ಸಿದ್ದಾಪುರ: ಸಂಪಖಂಡದಲ್ಲಿ ಅನಂತಮೂರ್ತಿ ಹೆಗಡೆಯವರಿಗೆ ಸನ್ಮಾನ

ಆದ್ಯೊತ್ ಸುದ್ದಿನಿಧಿ:
ಸಿದ್ದಾಪುರ ವಾಜಗೋಡ ಗ್ರಾಪಂ ವ್ಯಾಪ್ತಿಯ ಸಂಪಖಂಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಕೊಠಡಿಗಳು ನಿರ್ಮಾಣಗೊಂಡ ಹಿನ್ನಲೆ ಗಣಹೋಮ, ವಾಸ್ತು ಶಾಂತಿ ಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಪೂಜಾ ಕಾರ್ಯಕ್ರಮದಲ್ಲಿ ಅನಂತ್ ಮೂರ್ತಿ ಹೆಗಡೆ ಚರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತ್ ಮೂರ್ತಿ ಹೆಗಡೆ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಅವರು ಇತ್ತೀಚಿಗೆ ಶಾಲೆಗೆ ಫಿಲ್ಟರ್ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಇದೇ ಸಂದರ್ಭದಲ್ಲಿ ಅವರನ್ನು ಎಸ್ ಡಿ ಎಂ ಸಿ ಹಾಗೂ ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಗೌರವ ಸ್ವೀಕರಿಸಿ ಮಾತನಾಡಿದ ಅನಂತಮೂರ್ತಿ ಹೆಗಡೆ, ಶಾಲೆ ಮಕ್ಕಳು ಸುಂದರ ವಾತಾವರಣದಲ್ಲಿ ಉತ್ತಮ ಆಹಾರ ಮತ್ತು ನೀರು ಸೇವನೆಯಿಂದ ಸದೃಡ ದೇಹವನ್ನು ನಿರ್ಮಿಸಿಕೊಳ್ಳಬೇಕು. ದೇಶಕ್ಕೆ ಸಂಪತ್ತಾಗಿ ಬೆಳೆಯಬೇಕಾದ ಮಕ್ಕಳು ಬಾಲ್ಯದಲ್ಲಿ ಉತ್ತಮ ದೇಹ ನಿರ್ಮಿಸಿಕೊಂಡರೆ ಸಾಧನೆ ಸಾದ್ಯ ಹಾಗಾಗಿ ನಾವು 150ಕ್ಕೂ ಹೆಚ್ಚು ಶಾಲೆಗಳಿಗೆ ಈಗಾಗಲೇ ವಾಟರ್ ಫಿಲ್ಟರ್ ನೀಡಿದ್ದೇವೆ ಮತ್ತು ಕೇವಲ ಶಾಲೆಗೆ ಅಷ್ಟೇ ಅಲ್ಲದೆ ಬೇರೆ ಬೇರೆ ಕ್ಷೇತ್ರಗಳಿಗೆ ದಾನ ನೀಡುತ್ತಾ ಬಂದಿದ್ದೇವೆ.


ಪುನೀತ್ ರಾಜಕುಮಾರ್ ಅವರು ಮನುಷ್ಯ ಜೀವಿತ ಅವಧಿಯಲ್ಲಿ ಒಳ್ಳೆಯದನ್ನು ಮಾಡಿ ನಾಲ್ಕು ಜನರಿಗೆ ಸಹಾಯ ಆಗಬೇಕು ಎನ್ನುವ ಮಾರ್ಗದರ್ಶನ ನೀಡಿ ಹೋಗಿದ್ದಾರೆ ಅವರಂತೆ ಆದರ್ಶ ಬದುಕನ್ನು ನಾವು ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಾಲಕ, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

About the author

Adyot

Leave a Comment