ಸಿದ್ದಾಪುರದಲ್ಲಿ ಬಿಜೆಪಿ ಮುಖಂಡರ ವಿರುದ್ದ ಕಾಂಗ್ರೆಸ್ ಮುಖಂಡರ ಆಕ್ರೋಶ

ಆದ್ಯೊತ್ ಸುದ್ದಿನಿಧಿ
ಸಿದ್ದಾಪುರ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ ಸುದ್ದಿಗೋಷ್ಠಿ ನಡೆಸಿದರು.

ಕಳೆದ ೩೦ ವರ್ಷದಲ್ಲಿ ಆಗದಿರುವ ಅಭಿವೃದ್ಧಿ ಕಾರ್ಯಗಳು ಕಳೆದ ೩ ವಷ್ದಲ್ಲಿ ಆಗಿದ್ದು ಇದನ್ನು ನೋಡಿ ಸಹಿಸಿಕೊಳ್ಳಲಾಗದ ಬಿಜೆಪಿಯವರು ಹತಾಶರಾಗಿ ಕೀಳುಮಟ್ಟದ ಹೇಳಿಕೆಯತನ್ನು ನೀಡುತ್ತಿದ್ದಾರೆ .
ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ಸಹಜ ಆದರೆ ತಮ್ಮದು ಸುಸಂಸ್ಕೃತ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯವರು ಶಾಸಕರ ಕುರಿತು ಕೀಳುಮಟ್ಟದ ಭಾಷೆಯನ್ನು ಬಳಸುತ್ತಿದ್ದಾರೆ. ಶಾಸಕ ಭೀಮಣ್ಣ ನಾಯ್ಕರು ಶಾಸಕರಾಗುವ ಮೊದಲಿನಿಂದಲೂ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಇದರಲ್ಲಿ ಜಾತಿ,ಧರ್ಮ,ಬಡವ,ಬಲ್ಲಿದ ಎಂಬ ಭೇದವನ್ನೂ ಮಾಡಿಲ್ಲಈಗ ಶಾಸಕರಾದ ಮೇಲೆ ಇಂತಹ ಕೆಲಸವನ್ನು ಹೆಚ್ಚು ಮಾಡುತ್ತಿದ್ದಾರೆ. ಸಮಸ್ಯೆಗಳು ಇರುವ ಗ್ರಾಮಕ್ಕೆ ಸ್ವತಃ ತೆರಳಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ತಮ್ಮ ಅಸ್ತಿತ್ವದ ಭಯ ಕಾಡುತ್ತಿದೆ ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಇಂತಹ ಆರೋಪಗಳನ್ನು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುವುದಲ್ಲದೆ ಇದು ಮುಂದುವರಿದರೆ ಅವರದ್ದೇ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಅವರು ಶಾಸಕರಾದ ಮೇಲೆ ೨೦೨೩-೨೪ರ ಸಾಲಿನಲ್ಲಿ ೨೨೧ಕೋಟಿರೂ.೨೦೨೪-೨೫ರಲ್ಲಿ ೧೬೧ಕೋಟಿರೂ.೨೦೨೫-೨೬ರಲ್ಲಿ ಇಲ್ಲಿಯವರೆಗೆ ೧೪೫ಕೋಟಿರೂ. ಅನುದಾನ ತಂದಿದ್ದು ಇವೆಲ್ಲವಗಳ ಕಾಮಗಾರಿ ತ್ವರಿತಗತಿಯಿಂದ ನಡೆಯುತ್ತಿದೆ. ಪಟ್ಟಣದ ಕುಡಿಯುವ ನೀರು ಯೋಜನೆಗೆ ಹಿಂದಿನ ಶಾಸಕರು ಪ್ರಯತ್ನಿಸಿರಬಹುದು ಆದರೆ ಅವರಿಂದ ಸಾಧ್ಯವಾಗಿರಲಿಲ್ಲ ಆದರೆ ನಮ್ಮ ಶಾಸಕರು ಸತತ ಪ್ರಯತ್ನ ನಡೆಸಿ ೬೮.೫ಕೋಟಿರೂ. ವೆಚ್ಚದಲ್ಲಿ ಶರಾವತಿ ನದಿಯಿಂದ ನೀರು ತರುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈಗಾಗಲೇ ಕಾಮಗಾರಿಗಳು ತ್ವರಿತಗತಿಯಿಂದ ನಡೆಯುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ದಿನದ ೨೪ ಗಂಟೆಯು ಪಟ್ಟಣದ ಜನರಿಗೆ ನೀರು ದೊರೆಯಲಿದೆ. ಈ ಹಿಂದೆ ದೇಶಪಾಂಡೆಯವರು ಸಚೀವರಾಗಿದ್ದ ಸಮಯದಲ್ಲಿ ಬಸ್‌ನಿಲ್ದಾಣ,ಮಿನಿವಿಧಾನ ಸೌಧ,ಉಂಚಳ್ಳಿ ಪಾಲ್ಸ್,ಬುರುಡೆಜೋಗಫಾಲ್ಸ್ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳ ರಸ್ತೆ ಅಭಿವೃದ್ಧಿಪಡಿಸಿದ್ದರು ಇವೆಲ್ಲ ತಮ್ಮ ಸಾಧನೆ ಎಂದು ಹೇಳುವ ಬಿಜೆಪಿಯವರಿಗೆ ಮುಂದೆ ಬರಲಿರುವ ತಾಪಂ,ಜಿಪA,ಗ್ರಾಪA ಚುನಾವಣೆಯಲ್ಲಿ ತಾಲೂಕಿನ ಜನತೆಯೇ ಪಾಠಕಲಿಸಲಿದ್ದಾರೆ ಎಂದು ಹೇಳಿದರು.

ಹಿರಿಯ ಮುಖಂಡ ವಿ.ಎನ್.ನಾಯ್ಕ ಮಾತನಾಡಿ,ಬಿಜೆಪಿಯವರು ನಮ್ಮ ಮನೆ ನಮ್ಮ ಹಕ್ಕು ಎಂಬ ನಾಟಕವನ್ನು ಕೆಲವು ದಿನದಿಂದ ಪ್ರದರ್ಶಿಸುತ್ತಿದ್ದರು. ಶಾಸಕರಿಗೆ ತಡೆಯುವ ಶಕ್ತಿ ಇದೆಯೇ? ಎಂದು ಪ್ರಶ್ನಿಸುತ್ತಿದ್ದರು ಈಗ ಸರಕಾರ ಆದೇಶವನ್ನು ತಡೆಹಿಡಿದಿದೆ ಇದು ನಮ್ಮ ಶಾಸಕರ ತಾಕತ್ತು. ಅರಣ್ಯಭೂಮಿ ಮಂಜೂರು ಮಾಡುವುದು ಕೇಂದ್ರಸರಕಾರದ ಕೆಲಸ ರಾಜಕಾರಣದಲ್ಲಿ ಬಹಳ ಅನುಭವವಿರುವ ಕಾಗೇರಿಯವರು ಈಗ ಕೇಂದ್ರಸರಕಾರದ ಮೇಲೆ ಒತ್ತಡ ತಂದು ಮಂಜೂರು ದೊರಕುವಂತೆ ಮಾಡುವ ಮೂಲಕ ತಮ್ಮ ತಾಕತ್ತನ್ನು ತೋರಿಸಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿ.ಆರ್.ನಾಯ್ಕ,ಎಸ್.ಕೆ.ನಾಯ್ಕ,ಅಣ್ಣಪ್ಪ ನಾಯ್ಕ,ಚಂದ್ರು ಕಾನಡೆ,ಮುನವರ್ ಗುಕಾರ‍್ಕೆ.ಟಿ.ಹೊನ್ನೆಗುಮಡಿ ಸುರೇಂದ್ರ ಗೌಡ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment