ಇತಿಹಾಸದ ಪುಟ ಸೇರಿದ ವಾಯುಪಡೆಯ ಕಾರ್ಗಿಲ್ ಹೀರೊ ಮಿಗ್-27

ಕಾರ್ಗಿಲ್ ಕದನದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಭಾರತೀಯ ವಾಯುಪಡೆಯ ‘ಮಿಗ್‌ 27’ ಯುದ್ಧ ವಿಮಾನ ಇಂದು ಕೊನೆಯ ಹಾರಾಟ ನಡೆಸಿ ಅಂತಿಮ ವಿದಾಯ ಹೇಳಿದೆ.

ವಾಯುಪಡೆ ಬಳಿ ಇದ್ದ ಏಳು ರಷ್ಯಾ ನಿರ್ಮಿತ ಮಿಗ್‌ 27 ವಿಮಾನಗಳು ರಾಜಸ್ಥಾನದ ಜೋಧ್‌ಪುರ ಏರ್ ಬೇಸ್ ನಲ್ಲಿ ಇಂದು ಕೊನೆಯ ಹಾರಾಟ ನಡೆಸಿವೆ. ಜೋಧ್‌ಪುರ ವಾಯುನೆಲೆಯಲ್ಲಿ ನಡೆದ ಸಮಾರಂಭದಲ್ಲಿ 7 MiG -27 ವಿಮಾನಗಳು ಅಂತಿಮ ಫ್ಲೈಪಾಸ್ಟ್ ಮಾಡಿವೆ. ಮಿಗ್ 27 ಯುದ್ಧ ವಿಮಾನ ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು. 1980ರಲ್ಲಿ ಮಿಗ್ 27 ಯುದ್ಧ ವಿಮಾನಗಳನ್ನ ಖರೀದಿಸಲಾಗಿತ್ತು. 1981ರಲ್ಲಿ ಮಿಗ್ ಯುದ್ಧ ವಿಮಾನ ಜೋದ್ ಪುರ್ ನಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಿತ್ತು. 1980ರಿಂದ 1999ರವರೆಗೆ ಈ ಯುದ್ಧ ವಿಮಾನಗಳು ವಾಯುಸೇನೆಯಲ್ಲಿ ಸಾಕಷ್ಟು ಮಹತ್ವದ ಪಾತ್ರ ವಹಿಸಿದ್ದವು. ಇದರೊಂದಿಗೆ ವಾಯುಸೇನೆಯ ಯಶಸ್ವಿ ಯುದ್ಧ ವಿಮಾನ ಇತಿಹಾಸದ ಪುಟ ಸೇರಿದೆ.

About the author

Adyot

Leave a Comment