ಸಿದ್ದಾಪುರದಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಸುನಿಲಕುಮಾರ ಪ್ರಚಾರ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಕಾರ್ಕಳ ಶಾಸಕ ಸುನಿಲ
ಹಲಗೇರಿ-ಕೋಲಸಿರ್ಸಿಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಸುನಿಲಕುಮಾರ ಭರ್ಜರಿ ಪ್ರಚಾರ ನಡೆಸಿದರು.

ಸುನಿಲಕುಮಾರ ಮಾತನಾಡಿ,ಕಳೆದ ಒಂದು ವರ್ಷದಿಂದ ರಾಜ್ಯದ ೨೨೪ ಶಾಸಕರ ಕ್ಷೇತ್ರದಲ್ಲಿ ಒಂದೇ ಒಂದು ರೂ. ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.ಯಾವುದೇ ಶಾಸಕನು ಹೊಸ ಕಾಮಗಾರಿಗೆ ಗುದ್ದಲಿ ಪೂಜೆಯನ್ನೂ ಮಾಡಿಲ್ಲ ಒಂದು ವರ್ಷದಲ್ಲಿ ಈ ಸರ್ಕಾರ ಏನು ಮಾಡಿದ್ದು ಅಂದರೆ ರಾಜ್ಯವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿರುವುದು. ಸರಕಾರ ನೀಡುತ್ತಿರುವ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್‌ನ ಎಲ್ಲಾ ನಾಯಕರು ಉದ್ದುದ್ದ ಭಾಷಣ ಬಿಗಿಯುತ್ತಿದ್ದಾರೆ ರಾಜ್ಯವನ್ನು ಅಭಿವೃದ್ಧಿ ಪಡಿಸುತ್ತ ಈ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದರೆ ನಾವು ಸ್ವಾಗತಿಸುತ್ತಿದ್ದೆವು ಆದರೆ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿ ಎಸ್.ಸಿ.ಎಸ್‌ಟಿ ಸೇರಿದಂತೆ ಹಲವು ಬಡಜನರಿಗೆ ಸಲ್ಲಬೇಕಾದ ಅನುದಾನವನ್ನು ಕಸಿದು, ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯನ್ನು ಹೇರಿ ಈ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆ.

ಕೃಷಿ ಸಮ್ಮಾನ್ ಯೋಜನೆ ಅಡಿಯಲ್ಲಿ ನಮ್ಮ ಸರ್ಕಾರ ಆಡಳಿತದಲ್ಲಿ ಇರುವಾಗ ಕೇಂದ್ರ ಸರ್ಕಾರದಿಂದ 6೦೦೦ರೂ. ರಾಜ್ಯ ಸರ್ಕಾರದಿಂದ 4೦೦೦ರೂ. ಹೀಗೆ ಒಟ್ಟು 1೦,೦೦೦ರೂ. ಕೊಡುತ್ತಿದ್ದೆವು. ಈ ಸರ್ಕಾರ ಬಂದ ನಂತರ ರಾಜ್ಯ ಸರ್ಕಾರದ ನಾಲ್ಕು ಸಾವಿರ ರೂಪಾಯಿ ನಿಲ್ಲಿಸಿದರು.ಭಾಗ್ಯಲಕ್ಷ್ಮಿ ಯೋಜನೆ ರದ್ದಾಯಿತು ಮಕ್ಕಳಿಗೆ ಕೊಡುತ್ತಿದ್ದಂತ ಸೈಕಲ್ ಯೋಜನೆ ರದ್ದಾಯಿತು ರೈತ ವಿದ್ಯಾನಿಧಿ ಕ್ಯಾನ್ಸಲ್ ಆಯಿತು ವಿದ್ಯಾಶ್ರೀ ಯೋಜನೆ ಕ್ಯಾನ್ಸಲ್ ಆಯಿತು ಹಾಲಿನ ರೇಟ್ ಜಾಸ್ತಿ ಆಯಿತು ನಮ್ಮ ಸರ್ಕಾರದ ಅವಧಿಯಲ್ಲಿ 1೦,೦೦೦ರೂ. ಕೊಟ್ಟರೆ ರೈತರಿಗೆ ಉಚಿತ ವಿದ್ಯುತ್ ಸಂಪರ್ಕ ಸಿಗುತ್ತಿತ್ತುಈಗ ರೈತರ ಪಂಪ್‌ಸೆಟ್ಟುಗಳಿಗೆ ಕನೆಕ್ಷನ್ ತೆಗೆದುಕೊಳ್ಳಬೇಕು ಎಂದರೆ ಒಂದುವರೆ ಲಕ್ಷ ರೂ. ಕಟ್ಟಬೇಕಾಗಿದೆ.ಈ ಸರ್ಕಾರದ ಅವಧಿಯಲ್ಲಿ ಮಧ್ಯದ ದರ ಹೆಚ್ಚಾಗಿದೆ ಆರ್ ಟಿ ಸಿ ರೇಟ್ 1೦ ರೂಪಾಯಿ ಇದ್ದದ್ದನ್ನು 25 ರೂಪಾಯಿ ಮಾಡಿದರು ಸ್ಟ್ಯಾಂಪ್ ಪೇಪರ್ ಡ್ಯೂಟಿ 1೦ ರೂಪಾಯಿ ಇದ್ದದ್ದನ್ನು 1೦೦ ರೂಪಾಯಿ ಮಾಡಿದರು ನಮ್ಮೆಲ್ಲ ರಿಜಿಸ್ಟ್ರೇಷನ್ ವ್ಯಾಲ್ಯೂವನ್ನು 4 ಪಟ್ಟು 5 ಪಟ್ಟು ಹೆಚ್ಚು ಮಾಡಿದ್ದಾರೆ ಈ ರೀತಿ ಸುಲಿಗೆ ಮಾಡುವ ಮೂಲಕ ಗ್ಯಾರಂಟಿ ಯೋಜನೆ ಜಾರಿ ಮಾಡಲು ಹೊರಟಿದ್ದಾರೆಎಂದು ಕಿಡಿಕಾರಿದರು

ನಾನು ಈ ಸಭೆಯ ಮುಖಾಂತರ ಕಾಂಗ್ರೆಸ್ಸಿಗರಿಗೆ ಕೇಳುತ್ತೇನೆ ಒಂದು ವರ್ಷದಲ್ಲಿ ಉತ್ತರ ಕನ್ನಡದಲ್ಲಿ ಆದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಬಹಿರಂಗ ಮಾಡಿ,ಒಂದು ವರ್ಷದಲ್ಲಿ ಉತ್ತರ ಕನ್ನಡಕ್ಕೆ ಇಷ್ಟು ಅನುದಾನವನ್ನು ನಾವು ಕೊಟ್ಟಿದ್ದೇವೆ ಅಂತ ಜಿಲ್ಲಾ ಉಸ್ತುವಾರಿ ಸಚಿವರು ಹೇಳಲಿ. ವಿಶ್ವೇಶ್ವರ ಹೆಗಡೆ ಕಾಗೇರಿಯವರು ನಿರಂತರ ಅಭಿವೃದ್ಧಿ ಮಾಡುವಂತಹವರು ನಾವೆಲ್ಲ ಕಾರ್ಯಕರ್ತರು ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನ ಮಂತ್ರಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕಟಿಬದ್ಧರಾಗಿದ್ದೆವೆ. ಹತ್ತುವರ್ಷದಲ್ಲಿ ದೇಶ ಯಾವರೀತಿಯ ಅಭಿವೃದ್ಧಿ ಪಥದಲ್ಲಿ ಸಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಬಲಾಢ್ಯ ರಾಷ್ಟçವಾಗಿ ಹೊರಹೊಮ್ಮುತ್ತಿದೆ. 2೦೦4 ರಿಂದ 2೦14ರವರೆಗೆ ದೇಶದ ಪರಿಸ್ಥಿತಿ ಹೇಗಿತ್ತು ಎನ್ನುವುದು ನಮ್ಮೆಲ್ಲರಿಗೂ ಅರಿವಿದೆ.ದೇಶದ ಅಭಿವೃದ್ಧಿಗಾಗಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇನ್ನೊಂದು ಬಾರಿಗೆ ಅವಕಾಶ ಕೊಡುವ ನೆಟ್ಟಿನಲ್ಲಿ ಮೋದಿಜಿಯವರನ್ನು ಇನ್ನೊಮ್ಮೆ ಪ್ರಧಾನಮಂತ್ರಿಯಾಗಿಸಲು ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಗೆಲ್ಲಿಸಬೇಕು ಎಂದರು

ಸಭೆಯಲ್ಲಿ ಬಿಜೆಪಿ ಕಾರ್ಯಕಾರಣಿ ಸದಸ್ಯ ಕೆ.ಜಿ.ನಾಯ್ಕಹಣಜೀಬೈಲ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್,ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಮಡಿವಾಳ,ತೋಟಪ್ಪ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment