ಆದ್ಯೊತ್ ಸುದ್ದಿನಿಧಿ:
ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳಿಂದ ಮೈಸೂರು ದಸರಾ ಉದ್ಘಾಟನೆ ಮಾಡಿಸುತ್ತಿರುವುದಕ್ಕೆ ನಾಡಿನ ಭಕ್ತರು ಹಾಗೂ ಕನ್ನಡಿಗರಲ್ಲಿ ಸಂತಸ ಉಂಟು ಮಾಡಿದೆ ಎಂದು ಚಿತ್ರದುರ್ಗದ ಭರಮಸಾಗರದ ಕಾಂಗ್ರೆಸ್ ಮುಖಂಡ ಎಸ್ಎಂಎಲ್ ಪ್ರವೀಣ್ ಹೇಳಿದ್ದಾರೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ರ ಉದ್ಘಾಟನೆಗೆ ಕೊಪ್ಪಳದ ಶ್ರೀ ಗವಿಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳನ್ನು ಆಹ್ವಾನಿಸಿರುವುದು ನಾಡಿನ ಜನತೆಗೆ ಹೆಮ್ಮೆಯ ಹಾಗೂ ಸಂತಸದ ಸಂಗತಿಯಾಗಿದೆ.
ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗವಿಮಠದ ಮೂಲಕ ಸಲ್ಲಿಸುತ್ತಿರುವ ಅಪಾರ ಸೇವೆಯನ್ನು ಗುರುತಿಸಿ ಶ್ರೀಗಳನ್ನು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಅತ್ಯಂತ ಗೌರವದ ವಿಚಾರವಾಗಿದೆ.



ಶ್ರೀಗಳ ಪಾವನ ಸಾನ್ನಿಧ್ಯದಲ್ಲಿ ಮೈಸೂರು ದಸರಾ ಮಹೋತ್ಸವವು ಇನ್ನಷ್ಟು ಭಕ್ತಿ, ಸಂಸ್ಕೃತಿ ಮತ್ತು ಸೌಹಾರ್ದತೆಯಿಂದ ಕಂಗೊಳಿಸಲಿ. ನಾಡಿನ ಜನರಲ್ಲಿ ಶಾಂತಿ, ಸಮೃದ್ಧಿ ಹಾಗೂ ಸಾಮರಸ್ಯ ನೆಲೆಸಲಿ ಎಂದು ಹಾರೈಸೋಣ ಎಂದು ಅವರು ತಿಳಿಸಿದ್ದಾರೆ
