ಆದ್ಯೊತ್ ಸುದ್ದಿನಿಧಿ:
ಸಿದ್ದಾಪುರ ಪಟ್ಟಣದ ತಹಸೀಲ್ದಾರ ಕಚೇರಿ ಎದುರು ಬುಧವಾರ ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ ಸಂತೋಷ ಭಂಡಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.


ಪ್ರತಿಭಟನೆಯಲ್ಲಿ ಮಾತನಾಡಿದ ತಿಮ್ಮಪ್ಪ ಎಂ.ಕೆ. ಪಹಣಿ ಇಲ್ಲದ ಜಾಗದಲ್ಲಿರುವ ಮನೆಗಳ ಕರ ವಸೂಲಿ ಮಾಡಬಾರದು ಎಂಬ ಆದೇಶ ವಿಧಾನಸಭೆಯಲ್ಲಿ ಮಂಡನೆಯಾದ ಸಂದರ್ಭದಲ್ಲಿ ಶಾಸಕರು ವಿರೋಧ ವ್ಯಕ್ತಪಡಿಸಬೇಕಿತ್ತು.ಬಡವರ ಕುರಿತು ಕಾಳಜಿ ಇದ್ದರೆ ಆದೇಶ ಹೊರಬರುವ ಮೊದಲೇ ಸದನದಲ್ಲಿ ಧ್ವನಿ ಎತ್ತಬೇಕಿತ್ತು.ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದವರು ಇದೀಗ ಅತಿಕ್ರಮಣದ ಮನೆಗಳನ್ನು ತೆರವುಗೊಳಿಸಿದರೆ ರಾಜೀನಾಮೆ ನೀಡುವುದಾಗಿ ಹೇಳುತ್ತಿದ್ದಾರೆ. ಕಳೆದ ಮೂರೂವರೆ ವರ್ಷಗಳಲ್ಲಿ ತಾಲೂಕಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಶಾಸಕರು ಜನರಿಗೆ ತಿಳಿಸಬೇಕು. ಅಲ್ಲದೆ ಮಳೆಕೊರತೆ ಅನುಭವಿಸುತ್ತಿರುವ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.


ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸುವ ಜನಪ್ರತಿನಿಧಿಗಳು ಚುನಾವಣೆ ಬಳಿಕವೂ ಅದೇ ರೀತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಳೆದ ಕೆಲವು ವರ್ಷಗಳಲ್ಲಿ ಬಡವರಿಗೆ ಮನೆ ಮಂಜೂರು, ಬರ ಪರಿಸ್ಥಿತಿ ಹಾಗೂ ಸ್ಥಳೀಯ ಆಸ್ಪತ್ರೆಯ ಸೌಲಭ್ಯಗಳ ಕುರಿತು ಸರ್ಕಾರದ ಗಮನ ಸೆಳೆಯಬೇಕಿತ್ತು ಆ ಕೆಲಸವನ್ನು ಶಾಸಕರು ಮಾಡುತ್ತಿಲ್ಲ ಮನೆಗಳ ನಂಬರ್ ರದ್ದುಗೊಳಿಸುವುದರಿಂದ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ಈ ಕುರಿತು ಮರುಪರಿಶೀಲನೆ ನಡೆಸಬೇಕು. ಬಡವರ ಮನೆಗಳಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಪ್ರಮುಖ ಉಪೇಂದ್ರ ಪೈ ಮಾತನಾಡಿ, ಶಾಸಕರು ಎಲ್ಲಾ ವಿಷಯದಲ್ಲೂ ವಿಫಲರಾಗಿದ್ದಾರೆ ಕ್ಷೇತ್ರದ ಸಮಸ್ಯೆ ಬಗೆಹರಿಸುವ ಚಾಕಚಕ್ಯತೆಯೇ ಅವರಲಿಲ್ಲ ಎಲ್ಲದಕ್ಕೂ ಸಮಸದರನ್ನು ದೂರುತ್ತಾರೆ ನಿಮ್ಮ ಕೆಲಸ ನೀವು ಮಾಡಿ ಸಂಸದರಿAದ ಹೇಗೆ ಕೆಲಸ ಮಾಡಿಸಬೇಕು ಎನ್ನುವುದು ನಮಗೆ ಗೊತ್ತಿದೆ. ನದಿತಿರುವ ಯೋಜನೆಗೆ ನಮ್ಮ ವಿರೋಧವಿದೆ ಎನ್ನುತ್ತಿದ್ದ ಶಾಸಕರು ಈಗ ಮುಖ್ಯಮಂತ್ರಿಗಳು ಕೇಂದ್ರಸಚೀವರಿಗೆ ಒಪ್ಪಿಗೆ ಪತ್ರ ನೀಡಿರುವುದನ್ನು ನೋಡಿದ ಮೇಲೆ ಮಾತನಾಡುತ್ತಿಲ್ಲ, ಅತಿಕ್ರಮಣ ಜಾಗದಿಂದ ಅಧಿಕಾರಿಗಳು ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಅಧಿಕಾರಿಗಳನ್ನು ತಡೆಯುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ.ಮನೆಗಳ ನಂಬರ್ ರದ್ದುಗೊಳಿಸಿ ಕರ ವಸೂಲಿ ನಿಲ್ಲಿಸುವುದರಿಂದ ಮುಂದಿನದಿನಗಳಲ್ಲಿ ಜನರಿಗೆ ವಿವಿಧ ಸರ್ಕಾರಿ ಸೌಲಭ್ಯಗಳು ದೊರೆಯುವಲ್ಲಿ ಸಮಸ್ಯೆಯಾಗಬಹುದು. ಈ ಕುರಿತು ¸ ಶಾಸಕರು ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಹೇಳಿದರು
ಮಾಜಿ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಮಾತನಾಡಿ, ಕಳೆದ ಒಂದು ವಾರದಿಂದ ನಮ್ಮ ಮನೆ, ನಮ್ಮ ಹಕ್ಕು ಹೋರಾಟ ನಡೆಯುತ್ತಿದೆ. ಸರ್ಕಾರದ ಆದೇಶ ಜನವಿರೋಧಿಯಾಗಿದೆ. ಗ್ರಾಮ ಪಂಚಾಯಿತಿಗಳಲ್ಲೇ ವಿದ್ಯುತ್ ಬಿಲ್‌ಗಳ ಬಾಕಿ ಇರುವ ಸಂದರ್ಭದಲ್ಲಿ ಸರ್ಕಾರದ ಆರ್ಥಿಕ ನಿರ್ವಹಣೆ ಕುರಿತು ಪ್ರಶ್ನೆಗಳು ಮೂಡುತ್ತಿವೆ ಎಂದು ಹೇಳಿದರು.

ಬಿಜೆಪಿ ವಿಶೇಷ ಆಹ್ವಾನಿತ ಗುರುರಾಜ ಶಾನಭಾಗ,ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ, ಮಾತನಾಡಿದರು.
ಪ್ರತಿಭಟನೆಯಲ್ಲಿ ವಿಜೇತ್ ಗೌಡರ್,ಎ.ಜಿ. ನಾಯ್ಕ, ಮಂಜುನಾಥ ಭಟ್ಟ, ಕೃಷ್ಣಮೂರ್ತಿ ಐಸೂರು, ಸುರೇಶ ಬಾಲಿಕೊಪ್ಪ,ಲಕ್ಷö್ಮಣ ನಾಯ್ಕ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
