ಆದ್ಯೊತ್ ಸುದ್ದಿನಿಧಿ
ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರ ಮತ್ತು ಉತ್ತರ ಕನ್ನಡ ಜಿಲ್ಲಾ ರೈತ ಮೋರ್ಚ ವತಿಯಿಂದ ಹಾಗೂ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಬ್ರಷ್ಟಾಚಾರ ಆರೊಪ ಹೊತ್ತಿರುವ ಮಂತ್ರಿ ನಾಗೇಂದ್ರ ರಾಜೀನಾಮೆ ಕೊಡಲೇಬೇಕು ಎಂದು ಕಾರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಸಲಾಯಿತು


ರೈತ ಮೋರ್ಚ ಜಿಲ್ಲಾಧ್ಯಕ್ಷರ ಅನಂತಮೂರ್ತಿ ಹೆಗಡೆಯವರು ಮಾತನಾಡಿ,ದಿ. 26 ಮೇ 2024 ರಂದು ಚಂದ್ರಶೇಖರನ್ ಎನ್ನುವ ಅಧಿಕಾರಿ ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಳ್ಳುವ ಪೂರ್ವದಲ್ಲಿ ಆರು ಪುಟಗಳ ಡೆತ್ ನೋಟ್ ಬರದಿಟ್ಟಿರುತ್ತಾರೆ, ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ ನಾಗೇಂದ್ರರವರು ಮೌಖಿಕವಾಗಿ ಹಲವಾರು ಅಕೌಂಟ್ಗಳಿಗೆ ಹಣವನ್ನು ಹಾಕಲು ಆದೇಶ ಮಾಡಿರುತ್ತಾರೆ ಎನ್ನುವ ಮತ್ತು ಯಾವ ಅಕೌಂಟ್ ಹಣ ಹೋಗಿದೆ ಎಂಬುದನ್ನು ಬರೆದು ಇಟ್ಟಿದ್ದಾರೆ, ಎಲ್ಲಾ ಹಣವೂ ಹೇಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿ ಇದೆ, ಬಳ್ಳಾರಿ ಚುನಾವಣೆಗೆ 20 ಕೋಟಿರೂ. ವ್ಯಯವಾದ ಬಗ್ಗೆ ಮಾಹಿತಿ, ಎಲ್ಲಾ ಅವ್ಯವಹಾರ ಅಕೌಂಟ್ ಮೂಲಕವೇ ಆಗಿದ್ದರಿಂದ ಇದನ್ನು ಭೇದಿಸಲು 3 ದಿನ ಸಾಕು, ಬಡ ವಾಲ್ಮೀಕಿ ಜನಾಂಗದ ಅಭಿವೃದ್ಧಿಗೆ ಇಟ್ಟ 170 ಕೋಟಿ ಹಣವನ್ನು ತನ್ನ ಫೇಕ್ ಅಕೌಂಟ್ಗೆ ವರ್ಗಾವಣೆ ಮಾಡಿಕೊಂಡ ಭ್ರಷ್ಟ ನಾಗೇಂದ್ರ ರನ್ನು ತಕ್ಷಣ ವಜಾ ಮಾಡಬೇಕು, ಅಂಥವರನ್ನು ಮಂತ್ರಿ ಮಾಡಿದ ಕಾಂಗ್ರೆಸ್ ಸರಕಾರಕ್ಕೆ ಮಾನ ಮರ್ಯಾದೆ ನಾಚಿಕೆ ಇಲ್ಲಾ, ನಾಗೇಂದ್ರ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರು,


ಈ ಸಂದರ್ಭದಲ್ಲಿ ಅನಂತ ಮೂರ್ತಿ ಹೆಗಡೆ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರು, ಚಂದ್ರು ಎಸಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು, ಕೆಜಿ ನಾಯಕ್ ಕಾರ್ಯಕಾರಿಣಿ ಸದಸ್ಯರು, ಆನಂದ ಸಾಲೆರ್ ಶಿರಸಿ ನಗರ ಮಂಡಲ ಅಧ್ಯಕ್ಷರು, ಉಷಾ ಹೆಗಡೆ ಶಿರಸಿ ಬಿಜೆಪಿ ಗ್ರಾಮೀಣ ಅಧ್ಯಕ್ಷರು, ತಿಮ್ಮಪ್ಪ ಎಂ ಕೆ ಸಿದ್ದಾಪುರ ಮಂಡಲ ಅಧ್ಯಕ್ಷರು, ಜಾಯ್ಸನ್ ಡಿಸೋಜಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರು, ಪ್ರಶಾಂತ ನಾಯಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜು ಭಂಡಾರಿ ಬಿಜೆಪಿ ಪ್ರಮುಖರು, ಸುರೇಶ್ ನಾಯಕ್ ರೈತ ಮೋರ್ಚಾ ಉಪಾಧ್ಯಕ್ಷರು, ಬಸಣ್ಣ ಕುರುಬಕಟ್ಟಿ ಉಪಾಧ್ಯಕ್ಷರು ರೈತ ಮೋರ್ಚ, ರಾಮಣ್ಣ ಚಿಕ್ಯಾನ ಮನೆ ಯಲ್ಲಾಪುರ ರೈತ ಮೋರ್ಚಾ ಅಧ್ಯಕ್ಷರು, ನಾಗರಾಜ್ ನಾಯ್ಕ್ ಶಿರಸಿ, ಮಾರುತಿ ನಾಯ್ಕ್ ಕಾನಗೋಡ, ನಾಗರಾಜ್ ನಾಯ್ಕ್ ಬೆಡಕಣಿ, ಪ್ರಸನ್ನ ಹೆಗಡೆ, ತೋಟಪ್ಪ ನಾಯ್ಕ, ಮಹಾಂತೇಶ ಹಾದಿಮನಿ, ಇನ್ನೂ ಹಲವರು
ಮಾತನಾಡಿದರು

