ಶನಿವಾರ ಸಿದ್ದಾಪುರ ಶಂಕರಮಠದಲ್ಲಿ “ಸಪ್ತಸ್ವರ ಘಂಟಾಮಂಟಪ” ಲೋಕಾರ್ಪಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಶಂಕರಮಠದಲ್ಲಿ ಫೆ.17
ರಂದು ಸರಸ್ವತಿ ಮೂರ್ತಿಯುಕ್ತ ಸಪ್ತಸ್ವರ ಘಂಟಾಮಂಟಪವು ಲೋಕಾರ್ಪಣೆಗೊಳ್ಳಲಿದೆ. ಶಿವಮೊಗ್ಗದ ಡಾ.ವಿಘ್ನೇಶ ಭಟ್ಟ ಹಾಗೂ ಡಾ.ಸುಮಿತ್ರಾ ಭಟ್ಟ ದಂಪತಿಗಳು ಈ ಮಂಟಪವನ್ನು ನಿರ್ಮಿಸಿಕೊಡುತ್ತಿದ್ದಾರೆ.

ಸಂಪೂರ್ಣ ಶಿಲಾಮಯವಾಗಿರುವ ಈ ಮಂಟಪದಲ್ಲಿ ಸಂಗೀತದ ಬೀಜಾಕ್ಷರವಾದ ಸರಿಗಮಪದನಿಸ ಸ್ವರ ಹೊರಡಿಸುವ 8 ಗಂಟೆಗಳಿರುತ್ತವೆ ಇವುಗಳನ್ನು ನುಡಿಸಿದರೆ ಸಂಗೀತದ ಧ್ವನಿ ಹೊರಡಿಸುತ್ತದೆ. ಫೆ.16ರಂದು ಮಂಟಪದ ಶೋಭಾಯಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ಫೆ.17ರಂದು ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಮಂಟಪವನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಡಾ.ವಿಘ್ನೇಶ್ವರ ಭಟ್ಟ ತಿಳಿಸಿದ್ದಾರೆ.
ಘಂಟಾನಾದದಿಂದ ಓಂಕಾರವು ಸ್ಪುರಿಸುತ್ತದೆ ಎನ್ನುವುದು ಸತ್ಯ.ಹಿಂದೂಸ್ತಾನಿ ಸಂಗೀತದ ದಿಗ್ಗಜ ಪಂ.ವೆಂಕಟೇಶ ಗೋಡಖಂಡಿ ಅವರ ಸಲಹೆಯಂತೆ ದೇಶದ ಹಲವೆಡೆ ಸುತ್ತಿ ಈ ಸಪ್ತಸ್ವರ ಘಂಟೆಗಳನ್ನುತರಲಾಗಿದೆ. ಶಿವಮೊಗ್ಗದ ಶಿಲ್ಪಿಯವರು ಸರಸ್ವತಿ ಮೂರ್ತಿ ಹಾಗೂ ಮಂಟಪವನ್ನು ನಿರ್ಮಿಸಿಕೊಟ್ಟಿದ್ದಾರೆ. ಶಾರದೆಯ ಸನ್ನಿಧಿಯಲ್ಲಿ ಅದನ್ನು ಲೋಕಾರ್ಪಣೆಗೊಳಿಸಬೇಕು ಎಂಬ ಉದ್ದೇಶದಿಮದ ಶಂಕರಮಠದಲ್ಲಿ ಅದನ್ನು ಇಡಲಾಗುತ್ತಿದೆ.

ಅದೇ ದಿನ ಮಧ್ಯಾಹ್ನ 11 ಗಂಟೆಯಿ0ದ, ಕಳೆದ 38
ವರ್ಷದಿಂದ ನಡೆಸುತ್ತಾ ಬಂದಿರುವ ನಮ್ಮ ಮಕ್ಕಳಾದ ವಸುಧಾ-ವೈಶಾಲಿಯವರ ಜನ್ಮ ದಿನದ ಸಮಾರಂಭದ ಪ್ರಯುಕ್ತ ಕಲಾಸನ್ಮಾನ ಮತ್ತು ಪುಸ್ತಕ ಬಿಡುಗಡೆ ನಡೆಯಲಿದೆ. ವಿಶೇಷ ಅತಿಥಿಗಳಾಗಿ ಲಂಡನ್ ಭಾರತೀಯ ವಿದ್ಯಾಭವನದ ನಿರ್ದೇಶಕ ಡಾ.ಮತ್ತೂರು ನಂದಕುಮಾರ್ ಹಾಗೂ ಬೆಂಗಳೂರಿನ ಶಿಕ್ಷಣ ತಜ್ಞ ಪ್ರೀನಂದ ಪ್ರೇಮಚಂದನ್ ಭಾಗವಹಿಸಲಿದ್ದಾರೆ. ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆವಹಿಸಲಿದ್ದು ಯಕ್ಷಗಾನ ಕ್ಷೇತ್ರದ ಪ್ರತಿಭಾವಂತ ವಿನಾಯಕ ಹೆಗಡೆ ಕಲಗದ್ದೆಯವರಿಗೆ ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಡಾ.ಸುಮಿತ್ರಾ ಭಟ್ಟ ರಚನೆಯ ನೆನಪು ಮಾಸುವ ಮುನ್ನ ಪುಸ್ತಕ ಬಿಡುಗಡೆಗೊಳ್ಳಲಿದೆ.
ಮಧ್ಯಾಹ್ನ ೩ ಗಂಟೆಯಿಂದ ರಾವಣವಧೆ ಯಕ್ಷಗಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಡಾ.ವಿಘ್ನೇಶ್ವರ ಭಟ್ಟ ಹಾಗೂ ಡಾ.ಸುಮಿತ್ರಾ ಭಟ್ಟ ದಂಪತಿಗಳ ಮಕ್ಕಳಾದ ವಸುಧಾ-ವೈಶಾಲಿಯವರ ಜನ್ಮ ದಿನವನ್ನು ವಿಶಿಷ್ಟವಾಗಿ ಆಚರಿಸುತ್ತಾ ಬರಲಾಗುತ್ತಿದೆ.ಇದಕ್ಕಾಗಿ ವಸುಧಾ-ವೈಶಾಲಿ ಜನ್ಮದಿನ ಸಮಿತಿ ರಚಿಸಲಾಗಿದೆ. ಪ್ರತಿವರ್ಷಸಾಹಿತ್ಯ,ಸಂಗೀತ,ನೃತ್ಯ,ಲಲಿತಕಲೆ ಹಾಗೂ ಯಕ್ಷಗಾನ ಹೀಗೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ.ಯುವಪ್ರತಿಭಾವಂತರಿಗೂ ಪ್ರೋತ್ಸಾಹ ನೀಡುತ್ತಾ ಬರಲಾಗಿದೆ.

About the author

Adyot

Leave a Comment