ಅಗತ್ಯ ವಸ್ತುಗಳಿಗೂ ಜಿಎಸ್ ಟಿ, ಮೋದಿ ಸರಕಾರದ ಸಾಧನೆ

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕಾಂಗ್ರೆಸ್ ಮುಖಂಡ ವೀಕ್ಷಕ ರಾಮ ಮೊಗೇರ ಸುದ್ದಿಗೋಷ್ಠಿ ನಡೆಸಿದರು.
ಕಳೆದ ಹತ್ತು ವರ್ಷದಿಂದ ದೇಶವನ್ನು ಆಳುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಣ್ಣ-ಪುಟ್ಟ ಅಗತ್ಯ ವಸ್ತುಗಳಿಗೂ ಜೆಎಸ್‌ಟಿ ಹಾಕುವ ಮೂಲಕ ಬಡಜನರನ್ನು ಅಧೋಗತಿಗೆ ಇಳಿಸಿದೆ ಇದೇ ಅವರ ಸಾಧನೆಯಾಗಿದೆ ಎಂದು ರಾಮ ಮೊಗೇರ ಆರೋಪಿಸಿದರು

ಕಾಂಗ್ರೆಸ್ ಆಡಳಿತವಿದ್ದಾಗ 6೦-7೦ರೂ. ಇದ್ದ ಪೆಟ್ರೋಲ್ ಇಂದು 1೦೦ರೂ. ದಾಟಿದೆ,ಗ್ಯಾಸ್ ಸಿಲೆಂಡರ್ 1೦೦0ರೂ. ದಾಟಿದೆ ಜನರ ನಿತ್ಯ ಜೀವನಕ್ಕೆ ಅಗತ್ಯ ಇರುವ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಅದಾನಿ-ಅಂಬಾನಿಯಂತಹವರಿಗೆ ಈ ಸರಕಾರ ಅನುಕೂಲ ಮಾಡಿಕೊಡುತ್ತಿದೆ. ಮಸಿದಿಯ ಅಡಿಯಲ್ಲಿ ಹಿಂದೂ ದೇವರುಗಳು ಇದೆ ಎಂದು ಮಸಿದಿಗಳನ್ನು ಒಡೆಯುವ ಮೂಲಕ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ ಹಾಗಾಧರೆ ಹಿಂದೂ ದೇವತೆಗಳೆಲ್ಲ ಮಸಿದಿಯ ಅಡಿಯಲ್ಲಿ ಹೋಗಿ ಕುಳಿತಿವೆಯಾ? ನಾವೆಲ್ಲರೂ ಹಿಂದೂಗಳೆ ನಮಗೆ ರಾಮನೊಬ್ಬನೇ ದೇವರಲ್ಲ ೩೩ಕೋಟಿ ದೇವತೆಗಳು ನಮಗಿದೆ ಮಣಿಪುರ,ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದೆ ಬಿಜೆಪಿ ಬೆಂಬಲಿತರು,ಶಾಸಕರು ಮಹಿಳೆಯರ ಮೇಲೆ ಅತ್ಯಾಚಾರ,ಕೊಲೆ ಮಾಡುತ್ತಿದ್ದಾರೆ ಆದರೆ ಬಿಜೆಪಿಯವರು ಮಾತನಾಡುತ್ತಿಲ್ಲ ಆದರೆ ಹುಬ್ಬಳ್ಳಿಯಲ್ಲಿ ನಡೆದ ಕೊಲೆಯ ಬಗ್ಗೆ ಪ್ರತಿಭಟನೆ ಮಾಡುತ್ತಾರೆ,ಇಲ್ಲಸಲ್ಲದ್ದು ಹೇಳುತ್ತಾರೆ.ಮೋದಿ ಇದ್ದರೆ ದೇಶ ಉಳಿಯುತ್ತದೆ ಎನ್ನುತ್ತಾರೆ 7೦ ವರ್ಷ ಕಾಂಗ್ರೆಸ್ ಆಡಳಿತ ಮಾಡುವಾಗ ದೇಶ ಉಳಿದಿರಲಿಲ್ಲವೇ? ಎಂದು ಪ್ರಶ್ನಿಸಿದರು.

ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸತತವಾಗಿ ಅಧಿಕಾರ ಅನುಭವಿಸಿದ್ದಾರೆ ಜಿಲ್ಲೆಗೆ ಅವರ ಕೊಡುಗೆ ಏನು? ಜಿಲ್ಲೆಯನ್ನು ಒಡೆಯುವ ಹುನ್ನಾರು ಮಾಡುತ್ತಿದ್ದಾರೆ.ಅರಣ್ಯ ಅತಿಕ್ರಮಣದ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ,ಬಡವರ ಕಷ್ಟಕ್ಕೆ ಸ್ಪಂಧಿಸುತ್ತಿಲ್ಲ ಇಂತಹವರು ಸಂಸದರಾಗಬೇಕೆ ನಮ್ಮ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ ಸುಶೀಕ್ಷಿತರು ಜನರ ಕಷ್ಟಕ್ಕೆ ಸ್ಪಂಧಿಸುವವರು ಇಂತಹವರು ಲೋಕಸಭೆಯಲ್ಲಿ ಇರಬೇಕು ಈ ಬಾರಿ ಮೋದಿಯವರ ಆಟ ನಡೆಯುವುದಿಲ್ಲ ಐಎನ್‌ಡಿಐ ಮೈತ್ರಿಕೂಟ 380ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ದೇಶವನ್ನು ಆಳಲಿದೆ ಎಂದು ಮೊಗೇರ ಹೇಳಿದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ತಾಲೂಕಿನಲ್ಲಿ 376೦೦ ಮತಗಳನ್ನು ಪಡೆದಿದ್ದೆವು ಈ ಚುನಾವಣೆಯಲ್ಲಿ 4೦೦೦೦ಕ್ಕೂ ಹೆಚ್ಚು ಮತಗಳನ್ನು ನಾವು ಪಡೆಯಲಿದ್ದೆವೆ ಈ ಕುರಿತು ನಮ್ಮ ಬೂತ್ ಮಟ್ಟದ ಕಾರ್ಯಕರ್ತರು ಪರಿಶ್ರಮವಹಿಸಿ ಕೆಲಸ ಮಾಡಬೇಕು ನಮ್ಮ ಪಕ್ಷ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಅವರ ಗೆಲುವಿಗೆ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಆರ್.ಹೆಚ್.ನಾಯ್ಕ,ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ನಾಸೀರ್ ಖಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ನಾಯ್ಕ,ಸೇವಾದಳ ಅಧ್ಯಕ್ಷ ಗಾಂಧೀಜಿ ನಾಯ್ಕ ಮುಖಂಡರಾದ ವಿ.ಎನ್.ನಾಯ್ಕ ಬೆಡ್ಕಣಿ,ಸಿ.ಆರ್.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment