ಸಿದ್ದಾಪುರ ಶಿರಳಗಿ ಶ್ರೀಚೈತನ್ಯರಾಜಾರಾಮ ಕ್ಷೇತ್ರದಲ್ಲಿ ಏ.20-21ರಂದು ಆಧ್ಯಾತ್ಮಚಿಂತನಾಮೃತ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಶಿರಳಗಿಯಲ್ಲಿರುವ ಶ್ರೀ ಚೈತನ್ಯರಾಜಾರಾಮ ಕ್ಷೇತ್ರದಲ್ಲಿ ಏ.20-21ರಂದು ಆಧ್ಯಾತ್ಮ ಚಿಂತನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಶ್ರೀ ಚೈತನ್ಯರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ,ವ್ಯವಹಾರಿಕಾ ಪ್ರಪಂಚಕ್ಕೆ ಆದ್ಯತ ಎನ್ನುವ ಈ ಕಾಲದಲ್ಲಿ ವಿಚಾರ ಪ್ರಚೋದನೆ ಮಾಡುವ ಮೂಲಕ ಸಮಾಜವನ್ನು ಒಂದಿಷ್ಟಾದರೂ ಪರಿವರ್ತನೆ ಮಾಡಬಹುದು ಎನ್ನುವ ಕಾರಣಕ್ಕೆ ಎರಡು ದಿನಗಳ ಆಧ್ಯಾತ್ಮಚಿಂತನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ

ಶ್ರೀಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ ಕಳೆದ 25 ವರ್ಷದಿಂದ ತಿಂಗಳ ಎರಡನೇ ಭಾನುವಾರ ಮಧ್ಯಾಹ್ನ 3-30ರಿಂದ ಸಂಜೆ 5-3೦ರವರೆಗೆ ವಿವಿಧ ಧಾರ್ಮಿಕ ಚಿಂತನೆಗಳ ಸತ್ಸಂಗವು ನಡೆಯುತ್ತಿತ್ತು ಈ ಸತ್ಸಂಗದ 25ನೇ ವರ್ಷಆಚರಣೆಯನ್ನು ವಿದ್ವತ್ ಗೋಷ್ಠಿಗಳ ಮೂಲಕ ಆಧ್ಯಾತ್ಮಿಕ ಚಿಂತನೆಗಳನ್ನು ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ವಿಧ್ವಾಂಸರು ಭಾಗವಹಿಸಲಿದ್ದಾರೆ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸದ ಜೊತೆಗೆ ಆ ವಿಷಯದ ಬಗ್ಗೆ ಶ್ರೋತ್ರರುಗಳ ಪ್ರಶ್ನೆಗೆ ಉತ್ತರವನ್ನೂ ನೀಡಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಸ್ವರ್ಣವಲ್ಲಿ ಮಠದ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಶ್ರೀರಾಮನಾರಾಯಣ ಗುರುಕುಲದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕು.ಸಂಹಿತಾ ಅವಧಾನಿಯವರಿಂದ ಹಾಡುಗಾರಿಕೆ, ಅಭಿರಾಮ ಪಿಟೀಲು,ಬಿ.ಜೆ.ಶ್ರೀನಿವಾಸ ಮೃದಂಗ ವಾದನ ಮಾಡಲಿದ್ದಾರೆ ಎಂದು ಹೇಳಿದರು.

ಶಿರಳಗಿ ಶ್ರೀಚೈತನ್ಯ ರಾಜಾರಾಮ ಆಶ್ರಮದಲ್ಲಿ ಜರಗುತ್ತಿರುವ ಮಾಸಿಕ ಸತ್ಸಂಗದ ರಜತಮಹೋತ್ಸವದ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಉಪನ್ಯಾಸಗಳು ನಡೆಯಲಿದೆ.

ಉಪನ್ಯಾಸ ವಿವರ-;ಏ.20 ಬೆಳಿಗ್ಗೆ 9.3೦ ರಿಂದ 11ರವರೆಗೆ ನರಹರಿ ಹೆಗಡೆಶಿರಳಗಿಯವರಿಂದ ಜೀವನೋಪಾಯ ಮತ್ತು ಜೀವನದ ಗುರಿ,11-3೦ ರಿಂದ 1-೦೦ ಗಂಟೆಯವರೆಗೆ ಶ್ರೀಬ್ರಹ್ಮಾನಂದ ಭಾರತೀ ಸ್ವಾಮೀಜಿಯವರಿಂದ ಕೇನೋಪಷನಿಷತ್ತಿನ ಒಳನೋಟ, ಮದ್ಯಾಹ್ನ 2-3೦ ರಿಂದ 4ರವರೆಗೆ ವಿ.ಮಹಾಬಲೇಶ್ವರ ಭಟ್ಟಹಿರೇಕೈಯವರಿಂದ ಮೈತ್ರೇಯೀ-ಯಾಜ್ಞವಲ್ಕ್ಯರ ಸಂವಾದ, ಸಂಜೆ 4-3೦ ರಿಂದ 6 ರವರೆಗೆ ವಿ.ಉಮಾಕಾಂತ ಭಟ್ಟ ಕೆರೇಕೈರಿಂದ ಅದ್ವೈತ,ವಿಶಿಷ್ಟಾದ್ವೈತ,ದ್ವೈತ ಸಿದ್ದಾಂತಗಳಲ್ಲಿ ಸಾಮ್ಯ ಮತ್ತು ವೈರುಧ್ಯ

ಏ.21 ಬೆಳಿಗ್ಗೆ 9-3೦ ರಿಂದ 11ರವರೆಗೆ ವಿ.ಶಂಕರ ಭಟ್ಟ ಬಾಲಿಕೊಪ್ಪರಿಂದ ಆನಂದ ಮೀಮಾಂಸೆ,ಬೆಳಿಗ್ಗೆ 11-3೦ ರಿಂದ 1 ರವರೆಗೆ ವಿ.ಶಂಕರ ಭಟ್ಟ ಉಂಚಳ್ಳಿಯವರಿಮದ ಕಠೋಪನಿಷತ್ತಿನ ಹರಿಕಥಾ ರೂಪ, ಮಧ್ಯಾಹ್ನ 2-3೦ ರಿಂದ 3-3೦ ಪ್ರಶ್ನೋತ್ತರ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹಾಗೂ ನರಹರಿ ಹೆಗಡೆಯವರಿಂದ ಉತ್ತರ.ಮಧ್ಯಾಹ್ನ 4ರಿಂದ 5ರವರೆಗೆ ಸಾಮೂಹಿಕ ಭಜನೆ ಸಂಜೆ 5 ರಿಂದ 6-3೦ರವರೆಗೆ ಸ್ವರ್ಣವಲ್ಲಿ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರಿಂದ ಜೀವನ್ಮುಕ್ತನ ಲಕ್ಷಣಗಳು ಕುರಿತು ಉಪನ್ಯಾಸ ಸ್ವರ್ಣವಲ್ಲಿ ಮಠದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರು ಉಪಸ್ಥಿತರಿರುತ್ತಾರೆ.

ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರ
ಶಿರಳಗಿಯ ಶ್ರೀಚೈತನ್ಯ ರಾಜಾರಾಮ ಕ್ಷೇತ್ರವು ಜ್ಞಾನದಾಹಿಗಳಿಗೆ ಜ್ಞಾನಮಾರ್ಗ ತೋರುವ ಪ್ರಶಾಂತ ಆಶ್ರಮ.ಪ್ರಕೃತಿಯ ಮಡಿಲಲ್ಲಿರುವ ಈ ಆಶ್ರಮವನ್ನು ಬ್ರಹ್ಮೀಭೂತರಾದ ಶ್ರೀ ರಾಜಾರಾಮ ಗುರೂಜಿಯವವರು ಸ್ಥಾಪಿಸಿದರು.ಸದಾ ರಾಮನಾಮ ಜಪದಲ್ಲಿ ತನ್ಮಯರಾಗಿರುತ್ತಿದ್ದರು.ಅಲ್ಲದೆ ಲಕ್ಷಾಂತರ ಭಕ್ತರಿಗೆ ಭಕ್ತಿ ಮಾರ್ಗ ತೋರಿಸಿದವರು. ಪ್ರತಿತಿಂಗಳ ಎರಡನೇ ರವಿವಾರ ಸತ್ಸಂಗ-ಭಜನೆ ನಡೆಸಲಾಗುತ್ತಿತ್ತು ಅವರ ನಂತರ ನರಹರಿ ಹೆಗಡೆ ಇದನ್ನು ಇಲ್ಲಿಯವರೆಗೂ ಮುಂದುವರಿಸಿಕೊಂಡು ಬಂದಿದ್ದಾರೆ.
ಅಕ್ಟೋಬರ್ 1998 ರಂದು ಈ ಸತ್ಸಂಗ ಪ್ರಾರಂಭವಾಯಿತು ಈ ಇಪ್ಪತೈದು ವರ್ಷದಲ್ಲಿ ಪ್ರತಿತಿಂಗಳು ಈ ಸತ್ಸಂಗ ನಡೆಯುತ್ತಾ ಬರುತ್ತಿದ್ದಾರೆ ಲಕ್ಷಾಂತರ ಭಕ್ತರು ಈ ಸತ್ಸಂಗದಲ್ಲಿ ಭಾಗವಹಿಸಿ ನೆಮ್ಮದಿ ಪಡೆದಿದ್ದಾರೆ.

About the author

Adyot

Leave a Comment