ಆದ್ಯೊತ್ ಸುದ್ದಿನಿಧಿ:
ಸಿದ್ದಾಪುರ ಪಟ್ಟಣದ ಸರಕಾರಿ ಆಸ್ಪತ್ರೆಯ ಎದುರು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಎಂ.ಕೆ.ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ಇದ್ದು ತಕ್ಷಣದಲ್ಲಿ ನೇಮಕ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.


ತಿಮ್ಮಪ್ಪ ಎಂ.ಕೆ. ಮಾತನಾಡಿ, ಆಸ್ಪತ್ರೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರ ವರ್ಗಾವಣೆ ಮಾಡಲಾಗಿದ್ದು ಹೊಸವೈದ್ಯರನ್ನು ನೇಮಕ ಮಾಡಿಲ್ಲ ಕಳೆದ ಮೂರು-ನಾಲ್ಕು ತಿಂಗಳಿಂದ ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಶಾಸಕರಿಗೆ ಆಡಳಿತ ವ್ಯವಸ್ಥೆಯ ಅರಿವಿಲ್ಲ ಅವರು ಈ ವಿಷಯದಲ್ಲಿ ಉದ್ದೇಶ ಪೂರ್ವಕವಾಗಿ ಮೌನವಹಿಸಿದ್ದಾರೋ ನಿರ್ಲಕ್ಷಿಸಿದ್ದಾರೋ ತಿಳಿಯುತ್ತಿಲ್ಲ. ಹಿಂದೆ ಶಾಸಕರಾಗಿದ್ದ ವಿಶ್ವೆಶ್ವರ ಹೆಗಡೆ ಕಾಗೇರಿಯವರು ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ
ದ್ದು ಇಲ್ಲಿಯ ಸಮಸ್ಯೆ,ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ತೆಗೆದುಕೊಂಡು ಅದನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದರು. ಈಗಿನ ಶಾಸಕರಿಗೆ ಈ ಬಗ್ಗೆ ಗೊತ್ತೇ ಇಲ್ಲ ಆರೋಗ್ಯ ಸೇವೆ ನೀಡುವ ಸಂಚಾರಿ ಆರೋಗ್ಯ ಯೋಜನೆ ಸಿಬ್ಬಂದಿಗಳಿಲದೆ ಬಂದ್ ಮಾಡಲಾಗಿದೆ. ಒಂದು ಕಾಲದಲ್ಲಿ ಸುತ್ತಮುತ್ತಲಿನ ಎಲ್ಲಾ ತಾಲೂಕಿಗೂ ಮಾದರಿಯಾಗಿ ರೋಗಿಗಳಿಗೆ ಅನುಕೂಲವಾಗಿದ್ದ ಆಸ್ಪತ್ರೆಯಲ್ಲಿ ಇಂದು ವೈದ್ಯರು,ಸಿಬ್ಬಂದಿಗಳಿಲ್ಲದೆ ಸೊರಗುತ್ತಿದೆ. ತಕ್ಷಣದಲ್ಲಿ ವೈದ್ಯರ,ಸಿಬ್ಬಂದಿಗಳ ನೇಮಕವಾಗಬೇಕು ಎಂದು ಆಗ್ರಹಿಸಿದರು.


ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯ ಕೆ ಜಿ ನಾಯ್ಕ್ ಮಾತನಾಡಿ,ತಾಲೂಕು ಆಸ್ಪತ್ರೆಗೆ ವೈದ್ಯರ ಜೊತೆ ಸಿಬ್ಬಂದಿಗಳ ಅಗತ್ಯಗಳಿದ್ದು ಪ್ರತಿಯೊಂದಕ್ಕೂ ಹುಬ್ಬಳ್ಳಿ ಮಂಗಳೂರಿಗೆ ತೆರಳುವ ಅವಕಾಶ ಬಡವರಿಗೆ ಕಷ್ಟವಾಗಿದೆ.ಬೇರೆ ಬೇರೆ ಕಾಮಗಾರಿಗಳು,ಅಭಿವೃದ್ಧಿ ಕೆಲಸವನ್ನು ಮಾಡುವುದಲ್ಲದೆ, ಮೂಲಭೂತ ಸೌಕರ್ಯವಾದ ಆರೋಗ್ಯದ ಸಮಸ್ಯೆಯನ್ನು ಬಗೆಹರಿಸಬೇಕು. ವರ್ಷಕ್ಕೊಂದು ಬಾರಿ ಪಂಚ ಗ್ಯಾರಂಟಿ ಯೋಜನೆ ಹಣವನ್ನು ನೀಡುವುದು ಯಾವುದೇ ದೊಡ್ಡ ವಿಷಯವಲ್ಲ ಆದರೆ ಬಡ ಜನರಿಗೆ ನೀಡಬೇಕಾದ ಆರೋಗ್ಯ ಸವಲತ್ತುಗಳನ್ನು ನೀಡಬೇಕಾಗಿದ್ದು ಶಾಸಕರ ಕರ್ತವ್ಯ ಎಂದು ಹೇಳಿದರು

ನಿಕಟ ಪೂರ್ವ ಅಧ್ಯಕ್ಷ ಮಾರುತಿ ನಾಯ್ಕ್ ಮಾತನಾಡಿ,ವೈದ್ಯರ ಕೊರತೆಯ ಸಮಸ್ಯೆ ಪರಿಹಾರವಾಗದ ಕಾರಣ ಆಸ್ಪತ್ರೆಗೆ ಪ್ರತಿಭಟನೆಯ ಸಲುವಾಗಿ ಅನಿವಾರ್ಯತೆಯಿಂದ ಬರಬೇಕಾದ ಸನ್ನಿವೇಶ ಎದುರಾಗಿದೆ.ಒಂದು ರೀತಿಯ ಪ್ರತಿಭಟನೆ ಮುಜುಗರದ ವಿಷಯವಾದರೂ ಬಡ ಜನ ಹಿತದೃಷ್ಟಿಯಿಂದ ಇದು ಅಗತ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿತಾಲೂಕ ಯುವ ಮೋರ್ಚಾ ಅಧ್ಯಕ್ಷ ಅಣ್ಣಪ್ಪ ನಾಯ್ಕ ಕಡಕೇರಿ, ಬಿಜೆಪಿ ತಾಲೂಕ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ, ಬಿಜೆಪಿ ಜಿಲ್ಲಾ ವಿಶೇಷ ಅವ್ಹಾನಿತ ಸುರೇಶ್ ನಾಯ್ಕ ಬಾಲಿಕೊಪ್ಪ, ಓಬಿಸಿ ಮೋರ್ಚ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ನಾಯ್ಕ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ ಮಡಿವಾಳ, ಯುವ ಮೋರ್ಚಾ ಪ್ರಧಾನ, ಕಾರ್ಯದರ್ಶಿ ಮಂಜುನಾಥ ಭಟ್ಟ, ಬಿಜೆಪಿ ಸಾಮಾಜಿಕ ಜಾಲತಾಣದ ಸದಸ್ಯ ದಿನೇಶ್ ಹೆಗಡೆ, ಮುಂತಾದವರು ಉಪಸ್ಥಿತರಿದ್ದರು
ಸ್ಥಳಕ್ಕೆ ಆಗಮಿಸಿದ ಜಿಲ್ಲಾಆರೋಗ್ಯಾಧಿಕಾರಿ ಡಾ.ಸಂಜಯ ದೊಡ್ಮನಿ ಮನವಿ ಸ್ವೀಕರಿಸಿ ವೈದ್ಯರ ನೇಮಕಾತಿಯ ಕುರಿತು ಪತ್ರಿಕೆಗಳಲ್ಲಿ ಪ್ರಕಟಣೆಯನ್ನು ನೀಡಿದ್ದೇವೆ , ಅರ್ಜಿಗಳು ಸ್ವೀಕೃತವಾದ ಕೂಡಲೇ ಕಾನೂನಿನ ಅಡಿಯಲ್ಲಿ ಪರಿಶೀಲಿಸಿ ವೈದ್ಯರ ನೇಮಕಾತಿಯನ್ನು ಮಾಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.


ಈ ಕುರಿತು ಜಿಲ್ಲಾಆರೋಗ್ಯಾಧಿಕಾರಿ .ಡಾಸಂಜಯ ದೊಡ್ಮನಿ
ಆದ್ಯೊತ್ ನ್ಯೂಸಗೆ ಪ್ರತಿಕ್ರಿಯಿಸಿ,ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ಇಲ್ಲ ಆದರೆ ಸಿದ್ದಾಪುರದಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ಇದೆ. ಈಗಾಗಲೇ ವೈದ್ಯರ ನೇಮಕಾತಿಯ ಕುರಿತು ಆಸಕ್ತ ವೈದ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅವಕಾಶವನ್ನು ಪತ್ರಿಕಾ ಪ್ರಕಟಣೆ ಮೂಲಕ ಹೊರಡಿಸಿದ್ದೇವೆ. ಆದರೆ ಇಲ್ಲಿಯವರೆಗೂ ಯಾವುದೇ ಅರ್ಜಿಯೂ ಬಂದಿರುವುದಿಲ್ಲ.ಆಗಸ್ಟ್ ೩೦ ರಂದು ಸ್ನಾತಕೋತ್ತರ ವೈದ್ಯರ ಪರೀಕ್ಷೆಯಿದ್ದು ತದನಂತರ ಸಾಕಷ್ಟು ವೈದ್ಯರು ಹೊರಬರಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಸಿಗುವ ಅವಕಾಶವಿದ್ದು ಜಿಲ್ಲೆಯಲ್ಲಿ ಸಿದ್ದಾಪುರ ಸೇರಿದಂತೆ ಖಾಲಿಯಿರುವ ಎಲ್ಲಾ ಆಸ್ಪತ್ರೆಗಳಿಗೆ ವೈದ್ಯಕೀಯ ಹುದ್ದೆಗಳನ್ನು ಭರ್ತಿಮಾಡಲಾಗುವುದು. ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿಸ್ಟ್, ಪಿಜೀಷಯನ ಹಾಗೂ ಇನ್ನಿತರ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ ಸದ್ಯದಲ್ಲೆ ನೇಮಕವಾಗಲಿದೆ.
ಸ್ಥಳೀಯ ಆಸ್ಪತ್ರೆಗೆ ಅಗತ್ಯವಿರುವ ಸ್ತ್ರೀರೋಗ ತಜ್ಞರನ್ನು ಬೇರೆ ತಾಲೂಕಿನಿಂದ ನಿಯೋಜಿಸಲಾಗುವುದು ಹತ್ತಿರದ ತಾಲೂಕಿನಿಂದ ಹೊಸವೈದ್ಯರ ನೇಮಕಾತಿಯ ಸಮಯದ ವರೆಗೆ ವಾರದಲ್ಲಿ ೨ ದಿನ ಸ್ತ್ರೀರೋಗ ತಜ್ಞರು ಇಲ್ಲಿಯ ಆಸ್ಪತ್ರೆಗೆ ಬಂದು ಸೇವೆ ಸಲ್ಲಿಸುವಂತೆ ಮಾಡುವ ಕುರಿತು ಮೇಲಿನ ಅಧಿಕಾರಿಗಳೊಂದಿಗೆ ಮಾತನಾಡಿ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಹೇಳಿದರು.
