ಆದ್ಯೊತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ
ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗೋಮಾತೆಯ ಗೌರವದ ಸಹಿಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀ ಆರೋಢ ಭಾರತೀ ಸ್ವಾಮೀಜಿ ಮಾತನಾಡಿ,ನಮ್ಮ ಸನಾತನ ಸಂಸ್ಕೃತಿ ಶುರುವಾಗುವುದು ತಾಯಿಯ ಮೂಲಕ.ಮಾತೆ, ಭೂಮಾತೆ, ಜಲಮಾತೆ ಇವೆಲ್ಲವನ್ನೂ ನಾವು ತಾಯಿ ಅಂತ ಕರೆಯುತ್ತೇವೆ. ನಮ್ಮ ಹೆತ್ತತಾಯಿ ಅಲ್ಪಕಾಲ ಹಾಲು ಉಣಿಸಿದರೆ ಗೋಮಾತೆ ನಮ್ಮ ಜೀವಮಾನ ಪೂರ್ತಿ ಹಾಲು ಉಣಿಸುತ್ತದೆ. ಆದರೆ ಇಂತಹ ಗೋಮಾತೆಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಸಮಸ್ಯೆಗೆ ನಾವೇ ಕಾರಣರು, ನಾವು ಚೆನ್ನಾಗಿರಬೇಕು ಎಂದು ಸೌಹಾರ್ಧ ವಾತಾವರಣ ಇರಬೇಕು ಆದರೆ ಇದು ದೇಶದಲ್ಲಿ ಸಿಗುವುದು ಕಷ್ಟವಾಗಿದೆ.ಗೋಮಾತೆಯ ಹಾಲು ಶ್ರೇಷ್ಠವಾದುದು ಇದು ವೈಜ್ಞಾನಿಕವಾಗಿ ದೃಢಪಟ್ಟಿದೆ ಇದರಿಂದ ಹಸು ಶ್ರೇಷ್ಠವಾಗಿದೆ ಎಂದು ಹೇಳಿದರು.


ರಾಜಸ್ಥಾನದ ಶ್ರೀರವೀಂದ್ರನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಗೋಮಾತೆಗೆ ಗೌರವ ಸಲ್ಲಿಸಬೇಕು ಎಂಬ ಕಾರಣದಿಂದ ಅಭಿಯಾನ ನಡೆಸಲಾಗುತ್ತಿದೆ.ಗೋರಕ್ಷಣೆಗೆ ಅನೇಕ ಬೇಡಿಕೆಗಳನ್ನು ನಾವು ಸರಕಾರಕ್ಕೆಸಲ್ಲಿಸುತ್ತಿದ್ದೆವೆ.ಬೇಡಿಕೆಗಳ ಈಡೇರಿಕೆಗೆ ಒಂದು ಪುಟದ ಪತ್ರ ಬರೆದು ಬೇಕಾದವರಿಗೆ ಮನವಿ ಸಲ್ಲಿಸಿಕೈತೊಳೆದುಕೊಳ್ಳಬಹುದಾಗಿತ್ತು. ಆದರೆ ಹಾಗಾಗಬಾರದು ಅದು ಕಾರ್ಯ ಸಾಧು ಆಗುವುದಿಲ್ಲ ಅನ್ನುವ ಕಾರಣಕ್ಕೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನ ಆರಂಭವಾಯಿತು. ಇದನ್ನ ಯಾವುದೇ ಒಬ್ಬ ವ್ಯಕ್ತಿ, ಒಂದು ಸಂಸ್ಥೆ, ಒಂದು ಪಕ್ಷ ಮಾಡ್ತಾ ಇಲ್ಲ. ಇಡೀ ದೇಶದಲ್ಲಿ ಎಲ್ಲಾ ಸಂತರು ಕೈಜೋಡಿಸಿ ಸಂತರ ನೇತೃತ್ವದಲ್ಲಿ ಈ ಅಭಿಯಾನ ನಡೀತಾ ಇದೆ.

ಈಗಾಗಲೇ ಎರಡು ಹಂತದ ಸಹಿ ಸಂಗ್ರಹ ಅಭಿಯಾನ ಮುಕ್ತಾಯವಾಗಿದೆ 2೦ ಕೋಟಿ ಸಹಿ ಸಂಗ್ರಹ ಆಗಿ ವಿಶ್ವ ದಾಖಲೆ ಮಾಡಿದೆ. ಈಗ ಮೂರನೇ ಹಂತದಲ್ಲಿ 3೦ಕೋಟಿ ಸಹಿ ಸಂಗ್ರಹದ ಗುರಿ ಹೊಂದಲಾಗಿದೆ.ಗೋಹತ್ಯೆ ನಿಷೇಧವಾಗಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾದರೂ ಕೇಂದ್ರಸರಕಾರ ಗೋಸಚೀವಾಲಯವನ್ನು ಸ್ಥಾಪಿಸಬೇಕು,ಹಿಂದೆ ಗೋಮಾಳವಿತ್ತು ಅದನ್ನು ಈಗ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಇದನ್ನು ಗೋವಿಗಾಗಿ ಉಳಿಸಬೇಕು ಹೀಗೆ ಇವೆಲ್ಲ ಬೇಡಿಕೆಗಳ ಈಡೇರಿಕೆಗಾಗಿ ಸಹಿಸಂಗ್ರಹಣಾ ಅಭಿಯಾನ ನಡೆಸಲಾಗುತ್ತಿದೆ ಎಂದು ಶ್ರೀಗಳು ಹೇಳಿದರು.


ಅಭಿಯಾನದಲ್ಲಿ ಡಾ.ರವಿ ಹೆಗಡೆ,ಮಹೇಶ ಹೆಗಡೆ ಚಟ್ನಳ್ಳಿ,ಸಿ.ಎಸ್.ಗೌಡರ್,ಪಿ.ಬಿ.ಹೊಸೂರು,ಆರ್.ಎಸ್.ಹೆಗಡೆ ಮುಂತಾದವರು ಭಾಗವಹಿಸಿದ್ದರು.
ಡಿಸಂಬರ್–17 ಗೋಮಾತಾ ಗೌರವ ದಿನ

ಗೋಮಾತೆಯ ಗೌರವದ ಅಭಿಯಾನದ ಮುಖ್ಯ ಉದ್ದೇಶಗಳು
ರಾಷ್ಟ್ರ ಮತ್ತು ಭಾರತೀಯ ಸಂಸ್ಕೃತಿಯ ಹಿತದೃಷ್ಟಿಯಿಂದ ಸಂವಿಧಾನದ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ಮತ್ತು ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಂದ ಆಡಳಿತಾತ್ಮಕ ರೀತಿಯಲ್ಲಿ ನೇರ ಹಸ್ತಕ್ಷೇಪದ ಮೂಲಕ, ಇಡೀ ಭಾರತೀಯ ಸ್ಥಳೀಯ ಗೋ ತಳಿಗೆ ರಾಷ್ಟ್ರೀಯ ಗೌರವವನ್ನು ಒದಗಿಸುವುದು.
ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತರುವುದು.
ಗೋಮಾತೆಗೆ ರಾಷ್ಟ್ರ ಮಾತೆ, ರಾಷ್ಟ್ರ ಗೌರವದ, ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಸಂಪತ್ತಿನ ಸ್ಥಾನಮಾನವನ್ನು ಮತ್ತು ಸಂರಕ್ಷಣಾ ಕಾನೂನಿನಡಿ ಗೋಮಾತೆಗೆ ಸಾಂವಿಧಾನಿಕ ಸ್ಥಾನಮಾನ ನೀಡುವುದು.
ಗೋಸೇವಾ ಆಯೋಗ / ಗೋ ಸಚಿವಾಲಯವನ್ನು ಜಾರಿಗೆ ತರುವುದು ಮತ್ತು ಗೋರಕ್ಷಣೆಗಾಗಿ ಸ್ವತಂತ್ರ ಸಚಿವಾಲಯವನ್ನು ಸ್ಥಾಪಿಸುವುದು
ಗೋವುಗಳ ಮೇಯಿಸುವಿಕೆ (ಗೋಮಾಳ, ನೆಲ, ಜಲ) ಕಾಡು ಅನ್ನು ಅತಿಕ್ರಮಣಗೊಳಿಸಿ, ಗೋವು ಆಧಾರಿತ ಕೃಷಿಯನ್ನು ಪ್ರೋತ್ಸಾಹಿಸಬೇಕು ಮತ್ತು ಪರಿಸರ ಗೋಶಾಲೆ ಗೋವುಗಳಿಗೆ ಹಾಗೂ ಅವುಗಳ ಸಂತತಿಗೆ ಸಾಕಷ್ಟು ಪೌಷ್ಟಿಕ ಆಹಾರ, ಮೇವು, ನೀರು, ವಾಸಸ್ಥಳವನ್ನು ಕಲ್ಪಿಸಬೇಕು.
ಅಭಿಯಾನಕ್ಕೆ ಸಂಪರ್ಕ ಮತ್ತು ಸೇರ್ಪಡೆ
ಗೋಸೇವೆ ಮತ್ತು ಗೋಸಂರಕ್ಷಣೆಯ ಮೂಲಕ ಸುಭದ್ರವಾದ ರಾಷ್ಟ್ರೀಯ ರಕ್ಷಣೆ ಮತ್ತು ಸಂಸ್ಕೃತಿ ರಕ್ಷಣೆಗಾಗಿ ಈ ನಿಸ್ವಾರ್ಥ ಮತ್ತು ಪವಿತ್ರ ಅಭಿಯಾನಕ್ಕೆ ಸೇರಲು, 9067777323 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ
ನಿಮ್ಮ ವಿವರಗಳನ್ನು ವಾಟ್ಸಪ್ ಮೂಲಕ ಕಳುಹಿಸಿ 8239711008
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ 9571712140
ವೆಬ್ಸೈಟ್ನಲ್ಲಿ ಆನ್ಲೈನ್ ಅರ್ಜಿಯನ್ನು ಭರ್ತಿಮಾಡಿ
ಯಾವುದೇ ದೇಣಿಗೆ ಇಲ್ಲ
ಈ ಅಭಿಯಾನಕ್ಕಾಗಿ ಯಾವುದೇ ರೀತಿಯ ದೇಣಿಗೆ ಅಥವಾ ನಿಧಿ ಸಂಗ್ರಹಣೆಯನ್ನು ಸ್ವೀಕರಿಸಲಾಗುವುದಿಲ್ಲ. ಈ ಅಭಿಯಾನದ ಹೆಸರಿನಲ್ಲಿ ಯಾರಾದರೂ ದೇಣಿಗೆ ಕೇಳಿದರೆ, ದಯವಿಟ್ಟು 8239711008 ಈ ಸಂಖ್ಯೆಗೆ ದೂರು ನೀಡಿ.
