ಆದ್ಯೊತ್ ಸುದ್ದಿನಿಧಿ:
ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರಕಾರದ ಮೊದಲ ವಿಕೆಟ್ ಪತನವಾಗಿದ್ದು ಸಚೀವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ವಾಲ್ಮೀಕಿ ನಿಗಮದ ಹಗರಣದಲ್ಲಿ ಈ ಹಿಂದೆ ರಾಜೀನಾಮೆ ನೀಡಿದ್ದ ನಾಗೇಂದ್ರ ಡಿ.ಕೆ. ಶಿವಕುಮಾರ ಸರಕಾರದಲ್ಲಿ ಸಚೀವಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು ಆದರೆ ಬಿಜೆಪಿಯವರು ಇದನ್ನು ತೀವ್ರವಾಗಿ ವಿರೋಧಿಸಿದ್ದರು ಅಧಿವೇಶನ ನಡೆಯಲು ಅಡ್ಡಿಪಡಿಸಿದ್ದಲ್ಲದೆ ಪಾದಯಾತ್ರೆ ನಡೆಸಲು ತಯಾರಿ ನಡೆಸಿದ್ದರು.
ಆದರೆ ತೀವ್ರ ಒತ್ತಡದಲ್ಲಿ ನಾಗೇಂದ್ರ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.


ಕಣ್ಣೀರಿನೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗೇಂದ್ರ,
ರಾಜ್ಯ ಹಾಗೂ ಜನ ಹಿತಗಳ ಕಾರ್ಯ ಯೋಜನೆಗಳ ಕುರಿತು ಅಧಿವೇಶನದಲ್ಲಿ ನಡೆಯ ಬೇಕಾಗಿದ್ದ ಚರ್ಚೆಗಳು ತೆಗೆದುಕೊಳ್ಳಬೇಕಾಗಿದ್ದ ನಿರ್ಣಯಗಳೆಲ್ಲವನ್ನು ಮೂಲೆಗುಂಪು ಮಾಡಿ ಇಲ್ಲ ಸಲ್ಲದ ಆರೋಪಗಳನ್ನು
ನನ್ನ ಮೇಲೆ ಹೇರುವ ಮೂಲಕ ವಾಲ್ಮೀಕಿ ಹಗರಣಕ್ಕೆ ತಲೆದಂಡವಾಗಿದೆ ನನ್ನ ವಿರುದ್ಧ ಪ್ರತಿಭಟನೆಗೆ ವಿರೋಧ ಪಕ್ಷ ಬಿಜೆಪಿ ಮುಂದಾಗಿದೆ.
ಪಕ್ಷಕ್ಕೆ ಮುಜುಗರ ತಂದೊಡ್ದದೆ,ನನ್ನ ಮೇಲೆ ಬಂದಿರುವ ಕಳಂಕವನ್ನು ನಿಯಮಾನುಸಾರ ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿದವರಿಗೆಲ್ಲ ಉತ್ತರ ನೀಡುತ್ತೇನೆ ಎಂದು ಹೇಳಿದರು.


ದಲಿತ , ಶೋಷಿತ ವರ್ಗಗಳ , ಆದಿವಾಸಿ ಸಮುದಾಯದ ಅಲ್ಪ ಸಂಖ್ಯಾತರ ನಾಯಕರ ಬೆಳವಣಿಗೆ ಅಥವಾ ಮಂತ್ರಿಗಿರಿ ದೊರೆತಿರುವುದು ಮನು ವಾದಿಗಳಿಗೆ ಸಹಿಸಲಾಗುತ್ತಿಲ್ಲ 2024 ರಲ್ಲಿ ಸಚಿವನಾದಾಗ ಕೂಡ ಇಲ್ಲಸಲ್ಲದ ಆರೋಪ ಮಾಡಿ ರಾಜೀನಾಮೆ ನೀಡುವಂತೆ ಹಾಗೂ 3 ತಿಂಗಳ ಶಿಕ್ಷೆಯನ್ನು ನೀಡುವಂತೆ ಮಾಡಿದ್ದರು. ಆದರೆ ಇಂದು ಆರೋಪಿಸುತ್ತಿರುವಂತಹ ವಾಲ್ಮೀಕಿ ಹಗರಣದಲ್ಲಿ ನನ್ನದು ಯಾವುದೇ ಪಾತ್ರವಿಲ್ಲ ಹಾಗೂ ಎಸ್ ಐ ಟಿ,ಸಿಓಡಿ ಹಾಗೂ ಪೊಲೀಸ್ ಇಲಾಖೆಯ ಮೇಲೆ ಸಂಪೂರ್ಣ ವಿಶ್ವಾಸವಿದ್ದು ತನಿಖೆಗೂ ಸಿದ್ಧ ನಾನು ಯಾರಿಗೂ ಹೆದರುವುದಿಲ್ಲ ಬಿಜೆಪಿಯವರಿಗೆ ತಾಕತ್ ಇದ್ದರೆ ಜನತಾ ನ್ಯಾಯಾಲಯದಲ್ಲಿ ನನ್ನನ್ನು ಎದುರಿಸಲಿ ಎಂದು ಸವಾಲ್ ಹಾಕಿದರು.
