ಅನಂತಮೂರ್ತಿ ಹೆಗಡೆಯವರಿಂದ ಶ್ರೀಬ್ರಹ್ಮಾನಂದ ಸ್ವಾಮೀಜಿಯವರ ಪಾದಪೂಜೆ

ಆದ್ಯೊತ್ ಸುದ್ದಿನಿಧಿ:
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡ ಶಿರಸಿ ಹಾಗೂ ಸಿದ್ದಾಪುರ, ಬನವಾಸಿ ಭಾಗದ ಬಕ್ತಾದಿಗಳೊಂದಿಗೆ ಬೈಂದೂರಿನ ಹೋಳಿಹೋಳೆಯಲ್ಲಿರುವ ಶ್ರೀ ಬಿಳಿಸೆಲೆ ವಿನಾಯಕ ದೇವಸ್ಥಾನದ ಪವಿತ್ರ ಪ್ರಾಂಗಣದಲ್ಲಿ ನಡೆಯುತ್ತಿರುವ ಪರಮಪೂಜ್ಯ ಮಹಾ ಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆ ಕಾರ್ಯಕ್ರಮದಲ್ಲಿ ಅತ್ಯಂತ ಶ್ರದ್ದಾ- ಭಕ್ತಿ
ಗಳಿಂದ ಪಾಲ್ಗೊಂಡರು.

ಅನಂತಮೂರ್ತಿ ಹೆಗಡೆಯವರು ಶ್ರೀಗಳ ಪಾದಪೂಜೆಯನ್ನು ನೇರವೇರಿಸಿ ಮಹಾಸಂಕಲ್ಪ ಕೈಗೊಂಡರು. ಶ್ರೀಗಳೊಂದಿಗೆ ಆತ್ಮೀಯವಾದ ಸಂವಾದ ನಡೆಸಿ ಗುರುಗಳಿಂದ ಮಾರ್ಗದರ್ಶನ ಹಾಗೂ ಮಂತ್ರಾಕ್ಷತೆಯನ್ನು ಪಡೆದುಕೊಂಡರು. ಬನವಾಸಿ ಬಿಜೆಪಿ ಮಂಡಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಉಪಾಧ್ಯಕ್ಷ ರಾಘವೇಂದ್ರ ನಾಯ್ಕ ಬದನಗೋಡು, ಶಿನಾ ಪೂಜಾರಿ ಗೇರುಮನೆ, ವೇನು ಗೋಪಾಲ ಹೆಗಡೆ, ಪ್ರವೀಣ ಹೆಗಡೆ, ಸಿದ್ದಾಪುರದ ವಿನಾಯಕ ನಾಯ್ಕ, ಕೃಷ್ಣಮೂರ್ತಿ ನಾಯ್ಕ ಐಸೂರು, ಪ್ರಜೋತ, ನವೀನ ನಾಯ್ಕ ಸೇರಿದಂತೆ ಅನಂತಮೂರ್ತಿ ಹೆಗಡೆಯವರ ಜೋತೆ ಶ್ರೀಗಳ ಪಾದಪೂಜೆ ಹಾಗೂ ಮಹಾಸಂಕಲ್ಪದಲ್ಲಿ ಭಾಗವಹಿಸಿದರು.
ಚಾತುರ್ಮಾಸ ಸಮಿತಿ ಅಧ್ಯಕ್ಷ ಗುರುರಾಜ್ ಗಂಟಿಹೊಳಿ ಉಪಸ್ಥಿ
ತರಿದ್ದರು.


ಈ ವೇಳೆ ಮಾತನಾಡಿದ ಅನಂತಮೂರ್ತಿ ಹೆಗಡೆಯವರು ಚಾತುರ್ಮಾಸ್ಯ ವ್ರತಾಚರಣೆಯಂತಹ ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ನಮ್ಮ ಕ್ಷೇತ್ರದ ಭಕ್ತಾದಿಗಳು ಹಾಗೂ ಆತ್ಮೀಯರೊಂದಿಗೆ ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾಗಿರುವುದು ನನಗೆ ಧನ್ಯತೆ ಭಾವ ಮೂಡಿಸಿದೆ. ಶ್ರೀಗಳ ಆರ್ಶೀವಾದ ಎಲ್ಲರ ಮೇಲೆ ಸದಾ ಇರಲಿ ಎಂದು ಹೇಳಿದರು.

About the author

Adyot

Leave a Comment