ಆದ್ಯೊತ್ ಸುದ್ದಿನಿಧಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹುಟ್ಟುಹಬ್ಬದ ಪ್ರಯುಕ್ತ ಜು.೧೨ ಭಾನುವಾರ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮೆಗಾ ಹೆಲ್ತ್ ಕ್ಯಾಂಪ್ ಆಯೋಜಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತ್ ಮೂರ್ತಿ ಹೆಗಡೆ,ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹುಟ್ಟುಹಬ್ಬದ ಪ್ರಯುಕ್ತ ಜು.೧೨ ಭಾನುವಾರ ಮೆಗಾ ಹೆಲ್ತ್ ಕ್ಯಾಂಪ್ ಆಯೋಜಿಸಲಾಗಿದೆ.ಕಾಗೇರಿಯವರು ಮೊದಲಿನಿಂದಲೂ ಜನರ ಆರೋಗ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದ್ದು ಅವರು ಶಾಸಕ,ಸಚೀವ ಸಭಾಪತಿಯವರಾಗಿದ್ದ ಸಮಯದಲ್ಲಿ ಹಲವಾರು ಆಸ್ಪತ್ರೆಗಳ ಅಭಿವೃದ್ಧಿಗೆ ಮುಂದಾಗಿದ್ದರು. ಜಿಲ್ಲೆಯ ಪ್ರಮುಖ ನಗರವಾದ ಶಿರಸಿ ಪಂಡಿತ್ ಆಸ್ಪತ್ರೆಯನ್ನು ೧೦೦ ಹಾಸಿಗೆಯಿಂದ ೨೫೦ ಹಾಸಿಗೆಗೆ ಮೇಲ್ದರ್ಜೆಗೆ ಏರಿಸಿ ಸೌಲಭ್ಯ ಕಲ್ಪಿಸಿದ್ದರು.ಅಲ್ಲದೆ ಜಿಲ್ಲೆಯ ಬೇರೆ ಬೇರೆ ಕಡೆಗೆ ಅನೇಕ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿಸಿದ್ದರು. ಇಂತಹ ಮಹನೀಯರ ಜನ್ಮದಿನವನ್ನು ಅರ್ಥಪೂರ್ಣವಾಗುವಂತೆ ಮಾಡುವ ಉದ್ದೇಶದಿಂದ ನಮ್ಮ ಅನಂತಮೂರ್ತಿ ಹೆಗಡೆ ಚಾರಿಟೆಬಲ್ ಟ್ರಸ್ಟ್ ಹಾಗೂ ಇನ್ನಿತರ ಸಮಾನ ಮನಸ್ಕರ ಸಹಯೋಗದೊಂದಿಗೆ ಹೆಲ್ತ್ಕ್ಯಾಂಪ್ ಮಾಡುತ್ತಿದ್ದೆವೆ ಜನರು ರೋಗ ರುಜಿನಗಳು ಬರುವ ಮೊದಲೇ ಅದನ್ನು ತಡೆಗಟ್ಟುವ ದಾರಿಯನ್ನು ಕಂಡುಕೊಳ್ಳಬೇಕಾಗಿದೆ ಆದ್ದರಿಂದ ಹೆಲ್ತ್ಕ್ಯಾಂಪ್‌ನ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಶ್ರೀಅನಂತ ಮೂರ್ತಿ ಹೆಗಡೆ ಚಾರಿಟೆಬಲ್ ಟ್ರಸ್ಟ್ ಹಾಗೂ ಕಾಗೇರಿ ಅಭಿಮಾನಿ ಬಳಗ, ಬಿಜೆಪಿ ಮಂಡಳ ಘಟಕ, ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘ,ಐಎAಎ ಸಿರಸಿ,ಅಸ್ಮಿತಾ ಫೌಂಡೇಶನ್, ಭಾರತೀಯ ಕ್ಯಾನ್ಸರ್ ಸೊಸೈಟಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯಲಿರುವ ಈ ಹೆಲ್ತ್ ಕ್ಯಾಂಪ್ ನಲ್ಲಿ ಶಿರಸಿಯ ಟಿಎಸ್‌ಎಸ್‌ಎಸ್ ಆಸ್ಪತ್ರೆಯ ಡಾ.ಜಿ.ಬಿ.ಕಾರಂತ, ಡಾ.ಗಜಾನನ ಭಟ್,ಸಿದ್ದಾಪುರ ಶ್ರೇಯಸ್ ಆಸ್ಪತ್ರೆಯ ಡಾ.ಶ್ರೀಧರ ವೈದ್ಯ, ಮಕ್ಕಳ ತಜ್ಞ ಡಾ.ಆಶೀಶ ಜನ್ನು,ಚರ್ಮರೋಗ ತಜ್ಞೆ ಡಾ.ಪ್ರಜ್ಞಾ ಜನ್ನು,ಕಣ್ಣಿನ ತಜ್ಞ ಡಾ. ಹರ್ಷ ನಾಡಿಗೇರ,ಕ್ಯಾನ್ಸರ್ ತಜ್ಞೆ ಡಾ.ಮಮತಾ ಹೆಗಡೆ ಮುಂತಾದವರು ಭಾಗವಹಿಸಲಿದ್ದಾರೆ. ಉಚಿತವಾಗಿ ಬಿ.ಪಿ. ಮತ್ತು ಮಧುಮೇಹ ಕಾಯಿಲೆಯ ತಪಾಸಣೆ ನಡೆಯಲಿದೆ. ಲಭ್ಯವಿರುವ ಔಷಧಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಅನಂತಮೂರ್ತಿ ಹೆಗಡೆ ಮಾಹಿತಿ ನೀಡಿದರು.


ಸುದ್ದಿಗೋಷ್ಠಿಯಲ್ಲಿ ಪ್ರದೀಪ ಹೆಗಡೆ,ಶಿವಕುಮಾರ ನಾಯ್ಕ ಕೊಂಡ್ಲಿ ಉಪಸ್ಥಿತರಿದ್ದರು.
