ಆದ್ಯೊತ್ ಸುದ್ದಿನಿಧಿ
ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಬಿಜೆಪಿ ರೈತ ಮೋರ್ಚಾದವರುÀ ಬಿಜೆಪಿ ಜಿಲ್ಲಾರೈತ ಮೋರ್ಚಾಅಧ್ಯಕ್ಷ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಬರಅಧ್ಯಯನದ ಪ್ರವಾಸ ನಡೆಸಿದರು.


ಅನಂತಮೂರ್ತಿ ಹೆಗಡೆ ಮಾತನಾಡಿ,ಸಿದ್ದಾಪುರ ತಾಲೂಕಿನಲ್ಲಿ ಅನಿಯಮಿತವಾಗಿ ಮಳೆಯಾಗಿದ್ದು ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಇದರಿಂದ ಬೆಳೆಗಳೆಲ್ಲ ಒಣಗಿ ನಾಶವಾಗುತ್ತಿದ್ದು ರಾಜ್ಯ ಸರ್ಕಾರ ಸಿದ್ದಾಪುರ ತಾಲೂಕನ್ನು ಬರಪೀಡಿತತಾಲೂಕು ಎಂದು ಘೋಷಣೆ ಮಾಡುವುದರೊಂದಿಗೆ ಪ್ರತಿಏಕರೆಗೆ ೨೫ಸಾವಿರ ರೂಗಳಷ್ಟು ಪರಿಹಾರ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನದಲ್ಲಿಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದರು.

ರಾಜ್ಯ ಸರ್ಕಾರ ಬರಪೀಡಿತ. ಎಂದು ಘೋಷಣೆಯಾಗಿರುವಲ್ಲಿ ರೈತರಿಗೆ ಒಂದು ಎಕರೆಗೆ ೨೫೦೦ರೂ ಕೊಡುತ್ತೇವೆ ಎಂದುಘೋಷಣ ಮಾಡಿದೆ. ಇದು ಯಾವುದಕ್ಕೂ ಸಾಕಾಗುವುದಿಲ್ಲ. ಶಾಸಕ ಭೀಮಣ್ಣ ನಾಯ್ಕ ಮಲತಾಯಿ ಧೋರಣೆ ತೋರದೇ ಮೌನವನ್ನು ಮುರಿದು ಸಿದ್ದಾಪುರ ತಾಲೂಕನ್ನು ಬರಪೀಡಿತಎಂದುಘೋಷಣೆಮಾಡುವುದಕ್ಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು. ತಾಲೂಕಿನ ರೈತರು ಬಿತ್ತಿದೆ ಬೀಜ ಮಳೆ ಬಂದು ನಾಶವಾಗಿದೆ. ನಂತರ ಮಳೆ ಇಲ್ಲದೇ ನಾಟಿ ಮಾಡಿರುವ ಭತ್ತದ ಗದ್ದೆಗಳು ನೀರಿಲ್ಲದೇ ನಾಶವಾಗುತ್ತಿದೆ. ಆಗಾಗ ತುಂತುರು ಮಳೆ ಬೀಳುತಿದ್ದರೂ ಇದು ಬೆಳೆ ಬೆಳೆಯುವುದಕ್ಕೆ ಸಾಕಾಗುತ್ತಿಲ್ಲ. ಮಳೆ ಇಲ್ಲದೇ ಭತ್ತದ ತೆನೆಗಳು ಜೊಳ್ಳಾಗಿದೆ.ಇದರಿಂದರೈತರ ಬದುಕು ಕಷ್ಟವಾಗಿದೆ.ಗಂಜಿಕುಡಿದುಕೊಂಡು ಬದುಕುವಎಂದರೆಇದ್ದ ಮನೆಯನ್ನು ಸಹ ಕೆಡವಲು ಮುಂದಾಗುತಿದ್ದಾರೆ.ಈ ಕುರಿತು ಬಿಜೆಪಿ ಹೋರಾಟ ಮಾಡಿದರೆ ರಾಜಕೀಯ ಮಾಡುತಿದ್ದಾರೆ ಎನ್ನುತ್ತಾರೆ. ೧೫ದಿನದೊಳಗೆ ಸಿದ್ದಾಪುರ ತಾಲೂಕನ್ನು ಬರಪೀಡಿತಎಂದುಘೋಷಣೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು.

ತಾಲೂಕು ಬಿಜೆಪಿ ಅಧ್ಯಕ್ಷತಿಮ್ಮಪ್ಪ ಎಂ.ಕೆ.ಮಾತನಾಡಿ ಮಳೆ ಇಲ್ಲದೇ ನಾಟಿ ಮಾಡಿದ ಗದ್ದೆಗಳೆಲ್ಲ ಒಣಗುತ್ತಿದೆ. ಶಾಸಕರು ಕಂದಾಯ ಹಾಗೂ ಕೃಷಿ ಇಲಾಖೆಯಿಂದಜAಟಿ ಸಮೀಕ್ಷೆ ನಡೆಸುವುದಕ್ಕೆ ಆದೇಶ ನೀಡಬೇಕು.ಬೆಳೆಯನ್ನು ಉಳಿಸಿಕೊಳ್ಳುವುಕ್ಕಾಗಿ ಕೆಲವು ರೈತರು ಬೋರ್ ವೆಲ್ ಮೂಲಕ ನೀರು ಹಾಯಿಸಿಉ ಬೆಳೆ ಬೆಳೆಯುವ ಪ್ರಯತ್ನಮಾಡುತಿದ್ದಾರೆ.ರಾಜ್ಯ ಸರ್ಕಾರಕೂಡಲೇ ಸಿದ್ದಾಪುರ ತಾಲೂಕುಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ಸ್ಥಳೀಯ ರೈತಮಹಿಳೆ ಕನ್ನೆ ಶಿವರಾಮ ನಾಯ್ಕ,ನಾಟಿ ಮಾಡಿದ ಗದ್ದೆಗಳೆಲ್ಲ ಒಣಗಿ ನಿಂತಿದೆ. ಗದ್ದೆಯನ್ನು ನಂಬಿಯೇ ನಮ್ಮಜೀವನ ನಡೆಸುತಿದ್ದೇವೆ. ಸಾಲ ಮಾಡಿಗದ್ದೆ ನಾಟಿ ಮಾಡಿದ್ದೇವೆ. ನಾಟಿ ಮಾಡಿದ ಗದ್ದೆಗಳು ಒಣಗಿ ಹೋಗಿದೆ. ಹೊಟ್ಟೆಉರಿಯುತ್ತಿದೆರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಕಣ್ಣಿರಿಡುತ್ತ ತನ್ನ ಅಳಲನ್ನುತೋಡಿಕೊಂಡರು.
ನಾರಾಯಣ ಹೆಗಡೆಚಾರೆಕೋಣೆ, ಅಣ್ಣಪ್ಪ ನಾಯ್ಕ, ಶ್ರೀಕಾಂತ ಭಟ್ಟ, ಸುರೇಶ ನಾಯ್ಕ, ಎಂ.ಬಿ.ಹೆಗಡೆ, ಧನಂಜಯ ನಾಯ್ಕ, ಗಣೇಶ ಭಂಡಾರಿ, ರವಿ ನಾಯ್ಕ, ಶಿವು ಶಿರಳಗಿ ಮತ್ತಿತರರಿದ್ದರು.
