ಸಿದ್ದಾಪುರ: ಕಸಾಪ ದಿಂದ “ಸಾಹಿತಿಗಳೊಂದಿಗೆ ಸಂವಾದ” ಕಾರ್ಯಕ್ರಮ

ಆದ್ಯೊತ್ ಸುದ್ದಿನಿಧಿ:
ಉತ್ತರಕನ್ನಡ ಸಿದ್ದಾಪುರದಲ್ಲಿಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತು
ಸಾಹಿತಿಗಳೊಂದಿಗೆ ಸಂವಾದ ” ಕಾರ್ಯಕ್ರಮವನ್ನು ಆಯೋಜಿಸಿತ್ತು.


ಕಾರ್ಯಕ್ರಮದಲ್ಲಿ ಭಾಗವಹಿಸಿ”ಕತೆ ಎಂಬ ಭಾಷೆ” ವಿಷಯದ ಕುರಿತು ಮಾತನಾಡಿದ ಹಿರಿಯ ಸಾಹಿತಿ ಶ್ರೀಧರ ಬಳಗಾರ,
ಕತೆಗಾರನಿಗೆ ಭೌತಿಕ ಪ್ರಪಂಚದ ನಂಟು,ಸಂಪರ್ಕ ಇಲ್ಲದಿದ್ದರೆ ಕತೆಗಾರನಾಗಲು ಸಾಧ್ಯವಿಲ್ಲ.ಮನುಷ್ಯ ಎಂದರೆ ಭಾಷೆ ಅದು ಕೇವಲ ಸಂವಹನದ ಮಾಧ್ಯಮವಲ್ಲ ಆಲೋಚನೆ ಆಗಿದೆ. ಭಾಷೆ ವ್ಯವಹಾರಕ್ಕೆ ಬಳಸುವುದು ಎನ್ನುತ್ತೆವೆ ಆದರೆ ಕತೆ ಎಂಬ ಭಾಷೆ ನಮ್ಮ. ಆಲೋಚನೆಯಾಗಿರುತ್ತದೆ.ನೋಡುವುದು,ಕಾಣಿಸುವುದನ್ನು ಹೇಳಿರುವುದು ಆಗಿರುತ್ತದೆ.ಕತೆಯ ಭಾಷೆಗೆ ಸ್ವಾಯತ್ತತೆಯ ಅಸ್ತಿತ್ವ ಇದೆ ಇದು ಕನ್ನಡಿಯಲ್ಲ ಸೂಕ್ಷ್ಮದರ್ಶಿನಿಯಾಗಿದೆ. ಸಣ್ಣದಾಗಿರುವುದನ್ನು ಬೃಹದಾಕಾರವಾಗಿ ತೋರಿಸುವುದು ಕತೆಯ ಭಾಷೆಯ ಗುಣವಾಗಿದೆ.ಯಾವುದೇ ಭಾಷೆ ಇರಲಿ ಅದರಲ್ಲಿ ಒಳವಿನ್ಯಾಸವಿರುತ್ತದೆ. ರಸಪ್ರಜ್ಞೆ,ಧ್ವನಿ,ಅಲಂಕಾರ ಇವೆಲ್ಲವೂ ಇರುತ್ತದೆ ಇವಿಲ್ಲದಿದ್ದರೆ ಸಾಹಿತ್ಯ ರಚನೆ ಸಾಧ್ಯವಿಲ್ಲ ಎಂದು ಹೇಳಿದರು.


ಸಣ್ಣ ಕತೆಗಳು ಸಾಹಿತ್ಯದಲ್ಲಿ ತಮ್ಮದೇ ಸ್ಥಾನವನ್ನು ಪಡೆದಿವೆ. ಗುಣದಲ್ಲಿ ಇವು ಭಾವಗೀತೆಯಂತಿರುತ್ತದೆ. ಇವು ಒಬ್ಬರಿಂದ ಒಬ್ಬರಿಗೆ ಶಾಸ್ತ್ರದ,ಜ್ಞಾನದ,ಮೌಲ್ಯಗಳ ವಾಹಕವಾಗಿರುತ್ತದೆ ಇದು ಪ್ರಜಾಪ್ರಭುತ್ವದ ರೀತಿಯಾಗಿರುತ್ತದೆ ಎಂದು ಬಳಗಾರ ಹೇಳಿದರು.

ಕಸಾಪ ಅಧ್ಯಕ್ಷ ಚಂದ್ರಶೇಖರ ಕುಂಬ್ರಿಗದ್ದೆ ಅಧ್ಯಕ್ಷತೆವಹಿಸಿ ಮಾತನಾಡಿ,ಸಾಹಿತ್ಯ ಪರಿಷತ್ತು ತನ್ನ ಸೀಮಿತಿ ಪರಿಧಿಯಲ್ಲಿ ಸಾಹಿತ್ಯದ ಕೆಲಸಗಳನ್ನು ಮಾಡುತ್ತಿದೆ. ಬಳಗಾರರಂತಹ ಹಿರಿಯ ಕತೆಗಾರರ ಅನುಭವ,ಜ್ಞಾನ ಎಲ್ಲರಿಗೂ ಸಿಗಲಿ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡಲಾಗುತ್ತದೆ ಎಂದು ಹೇಳಿದರು.

ಸಾಹಿತಿ ಗಂಗಾಧರ ಕೊಳಗಿ ಪ್ರಾಸ್ತಾವಿಕ ಮಾತನಾಡಿ, ಸಾಹಿತಿಗಳೊಂದಿಗೆ ಪರಸ್ಪರ ಒಡನಾಟವಿರದಿದ್ದರೆ ಸಾಹಿತ್ಯ ನಿಂತ ನೀರಾಗುವ ಅಪಾಯವಿರುತ್ತದೆ ಇದರಿಂದಾಗಿ ಸ್ಥಳೀಯ ಸಾಹಿತ್ಯ ಪರಿಷತ್ತು ಇಂತಹ ಒಂದು ಕಾರ್ಯಕ್ರವನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ ಶ್ರೀಧರ ಬಳಗಾರರಂತಹ ಕತೆಗಾರರ ಕತೆಗಳು ನಮ್ಮನ್ನು ಆಕರ್ಷಿಸುತ್ತಿರುತ್ತವೆ ಅವರ ಜ್ಞಾನ ನಮಗೆಲ್ಲ ಸಿಗುವಂತಾಗಲಿ ಎಂದು ಹೇಳಿದರು.

ಸಂವಾದದಲ್ಲಿ ೮ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ತಮ್ಮಣ್ಣ ಬೀಗಾರ,ಟಿ.ಎಂ.ರಮೇಶ,ಜಿ.ಜಿ.ಹೆಗಡೆ,ವಿಠ್ಠಲ ಅವರಗುಪ್ಪ,ಸಿ.ಎಸ್.ಗೌಡರ್,ಗಣಪತಿ ಹಿತ್ಲಕೈ,ವೀರಲಿಂಗನ ಗೌಡರ್,ಲಕ್ಷ್ಮಣ ,ಪ್ರಶಾಂತ ಶೇಟ್,ಟಿಎಂಕೆ ಆಜಾದ್ ಮುಂತಾದವರು ಭಾಗವಹಿಸಿದ್ದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಸ್ವಾಗತಿಸಿದರು. ಪ್ರಶಾಂತ ಶೇಟ್ ವಂದನಾರ್ಪಣೆ ಮಾಡಿದರು.

About the author

Adyot

Leave a Comment