ಸಿದ್ದಾಪುರ:ನಾಮಧಾರಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಚಾಲನೆ

ಆದ್ಯೊತ್ ಸುದ್ದಿನಿಧಿ
ಸಿದ್ದಾಪುರ ತಾಲೂಕು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ಸಮುದಾಯಭವನದ ಮುಂದುವರಿದ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದರು.


ಭೀಮಣ್ಣ ನಾಯ್ಕ ಮಾತನಾಡಿ,ಯಾವುದೇ ಕಾರ್ಯಕ್ರಮಗಳಿಗೆ ಅಥವಾ ಅಭಿವೃದ್ಧಿ ಕೆಲಸಗಳಿಗೆ ಕೇವಲ ಧನ ಸಹಾಯ ಮಾಡಿದವರಿಗಷ್ಟೇ ಪ್ರಾಧಾನ್ಯತೆ ನೀಡುವುದು ಮತ್ತು ಅವರಷ್ಟೇ ಗೌರವಕ್ಕೆ ಅರ್ಹರೆಂಬ ಭಾವ ಸಮಾಜದಲ್ಲಿರುವುದು ತಪ್ಪು ಕಲ್ಪನೆಯಾಗಿದೆ.ಪ್ರತಿಯೊಂದು ಹಂತದಲ್ಲಿಯೂ ಹಗಲು ರಾತ್ರಿಯೆನ್ನದೆ ಶ್ರಮದಾನ ನೀಡಿದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇವೆ ಸಲ್ಲಿಸುವ ಎಲ್ಲರೂ ಗೌರವಕ್ಕೆ ಪಾತ್ರರು
ಅಭಿವೃದ್ಧಿ ಕೇವಲ ನಿಂತ ನೀರಲ್ಲ ಸದಾ ಹರಿಯುತ್ತಿರುತ್ತದೆ ಹಾಗೆಯೇ ಕೇವಲ ಕಟ್ಟಡ , ರಸ್ತೆ ನಿರ್ಮಾಣ ಮಾತ್ರ ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ ಬದಲಿಗೆ ಗ್ರಾಮೀಣ ಭಾಗದಿಂದ ಪಟ್ಟಣದ ವ್ಯಾಪ್ತಿಯ ಎಲ್ಲಾ ಜನರಿಗೂ ಮೂಲಭೂತ ಸೌಕರ್ಯಗಳು, ಅಗತ್ಯತೆಗಳು ನಿಯಮಿತವಾಗಿ ದೊರೆಯುವುದೇ ಅಭಿವೃದ್ಧಿಯಾಗಿದ್ದು ಯಾವುದೇ ಜಾತಿ ಮತ ವರ್ಗಗಳ ತಾರತಮ್ಯವಿಲ್ಲದೆ ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರದೆ ಎಲ್ಲಾ ವರ್ಗಗಳ ಸಮುದಾಯಗಳ ಪ್ರಗತಿಗೆ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು


ಪ್ರಾಸ್ತಾವಿಕ ಮಾತನಾಡಿದ ತಾಲೂಕು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ ನಾಯ್ಕ್, ನಾಮಧಾರಿ ಸಮುದಾಯ ಕಟ್ಟಡ ನಿರ್ಮಾಣಕ್ಕೆ
ಇಲ್ಲಿಯವರೆಗೆ ಸರ್ಕಾರ ಹಾಗೂ ಶಾಸಕ ಸಂಸದರೂ ಸೇರಿ ಒಟ್ಟು 2 ಕೋಟಿ 38 ಲಕ್ಷ ರೂಪಾಯಿ ಅನುದಾನವನ್ನು ನೀಡಿದ್ದು, ವಿವಿಧ ಸಮುದಾಯಗಳಿಂದ 80 ಲಕ್ಷ ರೂ ಸಂಗ್ರಹವಾಗಿದೆ ಒಟ್ಟು 3.18 ಇಲ್ಲಿಯವರೆಗೆ ಖರ್ಚಾಗಿದ್ದು ಪೂರ್ಣ ಸಿದ್ಧತೆಯಾಗಲು ಅಂದಾಜು 5 ಕೋಟಿ ರೂ ಆಗಬಹುದು.ನಾಮಧಾರಿ ಸಮುದಾಯ ಭವನವು ಸಮಾಜದ ಎಲ್ಲಾ ಸಮುದಾಯಗಳಿಗೂ ಮುಕ್ತವಾಗಿದೆ. ಹಾಗೆಯೇ ಇನ್ನುಳಿದ ಕೆಲಸ ಕಾರ್ಯಗಳಿಗೆ ಸಮುದಾಯದ ಎಲ್ಲಾ ಜನರು ಶ್ರಮವಹಿಸಬೇಕುಎಂದು ಹೇಳಿದರು.

ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಆನಂದ್ ನಾಯ್ಕ್ , ಕಾರ್ಯದರ್ಶಿ ಎಸ್ ಎಂ ನಾಯ್ಕ್ ನಿರ್ಮಿತಿಯ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಶೈಲಾ ನಾಯ್ಕ್, ಮತ್ತು ಸುದೀರ್ ಬೆಂಗ್ರೆ ಹಾಡಿದರು.ಸಂಘದ ಉಪಾಧ್ಯಕ್ಷ ಕೆ.ಜಿ ನಾಗರಾಜ ಸ್ವಾಗತಿಸಿದರು. ನಾಗರಾಜ್ ನಾಯ್ಕ್ ಬೆಡ್ಕಣಿ ನಿರೂಪಣೆ
ಮಾಡಿದರೆ ಸಂಘದ ಉಪಾಧ್ಯಕ್ಷ ವಿ.ಎನ್.ನಾಯ್ಕ ವಂದನಾರ್ಪಣೆ ಮಾಡಿದರು

About the author

Adyot

Leave a Comment