ಮಾಳ್ಕೋಡ ಶಾಲೆ ಶತಮಾನೋತ್ಸವ: ಸಂಪರ್ಕ ಅಭಿಯಾನಕ್ಕೆ ಚಾಲನೆ

ಆದ್ಯೊತ್ ಸುದ್ದಿನಿಧಿ:
ಹೊನ್ನಾವರ ಮಾಳ್ಕೋಡ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಪ್ರಯುಕ್ತ ಹಮಿಕೊಳ್ಳಲಾಗಿರುವ ಸಂಪರ್ಕ
ಅಭಿಯಾನ ಮಂಕಿಮನೆಯಲ್ಲಿ ನಡೆಯಿತು.


ಅಭಿಯಾನಕ್ಕೆ ಚಾಲನೆ ನೀಡಿದ ಉಜಿರೆಯ ಎಸ್.ಡಿ.ಎಂ.ಕಾಲೇಜಿನ ನಿವೃತ್ತ ಮುಖ್ಯ ಪ್ರಾಧ್ಯಾಪಕ ಭಾಸ್ಕರ ಹೆಗಡೆ ಮಾತನಾಡಿ,ಶಾಲೆ ಎಂದರೆ ಕೇವಲ ನಾಲ್ಕು ಗೋಡೆಗಳ ಮದ್ಯೆ ಇರುವ ಕಲಿಕಾ ಚಟುವಟಿಕೆಯ ಕೇಂದ್ರ ಅಷ್ಟೇ ಅಲ್ಲ.ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಬಹಳ ಮಹತ್ವದ ಕೇಂದ್ರವಾದ ಶಾಲೆಯು ಊರಿನ ಶಕ್ತಿಯ,ಸಮೃದ್ಧಿಯ ಸಂಕೇತ ಕೂಡ ಹೌದು. ಶಾಲೆಯೊಂದು ಉಳಿಯಬೇಕು ಎಂತಾದರೆ ಅಲ್ಲಿ ಶಿಕ್ಷಕರು, ಆಡಳಿತ ವರ್ಗ ಮಾತ್ರ ಕಾರಣ ಆಗೋದಿಲ್ಲ.ಬದಲಾಗಿ ಪಾಲಕರ,ಪೊಸಕರ,ಸ್ಥಳೀಯರ ಭಾವನಾತ್ಮಕವಾಗಿ ಶಾಲೆಯೊಟ್ಟಿಗೆ ಸಂಬಂದ ಇಟ್ಟುಕೊಂಡರೆ ಆ ಊರಿನ ಶಾಲೆಗೆ ದೊಡ್ಡ ಭವಿಷ್ಯ ಇದೆ


ಮಾಳ್ಕೋಡ ಶಾಲೆ ಒಂದು ಮೈಲುಗಲ್ಲನ್ನು ದಾಟಿದೆ ಎಂತಾದರೆ ,ಶತಮಾನವನ್ನು ದಾಟಿದೆ ಅಂದರೆ ಈ ಊರಿನ ಮಟ್ಟಿಗೆ ತುಂಬಾ ಹೆಮ್ಮೆಯ ಸಂಗತಿ. ಈ ಶಾಲೆಯ ಈ ಸಂದರ್ಭವನ್ನು ನಮ್ಮ ಮನೆಯ ಹಬ್ಬ ಎನ್ನುವ ರೀತಿಯಲ್ಲಿ, ಊರಿನ ಉತ್ಸವ ಎನ್ನುವ ರೀತಿಯಲ್ಲಿ ಆಚರಣೆ ಮಾಡಬೇಕು ಎನ್ನುವ ಸಂಕಲ್ಪ ಮಾಡಿದರೆ ಖಂಡಿತ ಸಾಧ್ಯವಾಗುತ್ತೆ. ಈ ಶಾಲೆಯ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಶಕ್ತಿ ತುಂಬಾ ಇದೆ.ಸಾಮರ್ಥ್ಯ ಇದೆ.ಆಸಕ್ತಿಯನ್ನು ತೋರಿದರೆ ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತಿನಿಂದ ಅದ್ದೂರಿಯಾಗಿ,ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡುವುದಕ್ಕೆ ಸಾಧ್ಯ.ಇದು ನಮ್ಮೆಲ್ಲರ ಪಾಲಿಗೆ ಒಂದು ಉತ್ತಮ ಆಯಾಮ.ಇದು ಶಾಲೆಯ ಗುಣಾತ್ಮಕ ಬೆಳವಣಿಗೆ ದ್ರಷ್ಠಿಯಲ್ಲಿಯೂ ಒಳ್ಳೆಯ ಸಂದರ್ಭ ಆಗಬೇಕು.ನಾವೆಲ್ಲರೂ ಸೇರಿ ಕೈಜೋಡಿಸಿ ನಮ್ಮ ಶಾಲೆ ಎನ್ನುವ ಅಭಿಮಾನದೊಂದಿಗೆ ಆಚರಿಸೋಣ ಎಂದರು.


ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗೌರವಾಧ್ಯಕ್ಷ ಬಾಲಚಂದ್ರ ಎಂ.ನಾಯ್ಕ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ ಎಂ.ಶೆಟ್ಟಿ,ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಶಾಂತ ಎಚ್.ನಾಯ್ಕ ,ಊರಿನ ಹಿರಿಯರಾದ ಮಹಾಬಲ ಶಂಭು ಹೆಗಡೆ ಮಾತನಾಡಿದರು.ಗ್ರಾಮ ಪಂಚಾಯತ ನಿಕಟಪೂರ್ವ ಉಪಾಧ್ಯಕ್ಷ ಗೋಪಾಲ ಜಟ್ಟಿ ನಾಯ್ಜ,ಮಾಜಿ ಅಧ್ಯಕ್ಷ ಮಂಜುನಾಥ ಬಿಳಿಯ ನಾಯ್ಕ, ಸ್ಥಳೀಯ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ನಾರಾಯಣ ಪಂಡಿತ ವೇದಿಕೆಯಲ್ಲಿದ್ದರು..
ಮಂಜುಳಾ ಹೆಗಡೆ ಪ್ರಾರ್ಥಿಸಿದರು. ಸಮಿತಿಯ ಉಪಾಧ್ಯಕ್ಷ ಜಿ.ಕೆ.ಹೆಗಡೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ ಜಿ.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಲಕ್ಮಿ ಎನ್. ಭಟ್ ಕಾರ್ಯಕ್ರಮ ನಿರ್ವಹಿಸಿದರು.ಸಂಘಟನಾ ಕಾರ್ಯದರ್ಶಿ ಮೂರ್ತಿ ಎಂ.ಆಚಾರಿ ವಂದಿಸಿದರು.

About the author

Adyot

Leave a Comment