ಆದ್ಯೊತ್ ಸುದ್ದಿನಿಧಿ::
ಕರ್ನಾಟಕ ಸಾಹಿತ್ಯ ಅಕಾಡೆಮಿ.ಬೆಂಗಳೂರು.ಚಕೋರ ಸಾಹಿತ್ಯ ವಿಚಾರ ವೇದಿಕೆ ಉತ್ತರಕನ್ನಡ ಜಿಲ್ಲೆ ಇವರ ಸಹಯೋಗ ದಲ್ಲಿ ಶಿರಸಿಯ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಭಾರತೀಯ ಹಬ್ಬಗಳ ಸಾಂಸ್ಕೃತಿಕ ವಿಶೇಷತೆ” ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ದಲ್ಲಿ ಮಾತನಾಡಿದ ರವಿ ಸೂರಣಗಿ,ಭಾರತೀಯ ಪರಂಪರೆಯಲ್ಲಿ ಹಬ್ಬಗಳು ವೈಜ್ಞಾನಿಕ ತಳಹದಿಯ ಮೇಲೆ ನಿಂತಿವೆ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಮಹತ್ವ ಇದೆ ಋತುಮಾನಗಳಿಗನುಗುಣವಾಗಿ ಆಚರಿಸುವ ಹಬ್ಬದ ದಿನಗಳಲ್ಲಿನ ಊಟಕ್ಕೆ ಅಷ್ಟೇ ಪ್ರಾಮುಖ್ಯತೆ ಇದೆ ಇಂತಹ ಸಾಂಪ್ರದಾಯಿಕ ಆಚರಣೆಗಳ ಹಿಂದೆ ಸಾಮುದಾಯಿಕ ಐಕ್ಯತೆ ಮತ್ತು ಮನೋ ಆರೋಗ್ಯದ ಚಿಂತನೆ ಅಡಗಿದೆ ಎಂದು ಭಾರತೀಯ ಹಬ್ಬಗಳ ಸಾಂಸ್ಕೃತಿಕ ಸೊಬಗನ್ನು ಶ್ಲಾಘಿಸಿದರು.
ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರಕಾಶ್ ಬಿ ಅವರು ಭಾರತದ ಎಲ್ಲಾ ರಾಜ್ಯಗಳು ವಿಭಿನ್ನವಾದ ಹಬ್ಬದ ಪರಂಪರೆಯನ್ನು ಹೊಂದಿರುವುದು ಭಾರತದ ವಿಶೇಷತೆ ಎಲ್ಲಾ ಧರ್ಮದ ಹಬ್ಬಗಳು ಇಲ್ಲಿ ಮುಖ್ಯ ಎಂದರು . ಸಮಾಜಶಾಸ್ತ್ರದ ಮುಖ್ಯಸ್ಥ ಸಂತೋಷ್ ಟಿ.ಡಿ ಮಾತನಾಡಿ, ವೈಜ್ಞಾನಿಕ ತಳಹದಿಯಲ್ಲಿ ಆಚರಿಸುವ ಹಬ್ಬಗಳಲ್ಲಿ ಕೆಲವೊಂದು ಅವೈಜ್ಞಾನಿಕತೆ ಇರುತ್ತದೆ ಅದನ್ನು ಕಂಡುಹಿಡಿಯುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ ಎಂದರು.

ಕನ್ನಡ ಉಪನ್ಯಾಸಕ ಮೀನಾಕ್ಷಿ ಮಾತನಾಡುತ್ತಾ ಪುರುಷ ಪ್ರಧಾನ ಹಬ್ಬಗಳ ಜೊತೆಗೆ ಕರಾವಳಿಯ ಮೂಲದ ಮಾತೃಮೂಲದ ಹಬ್ಬಗಳ ಬಗ್ಗೆಯೂ ಉಪನ್ಯಾಸಗಳು ಚಕೋರ ವೇದಿಕೆಯಿಂದ ಆಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತದಲ್ಲಿ ಹಬ್ಬಗಳು ವೈವಿಧ್ಯಮಯವಾಗಿವೆ ಪ್ರಕೃತಿಯನ್ನ ಪೂಜಿಸುವ ದೇಶ ನಮ್ಮದು ಪ್ರತಿ ಆಚರಣೆಯು ಇಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಅಧ್ಯಕ್ಷ ಸ್ಥಾನ ವಹಿಸಿದ್ದ ಪ್ರಾಂಶುಪಾಲರಾದ ಡಾ. ವಿಶ್ವನಾಥ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆಯ ಈ ಕಾರ್ಯಕ್ರಮದ ಗುರಿ ಉದ್ದೇಶಗಳ ಬಗ್ಗೆ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ರೇಖಾ ಬಿಳಗಲಿ ಅವರು ತಿಳಿಸಿದರು. ಇಂಗ್ಲಿಷ್ ಉಪನ್ಯಾಸಕ ಪೂಜಾ ಪವಾರ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕ ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ರಕ್ಷಿತ್ ಗೌಡ ವಂದಿಸಿದರು. ವಿದ್ಯಾರ್ಥಿನಿ ಸಿಂಚನ ಪ್ರಾರ್ಥಿಸಿದರು.ಕಾಲೇಜಿನ ಉಪನ್ಯಾಸಕ ಸಂದೇಶ ಧಾರೇಶ್ವರ್ ಭೂಪಾಲ ಬಾಳಂಬೀಡ, ವಿಜಯ ಎ.ಪ್ರಸನ್ನ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
