ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಗೇರಿ ನಾಮಪತ್ರ ಸಲ್ಲಿಕೆ

ಆದ್ಯೋತ್ ಸುದ್ದಿನಿಧಿ:
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಕಾರವಾರ ದೈವಜ್ಞ ಕಲ್ಯಾಣ ಮಂಟಪ ಎದುರುಗಡೆಯಿಂದ ಸವಿತಾ ಸರ್ಕಲ, ಸುಭಾಷ ಸರ್ಕಲ, ಗ್ರೀನ್ ಸ್ಟ್ರೀಟ್ , ಅಂಬೇಡ್ಕರ ಸರ್ಕಲ್ ವರೆಗೆ ಮೆರವಣಿಗೆ ನಡೆಸಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸರ್ಕಲ್ ನಲ್ಲಿ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಶಾಸಕ ಬಸವರಾಜ ಪಾಟೀಲ್ ಯತ್ನಾಳ ಮಾತನಾಡಿ,ಈ ಚುನಾವಣೆ ವಿಶ್ವೇಶ್ವರ ಹೆಗಡೆ ರವರ ಚುನಾವಣೆ ಅಲ್ಲ, ಈ ಚುನಾವಣೆ ನಮ್ಮ ನರೇಂದ್ರ ಮೋದಿಯವರ ಅಲ್ಲ ಈ ಚುನಾವಣೆ ನಮ್ಮ ದೇಶವನ್ನ ರಕ್ಷಣೆ ಮಾಡುವುದರ ಸಲುವಾಗಿ.ಹಿಂದೂ ಸಮಾಜದ ರಕ್ಷಣೆಗೆ ಹಿಂದೆ ಶಿವಾಜಿ ಮಹಾರಾಜ್ ಹುಟ್ಟಿದ್ದರೆ ಇಂದು ನರೇಂದ್ರ ಮೋದಿ ಹುಟ್ಟಿದ್ದಾರೆ.

ಅಯೋಧ್ಯ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸಿನವರು 27 ವಕೀಲರನ್ನು ಕಟ್ಟಿ ಕಪಿಲ್ ಸಿಬಾಲ್ ಹಿಡಿದು ಸುಪ್ರೀಂ ಕೋರ್ಟಿನಲ್ಲಿ ದಾವೇ ಹೂಡಿದರು.ರಾಮ ಈ ಭೂಮಿಯಲ್ಲಿ ಹುಟ್ಟೆ ಇಲ್ಲ ಅಂತ ಹೇಳುತ್ತಿದ್ದರು, ಈಗ ಸುಪ್ರೀಂ ಕೋರ್ಟ್ ಏನು ಹೇಳಿದ್ದು, ರಾಮ ಕಾಲ್ಪನಿಕ ಅಲ್ಲ ರಾಮ ಭವಿಷ್ಯ ಭಾರತದ ಯುಗಪುರುಷ, ಯುಗಪುರುಷ ರಾಮ ನಿಲ್ಲದೆ ಭಾರತವಿಲ್ಲ ಭಾರತವಿಲ್ಲದೆ ರಾಮನಿಲ್ಲ ಎಂದು ಹೇಳಿದರು.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್,ಮೋದಿಜಿಯವರ ವಿಕಸಿತ ಭಾರತ ಕನಸನ್ನು ಸಾಕಾರ ಮಾಡಲು, ಮತ್ತೊಮ್ಮೆ ಮೋದಿ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಕರ್ನಾಟಕದಲ್ಲಿ 28ಕ್ಕೆ 28 ಲೋಕಸಭಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಬಹುಮತ ಸರ್ಕಾರವನ್ನು ತುರುವಲ್ಲಿ ಕೆಲಸ ಮಾಡಬೇಕಾಗಿದೆ.ಇಲ್ಲಿಯ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು, ಈ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯ
ಬೇಕಾಗಿದೆ.ಮೋದಿ ಸರ್ಕಾರ ನಾಲ್ಕು ಕಂಬಗಳಂತೆ ನಡೆಯುತ್ತಿದೆ. ಒಂದು ಕಿಸಾನ್ ಶಕ್ತಿ, ಯುವಶಕ್ತಿ, ಮಹಿಳಾ ಶಕ್ತಿ, ಗರೀಬ್ ಕಲ್ಯಾಣ್, ಮೋದಿಜಿ ರವರ 2047 ರ ವಿಕಸಿತ ಭಾರತವನ್ನು ಸಾಕಾರ ಮಾಡಲು ಮತ್ತೊಮ್ಮೆ ಮೋದಿ ಸರ್ಕಾರ ಬರುವುದು ಅತಿ ಅವಶ್ಯಕವಾಗಿರುತ್ತದೆ ಎಂದರು.


ಮೆರವಣಿಗೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ ಕುಮಾರ, ಕುಮಾಟಾ ಶಾಸಕ ದಿನಕರ ಶೇಟ್ಟಿ, ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಮಾಜಿ ಎಂಎಲ್ಸಿ ಎಸ್,ಎಲ್, ಘೋಟ್ನೆಕರ್ ಹಾಗೂ ಜಿಲ್ಲಾ ನಾಯಕರು, ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದ್ದರು.

About the author

Adyot

Leave a Comment