ಲೋಕಸಭಾಚುನಾವಣೆ ಘೋಷಣೆ

ಆದ್ಯೋತ್ ಸುದ್ದಿನಿಧಿ:
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ ದೇಹಲಿಯ ವಿಜ್ಞಾನಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಲೋಕಸಭಾ
ಚುನಾವಣಾ ಮಾಹಿತಿಯನ್ನು ನೀಡಿದರು

ದೇಶದ 543ಲೋಕಸಭಾ ಸ್ಥಾನಗಳಿಗೆ ಚುನಾವಣೆಗೆ ದಿನಾಂಕ ನಿರ್ಧರಿಸಲಾಗಿದ್ದು ಏಪ್ರೀಲ್-19 ರಿಂದ ಲೋಕಸಭಾ ಚುನಾವಣೆ ಪ್ರಾರಂಭವಾಗಲಿದೆ. ಜೂನ್ 1ಕ್ಕೆ ಚುನಾವಣೆ ಮುಕ್ತಾಯವಾಗಲಿದೆ. ಜೂನ್-4 ಚುನಾವಣಾ ಫಲಿತಾಂಶ ಹೊರಬೀಳಲಿದೆ. ಒಟ್ಟೂ 7 ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್-19 1ನೇಹಂತ,ಏಪ್ರಿಲ್-26 2ನೇ ಹಂತ,ಮೇ-7 3ನೇಹಂತ,ಮೇ-13 4ನೇಹಂತ,ಮೇ-20 5ನೇಹಂತ,ಮೇ-25 6ನೇ ಹಂತ,ಜೂನ್-1 7ನೇ ಹಂತದ ಚುನಾವಣೆ ನಡೆಯಲಿದೆ.
ಕರ್ನಾಟಕದಲ್ಲಿ ಏಪ್ರಿಲ್-26 ಮತ್ತು ಮೇ-7ರಂದು ಎರಡು ಹಂತದ ಚುನಾವಣೆ ನಡೆಯಲಿದೆ. ಏಪ್ರೀಲ್-26ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು,ಬೆಂಗಳೂರುದಕ್ಷಿಣ,ಬೆoಗಳೂರುಉತ್ತರ,ಬೆoಗಳುರು ಕೇಂದ್ರ,ಬೆoಗಳೂರು ಗ್ರಾಮಾಂತರ,ತುಮಕೂರು,ಮoಡ್ಯ,ದಕ್ಷಿಣಕನ್ನಡ,ಚಾಮರಾಜನಗರ,ಮೈಸೂರು,ಹಾಸನ,ಕೋಲಾರ,ಉಡುಪಿ-ಚಿಕ್ಕಮಗಳೂರು,ಚಿತ್ರದುರ್ಗ,ಚಿಕ್ಕಬಳ್ಳಾಪುರ, ಒಟ್ಟೂ 14 ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.
ಮೇ-7 ಎರಡನೇ ಹಂತದ ಚುನಾವಣೆ ನಡೆಯಲಿದ್ದು,ಶಿವಮೊಗ್ಗ,ಉತ್ತರಕನ್ನಡ,ಕಲಬುರ್ಗಿ,ಬಾಗಲಕೋಟ,ದಾವಣಗೇರೆ,ಚಿಕ್ಕೋಡಿ,ವಿಜಯಪುರ,ಬಳ್ಳಾರಿ,ಧಾರವಾಡ,ಬೆಳಗಾವಿ,ಹಾವೇರಿ,ರಾಯಚೂರು,ಬೀದರ,ಕೊಪ್ಪಳ ಒಟ್ಟೂ ೧೪ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.
ಕರ್ನಾಟಕದ ಸುರುಪುರದ ವಿಧಾನಸಭೆಯ ಉಪಚುನಾವಣೆಮೇ.7ರಂದು ನಡೆಯಲಿದೆ.

ಒಟ್ಟೂ97ಕೋಟಿ ಜನರು ಮತದಾನ ಮಾಡಲಿದ್ದಾರೆ.49.12ಕೋಟಿ ಪುರುಷ ಮತದಾರರಿದ್ದರೆ
47.15ಕೋಟಿ ಮಹಿಳಾಮತದಾರರಿದ್ದಾರೆ.2.18ಲಕ್ಷ ಶತಾಯುಷಿ ಮತದಾರರು,82ಲಕ್ಷ ಮತದಾರರು 85ವರ್ಷ ಮೀರಿದವರು. 88.4ಲಕ್ಷ ವಿಶೇಷಚೇತನರಿದ್ದರೆ 48ಸಾವಿರ ಮಂಗಳಮುಖಿ ಮತದಾರರಿದ್ದಾರೆ.10.5ಲಕ್ಷ ಮತಗಟ್ಟೆ ಇದ್ದು 1.5ಕೋಟಿ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ.55ಲಕ್ಷ ಇವಿಎಂ ಬಳಸಲಾಗುತ್ತಿದೆ. 85ವರ್ಷಕ್ಕೂ ಮೇಲ್ಪಟ್ಟವರಿಗೆ ಹಾಗೂ ಶೇ.40ಕ್ಕೂ ಹೆಚ್ಚು ದೈಹಿಕ ನ್ಯೂನ್ಯತೆಯುಳ್ಳವರಿಗೆ ಮನೆಯಲ್ಲೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು.ಎಲ್ಲಾ ಮತಗಟ್ಟೆಯಲ್ಲೂ ಕುಡಿಯುವ ನೀರು,ಶೌಚಾಲಯದ ವ್ಯವಸ್ಥೆ ಇರುತ್ತದೆ ಎಂದು ಮಾಹಿತಿ ನೀಡಿದರು.

About the author

Adyot

Leave a Comment