ಸಿದ್ದಾಪುರ ಶ್ರೀಮನ್ನೆಲೆಮಾವು ಮಠದಲ್ಲಿ ಭಾಗವತ ಸಪ್ತಾಹ ಪ್ರಾರಂಭ

ಆದ್ಯೊತ್ ಸುದ್ದಿನಿಧಿ
ಸಿದ್ದಾಪುರ ತಾಲೂಕಿನ ಶ್ರೀಮನ್ನೆಲೆಮಾವುಮಠದಲ್ಲಿ ಶ್ರೀಮಾಧವಾನಂದ ಭಾರತೀ ಸ್ವಾಮೀಜಿಗಳ ಐದನೇ ವರ್ಷದ ಚಾತುರ್ಮಾಸ್ಯದ ಅಂಗವಾಗಿ ಶ್ರೀಗಳ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಭಾಗವತ ಸಪ್ತಾಹ ಆರಂಭವಾಯಿತು.


ಬೆಳಿಗ್ಗೆ ೬ ಗಂಟೆಯಿಂದ ವಿ.ಗಂಗಾಧರ ಬೋಡೆ ಯಲ್ಲಾಪುರ ಹಾಗೂ ವಿ.ವಿಶ್ವನಾಥ ಭಟ್ಟ ಧೋರಣಗಿರಿಯವರು ಶ್ರೀ ಕೃಷ್ಣನ ಪೂಜೆಯೊಂದಿಗೆ ಭಾಗವತ ಪಾರಾಯಣ ಆರಂಭಗೊಂಡಿತು. ಮಧ್ಯಾಹ್ನ ೧ ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಂಡಿದ್ದರು.


ಸಾಲಕೋಡ, ಹಾಲೆಗೌರಿ, ಸರಕುಳಿ ಮೊದಲಾದ ಗ್ರಾಮಗಳ ಶಿಷ್ಯರು ಸೇವೆಯನ್ನು ಸಲ್ಲಿಸಿದರು.ಮಧ್ಯಾಹ್ನ ೩.೩೦ ರಿಂದ ವಿದ್ವಾನ್ ಡಾ. ಶಂಕರ ಭಟ್ಟ ಉಂಚಳ್ಳಿಯವರಿಂದ ಭಾಗವತ ಪ್ರವಚನ ನಡೆಯಿತು. ಸೆ.೭ ಸೋಮವಾರದವರೆಗೆ ಪ್ರತಿನಿತ್ಯವೂ ಭಾಗವತ ಪಾರಾಯಣ ನಡೆಯಲಿದೆ.

About the author

Adyot

Leave a Comment