ಹೊನ್ನಾವರ ಪೊಲೀಸ್ ಠಾಣೆ ಸೀಲ್ ಡೌನ್

ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯಲ್ಲಿ ಕೊವಿಡ್ 19 ಆರ್ಭಟ ಮುಂದುವರಿದಿದ್ದು, ಕೊವಿಡ್ ವಾರಿಯಸ್೯ ಮೇಲೆ ತನ್ನ ಪ್ರತಾಪ ತೋರಿಸುತ್ತಿದೆ. ಮಂಗಳವಾರ ಹೊನ್ನಾವರ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಸೋಮವಾರ ಇಬ್ಬರು ಪೊಲೀಸ್ ರಲ್ಲಿ ಕೊವಿಡ್
ಪೊಸಿಟಿವ್ ಇರುವುದು ದೃಢಪಟ್ಟಿತ್ತು. ಇಂದು ಇನ್ನೂ ನಾಲ್ವರಲ್ಲಿ ಕೊವಿಡ್ ಇರುವುದು ದೃಢಪಟ್ಟಿದ್ದರಿಂದ ಇಡೀ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.


ಜಿಲ್ಲೆಯಲ್ಲಿ ಕಳೆದ ತಿಂಗಳು ಶಿರಸಿಯ ಪೊಲೀಸ್ ಠಾಣೆಯನ್ನು
ಸೀಲ್ ಡೌನ್ ಮಾಡಲಾಗಿತ್ತು. ಕಳುವಿನ ಆರೋಪಿಯೊಬ್ಬನಲ್ಲಿ ಕೊವಿಡ್ ಇರುವುದು ಖಚಿತವಾದ ನಂತರ ಸೀಲ್ ಡೌನ್ ಮಾಡಲಾಗಿತ್ತು. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಪೊಲೀಸರಿಗೆ ಅಲ್ಲಲ್ಲಿ ಕೊರೊನಾ ಕಂಡುಬಂದಿತ್ತು ಆದರೆ ಇಷ್ಟು ಪ್ರಮಾಣದಲ್ಲಿ ಪೊಲೀಸರಿಗೆ ಕೊವಿಡ್ ಬಂದಿರುವುದು ಇದೇ ಪ್ರಥಮವಾಗಿದೆ.


ಕೊವಿಡ್ ಸಮರದಲ್ಲಿ ಹಲವು ಇಲಾಖೆಯವರು ಕೊವಿಡ್ ವಾರಿಯಸ್೯ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಆಶಾಕಾರ್ಯಕರ್ತೆಯರು ಹಾಗೂ ಪೊಲೀಸರು. ಈಗ ದೊಡ್ಡ ಪ್ರಮಾಣದಲ್ಲಿ ಪೊಲೀಸರಲ್ಲೆ ಕೊವಿಡ್ ಕಾಣಿಸಿಕೊಳ್ಳುತ್ತಿರುವುದು ಕೊವಿಡ್ ವಾರಿಯಸ್೯ರಲ್ಲಿ ಆತಂಕ ಮೂಡಿಸಿದೆ.

About the author

Adyot

Leave a Comment