ಸಿದ್ದಾಪುರ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ತಿಮ್ಮಪ್ಪ ಎಂ.ಕೆ. ಆಗ್ರಹ

ಆದ್ಯೊತ್ ಸುದ್ದಿನಿಧಿ:
ಸಿದ್ದಾಪುರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಎಂ.ಕೆ.ಹಿತ್ತಲಕೊಪ್ಪ ಸುದ್ದಿಗೋಷ್ಠಿ ನಡೆಸಿ ಸಿದ್ದಾಪುರ ತಾಲೂಕನ್ನು ಬರಪೀಡಿತವೆಮದು ಘೋಷಿಸಲು ಆಗ್ರಹಿಸಿದರು.

ತಿಮ್ಮಪ್ಪ ಎಂ.ಕೆ. ಮಾತನಾಡಿ,ತಾಲೂಕಿನಲ್ಲಿ ಅನಿಯಮಿತವಾಗಿ ಮಳೆಯಾಗುತ್ತಿದ್ದು ಯಾವುದೇ ಪ್ರಯೋಜನವಾಗುತ್ತಿಲ್ಲ ಕಳೆದ ಒಂದು ತಿಂಗಳಿನಿAದ ಮಳೆಯಿಲ್ಲದೇ ಬೆಲೆಗಳು ಒಣಗಿ ರೈತರು ತೀವ್ರ ಸಂಕಷ್ಟದಲ್ಲಿದ್ದು, ಶಾಸಕ ಭೀಮಣ್ಣ ನಾಯ್ಕ ಸಿದ್ದಾಪುರವನ್ನು ಬರಪೀಡಿತ ಪಟ್ಟಿಗೆ ಸೇರಿಸಿ ವಿಶೇಷ ಪ್ಯಾಕೇಜಿಗಾಗಿ ಸರ್ಕಾರಕ್ಕೆ ಒತ್ತಡ ತರಬೇಕು.ಜಿಲ್ಲೆಯ ಶಿರಸಿ, ಮುಂಡಗೋಡ, ಹಳಿಯಾಳ ತಾಲೂಕುಗಳನ್ನು ಈಗಾಗಲೆ ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ ಆದರೆ ಮಳೆಯಿಲ್ಲದೆ ಸಿದ್ದಾಪುರ ತಾಲೂಕಿನ ರೈತಾಪಿ ಸಮುದಾಯ ತತ್ತರಿಸುತ್ತಿದ್ದರೂ ಕಡೆಗಣಿಸಲಾಗುತ್ತಿದೆ ಶಾಸಕರು ಕೃಷಿ ಇಲಾಖೆಯಿಂದ ಪ್ರತ್ಯೇಕ ಸರ್ವೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಿ ಬರಪೀಡಿತ ಪಟ್ಟಿಗೆ ಸೇರಿಸುವ ಪ್ರಯತ್ನ £ಮಾಡಬೇಕಾಗಿದೆ ಎಂದು ಹೇಳಿದರು.

ಅತಿಕ್ರಮಣ ಜಾಗದಲ್ಲಿರುವ ಮನೆಗಳ ತೆರಿಗೆ ವಸೂಲಿ ನಿಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರ ವಿರುದ್ಧ ಹೋರಾಟ ನಡೆಸಿದ್ದ ಸಂಸದರ ಮೇಲೆ ಶಾಸಕರು ಗೂಬೆ ಕೂರಿಸಿದ್ದಾರೆ. ಸಂಸದರು ಪಂಚಾಯ್ತಿಗೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದ್ದಾರೆ. ಕಾಗೇರಿಯವರ ಅವಧಿಯಲ್ಲಿ ಮನೆ ನಂಬರ ಆಧಾರದ ಮೇಲೆ ವಸತಿ ಯೋಜನೆಯ ಮನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಆಸ್ತಿಯಾಗಿರುವ ಅರಣ್ಯವನ್ನು ರಕ್ಷಣೆ ಮಾಡಬೇಕಾಗಿರುವುದು ರಾಜ್ಯ ಸರ್ಕಾರ. ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿಯಿಲ್ಲ. ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೇ ಸಾಕಷ್ಟು ದಿನವಾಗಿದೆ. ವೈದ್ಯರ ನೇಮಿಸುವ ಕೆಲಸವಾಗಿಲ್ಲ. ಮಳೆ ಮಾಪನ ಕೇಂದ್ರ ದುರಸ್ಥಿ ಮಾಡಿಸದೇ ಇರುವುದರಿಂದ ಬೆಳೆ ವಿಮೆ ತೆಗೆದುಕೊಳ್ಳಲು ತೊಂದರೆಯಾಗಿದೆ. ಸಾಕಷ್ಟು ಅನುದಾನ ತಂದಿದ್ದೆನೆ ಎಂದು ಹೇಳುವ ಭೀಮಣ್ಣ ನಾಯ್ಕರು ತಾಲೂಕಿನಲ್ಲಿ ಯಾವ ಹೊಸ ಕಾಮಗಾರಿ ತಂದಿದ್ದಾರೆ ಅದು ಎಲ್ಲಿದೆ? ಅದು ಪೂರ್ಣಗೊಂಡಿದೆಯಾ ಈ ಬಗ್ಗೆ ಉತ್ತರ ನೀಡಲಿ ಸಂಸದ ಕಾಗೇರಿಯವರು ಶಾಸಕರಾಗಿದ್ದಾಗ ಮಂಜೂರಾದ ಕಾಮಗಾರಿಗಳನ್ನು ತನ್ನದೆಂದು ಹೇಳುತ್ತಿರುವ ಶಾಸಕರು ತಕ್ಷಣದಲ್ಲಿ ಅನುದಾನ ತಂದು ಅಭಿವೃದ್ಧಿ ಮಾಡಲಿ ಎಂದು ತಿಮ್ಮಪ್ಪ ಹೇಳಿದರು.

ನಿಕಟಪೂರ್ವ ಅಧ್ಯಕ್ಷ ಮಾರುತಿ ನಾಯ್ಕ ಮಾತನಾಡಿ, ಜನರನ್ನು ಗೊಂದಲದಲ್ಲಿ ಮುಳುಗಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ ಸರಕಾರದ ಆದೇಶವನ್ನು ಹಿಂಪಡೆಯುವAತೆ ಮಾಡುವುದನ್ನು ಬಿಟ್ಟು ಸಂಸದರ ಮೇಲೆ ಆರೋಪ ಮಾಡುತ್ತಿದ್ದಿರಿ. ಕಳೆದ ಮೂರು ವರ್ಷದಿಂದ ನೀವು ಯಾವುದೇ ಅಭಿವೃದ್ಧಿಯನ್ನೂ ಮಾಡಿಲ್ಲ ಕೇವಲ ಭರವಸೆಯನ್ನು ನೀಡುತ್ತಾ ಬಂದಿದ್ದಿರಿ. ಎರಡು ವರ್ಷದ ಹಿಂದೆ ಹೊಸೂರು ಶಾಲೆಯ ಕಾರ್ಯಕ್ರಮಕ್ಕೆ ಬಂದಾಗ ಎರಡು ಕೋಣೆ ನಿರ್ಮಾನಕ್ಕೆ ೨೫ಲಕ್ಷರೂ. ಕೊಡುತ್ತೇನೆ ಎಂದಿದ್ದಿರಿ ಅದೇ ರೀತಿ ಹಾಳದಕಟ್ಟಾ ಕಾಲೇಜ್‌ಗೆ ೫೦ಲಕ್ಷರೂ. ಮಂಜೂರು ಮಾಡುತ್ತೆನೆ ಎಂದಿದ್ದಿರಿ ಅದೇ ರೀತಿ ಹಲವು ಕಾಮಗಾರಿ ಮಾಡುತ್ತಿದ್ದೆನೆ ಎಂದು ಹೇಳುತ್ತಿದ್ದಿರಿ ಆದರೆ ಇಲ್ಲಿಯವರೆಗೂ ಯಾವುದೇ ಕಾಮಗಾರಿಗೂ ಹಣ ಮಂಜೂರು ಆಗಿಲ್ಲ, ಚತುಷ್ಪಥ ರಸ್ತೆಗೆ ಭೂಮಿ ಕಳೆದುಕೊಂಡವರಿಗೆ ಇಲ್ಲಿಯವರೆಗೂ ಪರಿಹಾರ ಬಂದಿಲ್ಲ ಕೇವಲ ಸುಳ್ಳು ಹೇಳುತ್ತಾ ಪ್ರಚಾರ ಮಾಡುತ್ತಿದ್ದಿರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಾ ಮಂಡಲದ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ,ಜಿಲ್ಲಾ ವಿಶೇಷ ಆಹ್ವಾನಿತರಾದ ಸುರೇಶ ನಾಯ್ಕ, ಗುರುರಾಜ ಶಾನಭಾಗ, ತಾಲೂಕಾ ಓಬಿಸಿ ಮೋರ್ಚಾ ಅಧ್ಯಕ್ಷ ಜಿ.ಕೆ.ನಾಯ್ಕ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಭಟ್, ತಾಲೂಕಾ ರೈತ ಮೋರ್ಚಾ ಉಪಾಧ್ಯಕ್ಷ ದಯಾನಂದ ಕಡಕೇರಿ ಉಪಸ್ಥಿತರಿದ್ದರು.

About the author

Adyot

Leave a Comment