ಸಿದ್ದಾಪುರ: ಜಿ.ಜಿ.ಹೆಗಡೆ ಬಾಳಗೋಡರ “ಜಾನಪದ ದೀವಿಗೆ”ಕೃತಿ ಬಿಡುಗಡೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಎಪಿಎಮಸಿ ಶ್ರೀನಿಕೇತನದಲ್ಲಿ ಇತ್ತೀಚೆಗೆ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಿರಿಯ ಸಾಹಿತಿ ಜಿ.ಜಿ. ಹೆಗಡೆ ಬಾಳಗೋಡ ಬರೆದ ಜಾನಪದ ದೀವಿಗೆ ಕೃತಿಯ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕೃತಿ ಬಿಡುಗಡೆ ಮಾಡಿದ ಹಿರಿಯ ವಿಮರ್ಶಕ ಸುಬ್ರಾಯ ಹೆಗಡೆ ಮತ್ತಿಹಳ್ಳಿ ಮಾತನಾಡಿ, ಜಗತ್ತಿನ ಎಲ್ಲಾ ಸಾಹಿತ್ಯ ಪ್ರಕಾರಗಳಿಗೂ ಜಾನಪದವೇ ತವರಾಗಿದ್ದು ಜಾನಪದವು ನಮ್ಮ ನಡುವೆ ಇರುವ ಸಾಹಿತ್ಯವಾಗಿದೆ. ನಮ್ಮ ಯುವಪೀಳಿಗೆ ಈ ಅಮೂಲ್ಯ ಬಳುವಳಿಯನ್ನು ಜೋಪಾನವಾಗಿ ಉಳಿಸುವ ಕಾರ್ಯ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಮಾತನಾಡಿ, ಜಾನಪದ ಸಾಹಿತ್ಯ ಅಬಾಲವೃದ್ಧರಾದಿಯಾಗಿ ಎಲ್ಲರನ್ನೂ ಆಕರ್ಷಿಸುವ ಶಕ್ತಿ ಹೊಂದಿದ್ದು ಯಾವ ಕಾಲಕ್ಕೂ ಮರೆಯಾಗುವುದಿಲ್ಲ, ಇಂದಿನ ಆಧುನಿಕ ಜನತೆ ಪಾಶ್ಚಾತ್ಯ ವ್ಯಾಮೋಹದ ಹಮ್ಮು ಬಿಮ್ಮು ಬಿಟ್ಟು ತಾಯ್ನೆಲದ ಜಾನಪದ ಸಂಸ್ಕೃತಿಯನ್ನು ತಮ್ಮ ಮಕ್ಕಳಿಗೆ ಸ್ವಲ್ಪ ಮಟ್ಟಿಗಾದರೂ ಕಲಿಸಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಎಮ್. ಹೆಗಡೆ ಬಾಳೇಸರ ಮಾತನಾಡಿ, ಜಿ.ಜಿ. ಹೆಗಡಯವರ ಸಾಮಾಜಿಕ ಕಾಳಜಿ ಸಾಹಿತ್ಯ ಕೃಷಿಯ ರೂಪದಲ್ಲಿ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.,
ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ರವಿ ಹೆಗಡೆ ಹೂವಿನಮನೆ ಮಾತನಾಡಿ ಇಂದು ಪಠ್ಯಪುಸ್ತಕದಲ್ಲಿ ಜನಪದ ಸಾಹಿತ್ಯದ ಕಥೆ, ಗೀತೆಗಳನ್ನು ಅಳವಡಿಸಿದರೆ ಬೆಳೆಯುವ ಮಕ್ಕಳು ಸ್ವಲ್ಪಮಟ್ಟಿಗಾದರೂ ಜನಪದ ಸಂಸ್ಕೃತಿ ತಿಳಿಯಲು ಸಾದ್ಯ, ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಒತ್ತಾಯಿಸಬೇಕಿದೆ ಎಂದರು.

ಉಪನ್ಯಾಸಕ ರತ್ನಾಕರ ನಾಯ್ಕ. ಪುಸ್ತಕ ಕುರಿತು
ಮಾತನಾಡಿದರು.
ವೇದಿಕೆಯಲ್ಲಿ ಕೆ.ಜಿ. ಭಟ್ಟ, ಆರ್.ಎಸ್.ಹೆಗಡೆ, ರಾಮಮೋಹನ ಹೆಗಡೆ, ಕಸಾಪ ಕೋಶಾಧ್ಯಕ್ಷ ಪಿ.ಬಿ. ಹೊಸೂರು, , ಲಯನ್ಸ್ ಅಧ್ಯಕ್ಷ ಆರ್.ಎಮ್. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಜಾನಪದ ಗಾಯಕ ಗೋಪಾಲ ಕಾನಳ್ಳಿ , ಗಾಯಕಿಯರಾದ ಸುಮಾ ಹೆಗಡೆ, ಮೇಧಾ ಹೆಗಡೆ ಜಾನಪದ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಕಸಾಪ ವತಿಯಿಂದ ಹಾಗೂ ಸೇವಾ ಸಂಕಲ್ಪ ಟ್ರಸ್ಟ್ ವತಿಯಿಂದ ಕೃತಿಕಾರ ಜಿ.ಜಿ.ಹೆಗಡೆ ಬಾಳಗೋಡರನ್ನು ಗೌರವಿಸಲಾಯಿತು.

ಸ್ವರ್ಣಲತಾ ಶಾನಬಾಗ್, ಎಮ್.ವಿ. ನಾಯ್ಕ, ಎಸ್. ಆರ್. ಹೆಗಡೆ, ಎಮ್.ಎಸ್. ಭಟ್,ಎಮ್.ಆರ್. ನಾಯ್ಕ, ಹಲವಾರು ಸಾಹಿತ್ಯಾಭಿಮಾನಿಗಳು, ಜನಪದ ಆಸಕ್ತರು, ಕಸಾಪ ಪದಾಧಿಕಾರಿಗಳು, ಅಜೀವ ಸದಸ್ಯರು ಭಾಗವಹಿಸಿದ್ದರು.
ಕಸಾಪ ಕೋಶಾಧ್ಯಕ್ಷ ಪಿ.ಬಿ. ಹೊಸೂರು ಸ್ವಾಗತಿಸಿದರು. ಕೃತಿಕಾರ ಜಿ.ಜಿ. ಹೆಗಡೆ ಬಾಳಗೋಡ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಗೋಪಾಲ ಕಾನಳ್ಳಿ ನಿರೂಪಿಸಿದರು. ಸಿ.ಎಸ್.ಗೌಡರ ವಂದನಾರ್ಪಣೆ ಮಾಡಿದರು.

About the author

Adyot

Leave a Comment