ಆದ್ಯೊತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಇತ್ತೀಚೆಗೆ ಭಾರತಿ ಸಂಪದ ವಡ್ಡಿನಗದ್ದೆ, ಅರಣ್ಯ ಇಲಾಖೆ, ಕಾಂತಾರಯಜ್ಞ ಕೆರೇಕೊಪ್ಪ ಇವುಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಗಣಪತಿ ಹೆಗಡೆ ಸಂಗ್ರಹಿಸಿ, ಫೋಷಿಸಿ, ಬೆಳೆಸಿದ ವಿನಾಶದಂಚಿನಲ್ಲಿರುವ ಸಸ್ಯ ಪ್ರಬೇಧವಾದ ಬರ್ಕಬಾಳೆ ಪುನರ್ಉತ್ಪತ್ತಿ, ಅರಣ್ಯ ಇಲಾಖೆಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಸಿದ್ದಾಪುರ ವಲಯದ ವಲಯ ಅರಣ್ಯಾಧಿಕಾರಿ ಅಜಯಕುಮಾರ ಎಂ. ಎಸ್. ಮಾತನಾಡಿ, ನಮ್ಮ ಸುತ್ತಲಿನ ವಾತಾವರಣ ಪರಿಶುದ್ಧವಾಗಿದ್ದರೆ ನಾವು ಆರೋಗ್ಯಕರ ಜೀವನ ನಡೆಸಲು ಸಾಧ್ಯ.ಗಿಡ ಮರಗಳನ್ನು ಸಂರಕ್ಷಿಸುವುದರಜೊತೆಗೆ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವತ್ತ ಗಮನವಹಿಸಬೇಕು. ಗಣಪತಿ ಹೆಗಡೆ ವಡ್ಡಿನಗದ್ದೆಯವರ ಪರಿಸರದಕುರಿತಾದ ಕಾಳಜಿ ಅಪರೂಪವಾದದ್ದು.ಅವರದ್ದು ಪರಿಸರ ಮತ್ತು ಪ್ರಕೃತಿಗೆ ನೀಡುತ್ತಿರುವ ವಿಶಿಷ್ಠ ಸೇವೆ. ಅವರು ಅಪರೂಪದ ಸಸ್ಯ, ಬಳ್ಳಿಗಳ ಸಂರಕ್ಷಣೆಗೆ ಪಣತೊಟ್ಟು ಬರ್ಕಬಾಳೆ ಮಾತ್ರವಲ್ಲದೇ ವಿನಾಶದಂಚಿನಲ್ಲಿರುವ ಹಲವಾರು ಪ್ರಭೇದದ ಸಸ್ಯಗಳನ್ನು ಸಂರಕ್ಷಿಸುತ್ತಿದ್ದಾರೆ. ಅವರ ಈ ಕಾರ್ಯ ಮಾದರಿಯಾದುದು ಎಂದು ಹೇಳಿದರು.


ಅತಿಥಿಗಳಾಗಿ ಭಾಗಿಯಾದ ಪರಿಸರತಜ್ಞ ಎಂ ಬಿ ನಾಯ್ಕಕಡಕೇರಿ ಮಾತನಾಡಿ,ಇಂದು ಮನುಷ್ಯತನ್ನ ಸ್ವಾರ್ಥ ಸಾಧನೆಗಾಗಿ ನಮಗೆ ಅತ್ಯಗತ್ಯವಿರುವ ಪರಿಸರವನ್ನೇ ನಾಶ ಮಾಡುತ್ತಿದ್ದಾನೆ. ಕಾಡಿನಲ್ಲಿ ಅನೇಕ ಉಪಯುಕ್ತ ಮರಗಳು ಇಂದು ನಾಶವಾಗುತ್ತಿವೆ. ವಿಶಿಷ್ಟ ಪ್ರಬೇಧದ ಮರಗಳು ನಾಶವಾದರೆ ಅವುಗಳನ್ನು ಅವಲಂಬಿಸಿರುವ ಪ್ರಾಣಿ ಪಕ್ಷಿಗಳೂ ಕೂಡಅವನತಿ ಹೊಂದುತ್ತವೆ. ಬರ್ಕ ಬಾಳೆ ಸಸ್ಯಇಂದುಅವನತಿಯತ್ತ ಸಾಗುತ್ತಿರುವುದರಿಂದಅದನ್ನು ಅವಲಂಬಿಸಿದ್ದ ಬರ್ಕಎನ್ನುವ ಪ್ರಾಣಿಯೂಕೂಡಇಂದು ವಿರಳವಾಗುತ್ತಿದೆ. ಆದ್ದರಿಂದ ನಮ್ಮ ಪರಿಸರ, ಗಿಡ, ಮರಗಳನ್ನು ಕಾಪಾಡಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಥಳೀಯ ಲಯನ್ಸ್ಕ್ಲಬ್ಅಧ್ಯಕ್ಷರಾಘವೇಂದ್ರ ಭಟ್ಟ ಕಲ್ಲಾಳ, ಸಂಕಲ್ಪ ಸೇವಾ ಸಂಸ್ಥೆಯ ಪಿ. ಬಿ. ಹೊಸೂರು, ಸಾಹಿತಿ, ಪತ್ರಕರ್ತಗಂಗಾಧರ ಕೊಳಗಿ, ಪತ್ರಕರ್ತ ಸುಜಯ ಭಟ್ಟ ಮಾತನಾಡಿದರು. ಸಿದ್ದಾಪುರ ಅರಣ್ಯಇಲಾಖೆಯ ವನಪಾಲಕಿ ಅಕ್ಷತಾ ನಾಯ್ಕಇದ್ದರು.


ಕಾರ್ಯಕ್ರಮದಲ್ಲಿಗಣಪತಿ ಹೆಗಡೆ ವಡ್ಡಿನದ್ದೆ ಸಂರಕ್ಷಿಸಿದ ಬರ್ಕಬಾಳೆ ಗಿಡವನ್ನುಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.ಕಾಂತಾರಯಜ್ಞ ಸಂಸ್ಥೆ ಕೊಪ್ಪಲು-ಕೆರೆಕೊಪ್ಪ ಆಯೋಜಿಸಿದ “ಹೆಚ್ಚುತ್ತಿರುವ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳು ಹಾಗೂ ನಾನು ಸೂಚಿಸುವ ಪರಿಹಾರೋಪಾಯಗಳು” ಎನ್ನುವ ವಿಷಯದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಗಣಪತಿ ಹೆಗಡೆ ವಡ್ಡಿನಗದ್ದೆ ಪ್ರಾಸ್ತಾವಿಕ ಮಾತನಾಡಿದರು.ಕಾಂತಾರಯಜ್ಞ ಸಂಸ್ಥೆಯ ಮಂಜುನಾಥ ಹೆಗಡೆಕೆರೆಕೊಪ್ಪ ಸ್ವಾಗತಿಸಿ, ನಿರೂಪಿಸಿದರು.
