ಹೊನ್ನಾವರ: ಮಾಳ್ಕೋಡ ಶಾಲೆ ಶತಮಾನೋತ್ಸವ ಲಾಂಛನ ಬಿಡುಗಡೆ

ಆದ್ಯೊತ್ ಸುದ್ದಿನಿಧಿ:
ಹೊನ್ನಾವರ ತಾಲೂಕಿನ ಮಾಳ್ಕೋಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಲಾಂಛನವನ್ನು ಉಸ್ತುವಾರಿ ಸಚೀವ ಮಂಕಾಳು ವೈದ್ಯ ಬಿಡುಗಡೆಗೊಳಿಸಿದರು.

ಮಂಕಾಳು ವೈದ್ಯ ಮಾತನಾಡಿ,ಶತಮಾನವನ್ನು ಪೂರೈಹಿಸಿರುವ ಹೊನ್ನಾವರ ತಾಲೂಕಿನ ಮಾಳ್ಕೋಡ, ಕೆಳಗಿನ ಇಡಗುಂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಗ್ರ ಮೂಲಭೂತ ಅಭಿವೃದ್ಧಿಗೆ ಅಗತ್ಯವಿರುವ ಕ್ರಮವನ್ನು ತೆಗೆದುಕೊಳ್ಳಲಾಗುವುದು.ಅಲ್ಲಿಯ ಅಗತ್ಯವಿರುವ ಎಲ್ಲಾ ಕೆಲಸಗನ್ನು ತ್ವರಿತವಾಗಿ ಪ್ರಾರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಸಮಿತಿಯ ಮನವಿಯಂತೆ ಶಾಲೆಗೆ ಅಗತ್ಯವಿರುವ ಕೊಠಡಿಗಳು ಹಾಗೂ ಶಾಲಾ ಆವಾರಕ್ಕೆ ಕಂಪೌಂಡ್ ಮತ್ತು ವಾರಂಡಕ್ಕೆ ಇಂಟರ್ ಲಾಕ್ ಅಳವಡಿಕೆ ,ಶೌಚಾಲಯ ನಿರ್ಮಾಣ ಸೇರಿದಂತೆ ಶಾಲೆಯ ಅಭಿವೃದ್ಧಿಗೆ ಆಗಬೇಕಾಗಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು.ತ್ವರಿತವಾಗಿ ಕಾಮಗಾರಿ ಮಾಡುವುದಕ್ಕೆ ಸ್ಥಳೀಯವಾಗಿ ಯಾರಾದರೂ ಜವಾಬ್ದಾರಿಯನ್ನು ತಗೆದುಕೊಳ್ಳಿ.ಮುಂದಿನ ಕೆಲವು ದಿನಗಳಲ್ಲಿ ಶಾಲೆಗೆ ಭೇಟಿಯನ್ನು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ, ಗೌರವಾಧ್ಯಕ್ಷ ಬಾಲಚಂದ್ರ ಎಂ.ನಾಯ್ಕ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ ಎಂ.ಶೆಟ್ಟಿ,ಹಳೆ ವಿದ್ಯಾರ್ಥಿಗಳು ಸಂಘದ ಅಧ್ಯಕ್ಷ ಪ್ರಶಾಂತ ಎಚ್.ನಾಯ್ಕ,ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಮಂಜುನಾಥ ಬಿಳಿಯ ನಾಯ್ಕ,ಸಮಿತಿಯ ಉಪಾಧ್ಯಕ್ಷರಾದ ಜಿ.ಕೆ.ಹೆಗಡೆ, ಶಂಕರ ಗಣಪತಿ ನಾಯ್ಕ,ಕಾರ್ಯದರ್ಶಿ ಲಕ್ಷಮಿ ಎನ್.ಭಟ್,ಪದಾಧಿಕಾರಿಗಳಾದ ಮಂಜುನಾಥ ಕೆ.ನಾಯ್ಕ,ಗಜಾನನ ಎನ್.ಹಳ್ಳೆರ,ಮಾರುತಿ ಎನ್.ನಾಯ್ಕ,ಮಂಜುನಾಥ ಎಸ್.ನಾಯ್ಕ,ಗಣೇಶ ಎಸ್.ನಾಯ್ಕ,ಗಜಾನನ ಎಚ್.ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಈಗಾಗಲೆ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಗಳನ್ನು ಆರಂಭಿಸಲಾಗಿದೆ.ಮುಂದಿನ ಶೈಕ್ಷಣಿಕ ವರ್ಷದಿಂದ ಕಂಪ್ಯೂಟರ್ ತರಬೇತಿ ಪ್ರಾರಂಭಿಸಲಾಗುವುದು.ಹೆಚ್ಚಿನ ಕೆಲಸಗಳನ್ನು ಸರಕಾರದ ಅನುದಾನದಲ್ಲಿ ಮಾಡಲಾಗುತ್ತಿದ್ದು,ಉಳಿದ ಕೆಲಸ ಕಾರ್ಯಗಳನ್ನು ಧಾನಿಗಳ,ಪ್ರಾಯೋಜಕರ ಸಹಕಾರದಲ್ಲಿ ಮಾಡಿ ಮಾದರಿ ಶಾಲೆಯನ್ನಾಗಿ ರೂಪಿಸಲಾಗುವುದು.:-ನಾಗರಾಜ ನಾಯ್ಕ ಮಾಳ್ಕೋಡ, ಅಧ್ಯರು,ಶತಮಾನೋತ್ಸ ಸಮಿತಿ.

ಶಾಲೆಯನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ.ಮುಂದಿನ ಶೈಕ್ಷಣಿಕ ವರ್ಷದಿಂದ ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಾಹನದ ವ್ಯೆವಸ್ಥೆಯನ್ನು ಮಾಡಲಾಗುವುದು.ಪಾಲಕರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಹೆಚ್ಚಿನ ಮಕ್ಕಳ ದಾಖಲಾತಿಯನ್ನು ಮಾಡಿಕೊಳ್ಳುವಂತೆ ವಿನಂತಿಸುತ್ತೇವೆ.;-ರಾಜೇಶ ಎಂ.ಶೆಟ್ಟಿ,ಅಧ್ಯಕ್ಷರು,ಎಸ್.ಡಿ.ಎಂ.ಸಿ.

About the author

Adyot

Leave a Comment