾನಂದ ಗೌಡರ ಅವಧಿಯ ನಿರ್ಧಾರಗಳನ್ನು ಒಮ್ಮೆ ಪರಿಶೀಲಿಸಲಿ. ಹೋರಾಟ ಮಾಡುವುದು ಮತ್ತು ವಿರೋಧಿಸುವುದೇ ತತ್ವ ಸಿದ್ಧಾಂತ ಎಂದು ಬಿಜೆಪಿ ಮುಖಂಡರು ಭಾವಿಸಿದಂತಿದೆ.ಮಹಿಳಾ ಮೀಸಲಾತಿ ಕುರಿತು ಮಾತನಾಡುವ ಬಿಜೆಪಿ ನಾಯಕರು ಮೊದಲು ತಮ್ಮ ಪಕ್ಷದ ಆಂತರಿಕ ವಿಚಾರಗಳನ್ನು ಗಮನಿಸಲಿ. ಆರು ತಿಂಗಳಿನಿAದ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ವಿರೋಧ ಪಕ್ಷದ ನಾಯಕನ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಸ್ಪಷ್ಟತೆ ತೋರಿಸಲಿ ಎಂದರು.


ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬರ ಪರಿಹಾರ ನೀಡುವಂತೆ ಪ್ರಧಾನಮಂತ್ರಿಯವರಲ್ಲಿ ಮನವಿ ಮಾಡಲಾಗುವುದು. ರಾಜ್ಯ ಸರ್ಕಾರದ ಜನಸೇವಾ ಆಂದೋಲನದ ಮಾದರಿಯಲ್ಲಿ ಕೇಂದ್ರದ ಪ್ರಧಾನಮಂತ್ರಿ ಕಾರ್ಯಾಲಯವೂ ಜನರಿಗೆ ಮುಕ್ತವಾಗಿ ಸ್ಪಂದಿಸಬೇಕು. ಸರ್ವಪಕ್ಷಗಳ ನಾಯಕರು ಒಟ್ಟಾಗಿ ಬಂದರೆ ಅವರನ್ನು ಪ್ರಧಾನಮಂತ್ರಿಯವರ ಬಳಿ ಕರೆದೊಯ್ಯಲು ಸಿದ್ಧರಿದ್ದೇವೆ. ರಾಜ್ಯಕ್ಕೆ ಹೆಚ್ಚಿನ ಪರಿಹಾರ ದೊರೆಯಬೇಕೆಂಬ ಉದ್ದೇಶದಿಂದ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಬೇಕು ಎಂದರು.

ಶಾಸಕ ಭೀಮಣ್ಣ ನಾಯ್ಕ , ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ್,ಸುಮಾ ಉಗ್ರಾಣಕರ ,ಪ್ರವೀಣ್ ಗೌಡ ತೆಪ್ಪಾರ ಮುಂತಾದವರು ಉಪಸ್ಥಿತರಿದ್ದರು.
