ಶಿರಸಿಯಲ್ಲಿ ನರೇಂದ್ರ ಮೋದಿ ಅಬ್ಬರ

ಆದ್ಯೋತ್ ಸುದ್ದಿನಿಧಿ:
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಪ್ರಧಾನ ಮಂತ್ರಿ ನರೆಂದ್ರ ಮೋದಿ ಉ.ಕ.ಲೋಕಸಭಾ ಬಿ.ಜೆ.ಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ಮತಯಾಚನೆ ಸಂಬಂಧ ವಿಕಸಿತ ಭಾರತ ವಿಜಯ ಸಂಕಲ್ಪ ಸಮಾವೇಶ ನಡೆಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಮೋದಿ,ಇಂದು ವಿದೇಶದಲ್ಲಿ ಭಾರತದ ಹಿರಿಮೆ ಹೆಚ್ಚಾಗುತ್ತಿದೆ ನಮ್ಮ ದೇಶದ ಮಹಿಳೆಯರಿಗೆ ಗೌರವ ಸಿಗುತ್ತಿದೆ ಇದಕ್ಕೆ ಕಾರಣ ಕೇವಲ ಮೋದಿಯಲ್ಲ ನೀವು ನೀಡಿರುವ ಮತಗಳ ಕೊಡುಗೆ. ನನ್ನ ವಿದೇಶ ಯಾತ್ರೆಯಲ್ಲಿ ದೇಶದ ಕೋಟಿ ಜನರು ಹಿಂದೆ ಇರುತ್ತಾರೆ.

ಅಯೋಧ್ಯೆಯಲ್ಲಿ ನಮ್ಮ ಪೂರ್ವಜರು 5೦೦ ವರ್ಷಗಳ ಕಾಲ ಹೋರಾಟ ನಡೆಸಿದರು,ಲಕ್ಷಾಂತರ ಜನರ ಬಲಿದಾನವಾದರೂ ಪುನರ್ ನಿರ್ಮಾಣ ಮಾಡಲು ಆಗಿರಲಿಲ್ಲ. ಸ್ವಾತಂತ್ರ್ಯ ಬಂದಾಗ ಕಾಂಗ್ರೆಸ್ ಪಕ್ಷ ನಿರ್ಮಾಣ ಮಾಡಬೇಕಿತ್ತು ಆದರೆ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಲೆ ಬಂದಿತ್ತು ಇದನ್ನೆಲ್ಲ ಮರೆತ ರಾಮಮಂದಿರ ಟ್ರಸ್ಟಿಗಳು ಕಾಂಗ್ರೆಸ್‌ನವರನ್ನು ಕರೆದರೆ ಅವರು ಬರಲು ನಿರಾಕರಿಸಿದರು.ಆಯೋದ್ಯೆಯ ಇಕ್ಬಾಲ್ ಅನ್ಸಾರಿ ಎಂಬವರ 3 ಪೀಳಿಗೆಯು ಮಂದಿರ ವಿರುದ್ದ ಹೋರಾಡುತ್ತಾ ಬಂದವರು ನಂತರದಲ್ಲಿ ನ್ಯಾಯಾಲಯವು ರಾಮಮಂದಿರ ನಿರ್ಮಾಣ ಪರವಾಗಿ ಆದೇಶ ನೀಡಿದ ಮೇಲೆ ಅವರು ಒಪ್ಪಿ ತಲೆ ಬಾಗಿ ರಾಮ ಮಂದಿರಕ್ಕೆ ಬಂದರು. ಆದರೆ ಕಾಂಗ್ರೆಸ್ ಪಕ್ಷವು ಬರಲಿಲ್ಲ ಇಂತಹ ಪಕ್ಷವನ್ನು ನಾವು ಸೋಲಿಸಲೇ ಬೇಕು ಎಂದರು.

ಹಿಂದೆ ದೇಶದ ಎಲ್ಲಾ ಕಡೆಯಲ್ಲೂ ಬಾಂಬ್ ಸಿಡಿದ ಸುದ್ದಿ,ಭಯೋತ್ಪಾದಕರ ಸುದ್ದಿ ಬರುತ್ತಿತ್ತು ಆದರೆ ನಮ್ಮ ಸರಕಾರ ಬಂದಮೇಲೆ ಇವೆಲ್ಲ ನಿಂತಿದೆ ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಕೂಡಲೇ ಹೊಟೆಲ್‌ನಲ್ಲೂ ಬಾಂಬ್ ಸಿಡಿಯಲು ಪ್ರಾರಂಭವಾಗಿದೆ.ಮಹಿಳೆಯರ ಹತ್ಯೆ ಬೀದಿಗಳಲ್ಲಿ ನಡೆಯುತ್ತಿದೆ. ನಮ್ಮ ಸೈನಿಕರ ಮೇಲೆ ಭಯೋತ್ಪಾದಕರು ದಾಳಿ ನಡೆಸುತ್ತಿದ್ದರು ಆದರೆ ಸೈನಿಕರ ಕೈ ಕಟ್ಟಿಹಾಕಲಾಗಿತ್ತು ಆದರೆ ಈಗ ಹಾಗಿಲ್ಲ ಸರ್ಜಿಕಲ್ ಸ್ಟೆಕ್ ಮಾಡುತ್ತಾರೆ.

ಕಾಂಗ್ರೆಸ್‌ನವರು ಶಿವಾಜಿ ಮಹಾರಾಜರೂ ಸೇರಿ ನಮ್ಮ ರಾಜರನ್ನು ಅವಹೇಳನ ಮಾಡುತ್ತಾರೆ.ಅದೇ ನವಾಬರು,ಮೊಗಲರ ದೌರ್ಜನ್ಯದ ಬಗ್ಗೆ ಮಾತನಾಡುವುದಿಲ್ಲ. ನೀವು ಬಿಸಿಲಲ್ಲಿ ಕುಳಿತಿದ್ದಿರಿ ನಮ್ಮ ಪಕ್ಷದವತಿಯಿಂದ ಕ್ಷಮೆ ಕೇಳುತ್ತೆನೆ ಇದನ್ನು ನಿರುಪಯುಕ್ತವಾಗಲೂ ಬಿಡುವುದಿಲ್ಲ ಮೇರಾ ಭಾರತ ಮೇರಾ ಪರಿವಾರ ಇದು ನನ್ನ ಆಸೆಯಾಗಿದೆ. ನನ್ನ ಪ್ರತಿಯೊಂದು ಕ್ಷಣವೂ ದೇಶದ ಜನರಿಗಾಗಿ ಮೀಸಲಿಡುತ್ತೆನೆ ನೀವು ನೀಡುವ ಮತವು ನೇರವಾಗಿ ನನಗೆ ಸೇರುತ್ತದೆ ಆದ್ದರಿಂದ ಕಮಲ ಗುರುತಿಗೆ ಮತ ನೀಡಬೇಕು ಎಂದು ಹೇಳಿದರು.

ಪ್ರಹ್ಲಾದ್ ಜೋಶಿ ಮಾತನಾಡಿ,ಸ್ವಾತಂತ್ರ‍್ಯ ನಂತರ ಆಡಳಿತ ನಡೆಸಿದ ಕಾಂಗ್ರೆಸ್‌ನ ಎಲ್ಲಾ ಪ್ರಧಾನಿಗಳ ಅವಧಿಯಲ್ಲಿ ಒಂದೊಂದು ಹಗರಣವನ್ನೇ ಮಾಡಿಕೊಂಡು ಬಂದಿದ್ದರು ಆದರೆ ಒಂದೇಒಂದು ಕಪ್ಪುಚುಕ್ಕೆ ಇಲ್ಲದೇ ಹತ್ತು ವರ್ಷಗಳ ಆಡಳಿತ ಮಾಡಿದ್ದರೆ ಅದು ನರೇಂದ್ರ ಮೋದಿಯವರು.ಬಿಜೆಪಿ ಪ್ರವರ್ಧಮಾನಕ್ಕೆ ಬರುವುದನ್ನು ಸಹಿಸದ ಕಾಂಗ್ತೆಸ್ ಬಿಜೆಪಿಗರು ಸಂವಿಧಾನ ಬದಲಾಯಿಸುತ್ತಾರೆ. ರಿಜರ್ವೇಶನ್ ತೆಗಿಯುತ್ತಾರೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ಅಂಬೇಡ್ಕರ್‌ರವರ ಎಲ್ಲಾ ಅಭಿವೃದ್ಧಿ ಪಡಿಸಿದ ಸರ್ಕಾರ ಬಿಜೆಪಿ ಸರ್ಕಾರ. ಭಯೋತ್ಪಾದನೆ ಬಹುಮಟ್ಟಿಗೆ ಇಲ್ಲ ಎನ್ನುವ ಮಟ್ಟಕ್ಕೆ ತಂದ ಸರ್ಕಾರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಹುಬ್ಬಳ್ಳಿ ಪೊಲೀಸ್ ಠಾಣೆ ಸುಟ್ಟ, ಕೆ.ಜಿ.ಹಳ್ಳಿ, ಡಿಜೆ ಹಳ್ಳಿ ಪ್ರಕರಣದ ಆರೋಪಿಗಳ ರಕ್ಷಣೆಗೆ ನಿಂತ ಮತಾಂಧ ಶಕ್ತಿಗಳ ಪರ ಇರುವ ಸರ್ಕಾರ ಇಂದು ಅಧಿಕಾರದಲ್ಲಿದೆ. ಮತಾಂತರಕ್ಕೆ ಒಪ್ಪದ ಹುಬ್ಬಳ್ಳಿ ನೇಹಾ ಹತ್ಯೆಯ ಬಗ್ಗೆ ಆಕೆಯ ತಂದೆಯೇ ಹೇಳುತ್ತಿದ್ದಾರೆ ಎಂದು ಹೇಳಿದರು.

ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಈಗ ನಡೆಯುತ್ತಿರುವ ಚುನಾವಣೆ ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ ಕಾಂಗ್ರೆಸ್ ಗ್ರಾ.ಪಂ ಚುನಾವಣೆಗಿಂತ ಕಡೆಯಾಗಿ ಬಿಂಬಿಸುವುದು ದೇಶದ ದುರ್ದೈವ.ದೇಶಕ್ಕೆ ಪ್ರಧಾನಿ ಮೋದಿ ತಂದುಕೊಟ್ಟ ಗೌರವ ಮುಂದುವರೆಯಬೇಕಾದರೆ ಮೂರನೇ ಬಾರಿ ಮೋದಿಜೀಯವರನ್ನು ಪ್ರಧಾನಿಯನ್ನಾಗಿಸಬೇಕಾಗಿದೆ. ದೇಶದ ಸೈನಿಕರಿಗೆ ಕೊಟ್ಟ ನೈತಿಕ ಶಕ್ತಿ, ಆಧುನಿಕ ಶಸ್ತ್ರಾಸ್ತ್ರ ಅಯೋಧ್ಯೆಯ ಭವ್ಯ ರಾಮಮಂದಿರ, ಈ ದೇಶದ ಸಂಸ್ಕೃತಿ, ಭಾರತ್ ಈ ಜ್ಞಾನ ಸಂಪತ್ತು ಮತ್ತೊಮ್ಮೆ ದೇಶದ ತುಂಬಾ ಅಷ್ಟೇ ಏಕೆ ವಿಶ್ವದಾದ್ಯಂತ ಪ್ರಚುರಪಡಿಸಿದವರು ಮೋದಿಜಿ ಎಂದು ಹೇಳಿದರು.

ಕಾರ್ಕಳ ಶಾಸಕ ಸುನೀಲ್ ಕುಮಾರ್,ಕುಮಟಾ ಶಾಸಕ ದಿನಕರ ಶೆಟ್ಟಿ,ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ,ಗಣಪತಿ ಉಳ್ವೆಕರ,ಉಡುಪಿ ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ
ಮಾಜಿ ಶಾಸಕರಾದ ರೂಪಾಲಿ ನಾಯ್ಕ,ಸುನಿಲ ನಾಯ್ಕ,ಸುನಿಲ ಹೆಗಡೆ,ಹರತಾಳು ಹಾಲಪ್ಪ,ಮಾಜಿ ಸಚೀವ ಶಿವಾನಂದ ನಾಯ್ಕ,ಮಾಜಿ ಶಾಸಕ ವಿವೇಕಾನಂದ ವೈದ್ಯ,
ಕೋಟ ಶ್ರೀನಿವಾಸ ಪೂಜಾರಿ ಗೋವಿಂದ ನಾಯ್ಕ ಭಟ್ಕಳ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಜೆಡಿಎಸ್ ಮುಖಂಡರು ಸೂರಜ್ ನಾಯ್ಕ ಸೋನಿ ಮುಂತಾದವರು ಉಪಸ್ಥಿತರಿದ್ದರು.

——-
ಉತ್ತರ ಕನ್ನಡ ಬಿಜೆಪಿ ಹಾಲಿ ಸಂಸದ ಅನಂತಕುಮಾರ ಹೆಗಡೆ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಗೈರಾಗಿರುವುದು ಸಭೆಯಲ್ಲಿ ಕಂಡುಬಂದಿತ್ತು.

About the author

Adyot

Leave a Comment