ಆದ್ಯೊತ್ ಸುದ್ದಿನಿಧಿ:
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಕೇಂದ್ರ ಶಿಕ್ಷಣ ಸಚೀವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಹಾಗೂ ಪ್ರತಿನಿತ್ಯ ಪೆಟ್ರೋಲ್,ಡಿಸೇಲ್ ದರವನ್ನು ಹೆಚ್ಚಿಸುತ್ತಿರುವ ಕೆಂದ್ರಸರಕಾರದ ವಿರುದ್ಧ ಶುಕ್ರವಾರ ಎನ್ಎಸ್ಯುಐ ಜಿಲ್ಲಾಧ್ಯಕ್ಷ ವಿಶ್ವನಾಥ ಮಡಿವಾಳ ನೇತೃತ್ವದಲ್ಲಿ
ಸಿದ್ದಾಪುರದಲ್ಲಿ ಧರ್ಮೇಂದ್ರ ಪ್ರಧಾನ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ,ಕಳೆದ ಎರಡು ಮೂರು ವರ್ಷದಿಮದ ಪ್ರತಿವರ್ಷ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದು ಇದಕ್ಕೆ ಕೇಂದ್ರ ಸರ್ಕಾರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ ನೇರ ಕಾರಣವಾಗಿದ್ದು ಈ ಹಗರಣದ ಸೂತ್ರದಾರರು ಅವರೇ ಆಗಿದ್ದಾರೆ. ಇಷ್ಟು ದೊಡ್ಡ ಹಗರಣವಾದರೂ ಪ್ರದಾನಿಯವರು ಪ್ರದಾನ್ರವರ ರಾಜಿನಾಮೆ ಪಡೆಯದೇ ಇರುವುದು ಹಲವು ಸಂಶಯಕ್ಕೆ ಕಾರಣವಾಗಿದೆ. ಹಗಲು-ರಾತ್ರಿ ಕಷ್ಟಪಟ್ಟು ಸಾವಿರಾರು ರೂ. ಖರ್ಚು ಮಾಡಿ ನೀಟ್ ಪರೀಕ್ಷೆಗಾಗಿ ಬಡವರು,ಮಧ್ಯಮವರ್ಗದ ವಿದ್ಯಾರ್ಥಿಗಳು ತಯಾರಿ ನಡೆಸಿದ್ದರು. ಈಗ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು ಪ್ರದಾನ್ ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ ಮಾತನಾಡಿ,ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಪಕ್ಷವು ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ ಇಂದು ನಡೆಯುತ್ತಿರುವ ನೀರಾವರಿ ಯೋಜನೆಗಳೆಲ್ಲ ಕಾಂಗ್ರೆಸ್ ಸರಕಾರದಿಂದ ಆಗಿರುವುದು ಆದರೆ ಬಿಜೆಪಿ ಸರಕಾರ ಇಂತಹ ಜನಪರ ಯೋಜನೆಗಳ ಹೆಸರು ಬದಲಾಯಿಸುವಲ್ಲಿ ನಿರತವಾಗಿದೆ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದು ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗುತ್ತಿದೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ನರೇಂದ್ರ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ. ಮಾಧ್ಯಮದ ಎದುರು ಬರಲು ಹಿಂಜರಿಯುವ ಮೋದಿಯವರು ಮನಕಿಬಾತ್ ಮೂಲಕ ಸುಳ್ಳನ್ನು ಬಿತ್ತರಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.


ವಿಶ್ವನಾಥ ಮಡಿವಾಳ ಮಾತನಾಡಿ, ನೀಟ್ ಪರೀಕ್ಷೆಯ ಹಗರಣದಿಂದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ.ವೈದ್ಯರಾಗಬೇಕು,ಉನ್ನತ ಶಿಕ್ಷಣ ಪಡೆಯಬೇಕು,ದೇಶ ಸೇವೆ ಮಾಡಬೇಕು ಎಂದು ಕನಸು ಕಂಡಿದ್ದ ವಿದ್ಯಾರ್ಥಿಗಳು ಹತಾಶರಾಗಿದ್ದಾರೆ ದೇಶದ ಬೇರೆ ಬೇರೆ ಭಾಗದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಇದಕ್ಕೆ ಧರ್ಮೇಂದ್ರ ಪ್ರದಾನ್ ನೇರ ಕಾರಣವಾಗಿದೆ.ಇಂತಹ ಬ್ರಷ್ಟ ಶಿಕ್ಷಣ ಮಂತ್ರಿ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದೆವೆ ಎಂದು ಹೇಳಿದರು.
