ಶೇಕಡಾ 40 ರಷ್ಟು ಜನಪ್ರತಿನಿಧಿಗಳು ಕ್ರಿಮಿನಲ್ ಗಳು

ಆದ್ಯೋತ್ ನ್ಯೂಸ್ ಡೆಸ್ಕ್: ನಮ್ಮ ದೇಶದ ಶೇಕಡಾ 40ರಷ್ಟು ಜನಪ್ರತಿನಿಧಿಗಳು ಕ್ರಿಮಿನಲ್ ಗಳಾಗಿದ್ದು ಇದರಿಂದ ದೇಶಕ್ಕೆ ಅಪಾಯ ಒದಗಲಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಸ್ಥಾಪಕ ಎಸ್.ಆರ್.ಹಿರೇಮಠ ಹೇಳಿದರು.


ಆದ್ಯೋತ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು, ನಮ್ಮ ದೇಶ ಜಗತ್ತಿಗೆ ನಾಯಕತ್ವವನ್ನು ಕೊಟ್ಟ ದೇಶ. ಮಹಾತ್ಮಾ ಗಾಂಧಿ, ಡಾ.ಅಂಬೇಡ್ಕರ ರಂತಹ ಮಹಾನ ನಾಯಕರನ್ನು ಇತರ ದೇಶದ ಹಲವರು ತಮ್ಮ ನಾಯಕನನ್ನಾಗಿ ಸ್ವೀಕರಿಸಿದ್ದಾರೆ. ಇಂದು ಸಾಕಷ್ಟು ನಾಯಕರಿದ್ದಾರೆ ಆದರೆ ಅವರಿಗೆ ಯಾವ ಆದರ್ಶಗಳೂ ಇಲ್ಲ. ಸಂವಿಧಾನದ ಬಗ್ಗೆ ಅರಿವಿಲ್ಲ, ನಾಯಕತ್ವದಲ್ಲಿರುವವರು ಅಜ್ಞಾನಿಗಳಾಗಿದ್ದಾರೆ. ನಮ್ಮ ಅವಶ್ಯಕತೆಯನ್ನು ಮೀರಿ ನಾವು ಸಂಪಾದನೆ ಮಾಡುತ್ತಿದ್ದೇವೆ. ಭೂಮಿಯ ಒಡಲನ್ನು ದೋಚುವವರು ಅರಣ್ಯ ಮಂತ್ರಿಗಳಾಗುತ್ತಾರೆ, ಜೈಲಿಗೆ ಹೋಗಿಬಂದವರು ಮುಖ್ಯಮಂತ್ರಿಗಳಾಗುತ್ತಾರೆ, ಪ್ರಧಾನಮಂತ್ರಿಗಳಾಗಿದ್ದಾರೆ, ಗೃಹಮಂತ್ರಿಗಳಾಗಿದ್ದಾರೆ, ವಿರೋಧಪಕ್ಷದ ನಾಯಕರಾಗಿದ್ದಾರೆ ಇಂತಹವರಿಂದ ನಾವು ಸಮರ್ಥ ನಾಯಕತ್ವವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕಾಂಗ್ರೇಸ್ ನವರ ಪಾಪದಿಂದಾಗಿ ಇಂದು ಬಿಜೆಪಿ ಎಂಬ ದುಷ್ಟ ಪಕ್ಷ ಆಡಳಿತ ನಡೆಸುತ್ತಿದೆ. ಹಾಗಂತ ಬಿಜೆಪಿಗೆ ಪರ್ಯಾಯ ಕಾಂಗ್ರೇಸ್ ಅಲ್ಲ. ಉತ್ತಮವಾಗಿರುವ ಪ್ರಾಮಾಣಿಕವಾಗಿರುವ ಜನನಾಯಕರ ಅವಶ್ಯಕತೆ ಇದೆ ಎಂದು ಹೇಳಿದರು.

About the author

Adyot

Leave a Comment