ದಾಂಡೇಲಿ:ಕಾಳಿನದಿಯಲ್ಲಿ ಮುಳುಗಿ ಆರು ಜನರ ಸಾವು

ಆದ್ಯೋತ್ ಸುದ್ದಿನಿಧಿ;
ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪ್ರದಾನಿ ಗ್ರಾಪಂ ವ್ಯಾಪ್ತಿಯ ಅಕೋಡಾ ಗ್ರಾಮದ ಪಕ್ಕದಲ್ಲಿ ಹರಿಯುವ ಕಾಳಿ ನದಿಯಲ್ಲಿ ಮುಳುಗಿ ಬೆಂಗಳೂರು ಹಾಗೂ ಹುಬ್ಬಳ್ಳಿ ಮೂಲದ ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿದ್ದಾರೆ.
ಒಂದೇ ಕುಟುಂಬದ 8 ಜನರು ಪ್ರವಾಸಕ್ಕೆಂದು ಇಲ್ಲಿಗೆ ಬಂದಿದ್ದಾರೆ.ಈಜಾಡಲೆಂದು ನದಿಗಳಿದಿದ್ದ ಆರು ಜನರ ಪೈಕಿ ಬಾಲಕಿಯೊಬ್ಬಳು ನೀರಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಉಳಿದ ಐವರು ಆಕೆಯನ್ನು ರಕ್ಷಣೆ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಹುಬ್ಬಳ್ಳಿಯ ಈಶ್ವರ ನಗರದ 40 ವರ್ಷ ವಯಸ್ಸಿನ ನಜೀರ್ ಅಹ್ಮದ್ ಚಮನ್ ಸಾಬ್ ಹೊನ್ನಂಬಲ್ ಹಾಗೂ ಅವರ ಮಕ್ಕಳಾದ 10 ವರ್ಷ ವಯಸ್ಸಿನ ಅಲ್ಪೀಯಾ ಮತ್ತು 06 ವರ್ಷ ವಯಸ್ಸಿನ ಮೊಹಿನ್, ನಜೀರ್ ಅವರ ಸಹೋದರಿ 38 ವರ್ಷ ವಯಸ್ಸಿನ ರೇಷ್ಮಾ ಉನ್ನಿಸಾ ತೌಫೀಕ್ ಅಹ್ಮದ್ ಮತ್ತು ಅವರ ಮಕ್ಕಳಾದ 15 ವರ್ಷ ವಯಸ್ಸಿನ ಇಫ್ರಾ ಮತ್ತು 12 ವರ್ಷ ವಯಸ್ಸಿನ ಅಬಿದ್ ಎಂದು ತಿಳಿದು ಬಂದಿದೆ.

About the author

Adyot

Leave a Comment