ಸಿದ್ದಾಪುರ:ಶೀಬಳಮನೆಯಲ್ಲಿ ಶ್ರೀಸಮರ್ಥ ಶ್ರೀಧರ ಕುಟೀರ ಸ್ಥಾಪನೆ

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಲಂಬಾಪುರ ಸಮೀಪದ ಶೀಬಳಮನೆಯ ಸುಂದರ ಪರಿಸರದಲ್ಲಿ ಶ್ರೀಸಮರ್ಥ ಶ್ರೀಧರಾಶ್ರಮ ಟ್ರಸ್ಟ್ ವತಿಯಿಂದ ಧಾರ್ಮಿಕ,ಶೈಕ್ಷಣಿಕ,ಆರೋಗ್ಯ ಮಾರ್ಗದರ್ಶನ ನೀಡುವ ಉದ್ದೇಶದಿಂದ ಶ್ರೀಸಮರ್ಥಶ್ರೀಧರ ಕುಟೀರವನ್ನು ಸ್ಥಾಪಿಸಲಾಗಿದೆ.

ಈ ಕುರಿತು ಶ್ರೀಸಮರ್ಥ ಶ್ರೀಧರಾಶ್ರಮ ಟ್ರಸ್ಟ್ ಸ್ಥಾಪಕರಾದ ಕುಂಡಲಿನೀ ಜ್ಞಾನಯೋಗಿ ಶ್ರೀಮದಾತ್ಮಾನಂದ ಸರಸ್ವತೀ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಸನಾತನ ಸಂಸ್ಕೃತಿಯ ಅನಾವರಣೆಗೆ ಮತ್ತು ಮಾರ್ಗದರ್ಶನಕ್ಕಾಗಿ ಶ್ರೀಸಮರ್ಥಶ್ರೀಧರರ ಇಚ್ಚಾನುಸಾರವಾಗಿ ಶ್ರೀಸಮರ್ಥಶ್ರೀಧರ ಕುಟೀರವನ್ನು ಸ್ಥಾಪನೆ ಮಾಡಲಾಗಿದೆ
1977ರಲ್ಲಿ ಶ್ರೀಧರ ಸ್ವಾಮೀಜಿಯವರ ಶಿಷ್ಯ ನಾಗತೀರ್ಥದ ಶ್ರಿನರಸಿಂಹ ಸರಸ್ವತೀ ಸ್ವಾಮೀಜಿಯವರಿಂದ ಸನ್ಯಾಸ ಸ್ವೀಕಾರ ಮಾಡಲಾಗಿದೆ. ಬದರಿಯ ಉತ್ತರಾದಿಮಠದ ಶ್ರಿವಾಸುದೇವಾನಂದ ಸರಸ್ವತೀ ಸವಾಮೀಜಿಯವರಿಂದ ದಂಡಸ್ವೀಕಾರ ಮಾಡಲಾಗಿದೆ. ವರದಹಳ್ಳಿಯಲ್ಲಿ ಪ್ರಾಥಮಿಕ ವೇದಾಧ್ಯಯನ ಮಾಡಿದ್ದು ಕಾಶಿಯಲ್ಲಿ ಶ್ರೀತತತಮಾನಂದ ಸರಸ್ವತೀ ಸ್ವಾಮೀಜಿಯವರ ಮಾಗದರ್ಶನದಲ್ಲಿ ಹೆಚ್ಚಿನ ವೇದಾಧ್ಯಯನ ಮಾಡಲಾಗಿದೆ.ನಂತರದಲ್ಲಿ ಉತ್ತರಭಾರತದ ಬೇರೆ ಬೇರೆ ಕಡೆಗಳಲ್ಲಿ ಅನುಷ್ಠಾನಗಳನ್ನು ಮಾಡಲಾಗಿದೆ.

1995ರಲ್ಲಿ ಶ್ರೀಸಮರ್ಥ ಶ್ರೀಧರಾಶ್ರಮ ಟ್ರಸ್ಟ್ನ್ನು ಸ್ಥಾಪಿಸಲಾಯಿತು. ತನ್ಮೂಲಕ ಸನಾತನ ಪರಂಪರೆಯನ್ನು ಪ್ರಚುರಪಡಿಸುತ್ತಾ ಬರಲಾಗಿದೆ. ಈಗ ಶ್ರೀಧರರ ಇಚ್ಚೆಯಂತೆ ನಮ್ಮ ಪೂರ್ವಾಶ್ರಮದ ಜಾಗದಲ್ಲಿ ಈ ಕುಟೀರವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಈ ಆಶ್ರಮದಲ್ಲಿ ಜಾತಿ,ಮತ ಬೇಧವಿಲ್ಲದೆ ಎಲ್ಲರಿಗೂ ಬರಲು ಅವಕಾಶವಿದೆ. ಇಲ್ಲಿ ಮುಂದಿನ ದಿನದಲ್ಲಿ ಧಾರ್ಮಿಕ,ಶೈಕ್ಷಣಿಕ,ಆರೋಗ್ಯ ಸೇವೆಗಳು ಸಿಗಲಿವೆ. ಚತುರ್ವೇದ ಸಂಸ್ಕೃತ ಪಾಠಶಾಲೆಯನ್ನು ದೇಸೀಯ ಗೋವಿಗಾಗಿ ಗೋಶಾಲೆಯನ್ನು ಸ್ಥಾಪಿಸಲಾಗುವುದು. ಇದರ ಜೊತೆಗೆ ಲೌಕಿಕ ಶಿಕ್ಷಣಕ್ಕಾಗಿ ಒಂದನೇ ತರಗತಿಯಿಂದ ಪದವಿಯವರಗಿನ ಶಾಲೆಗಳನ್ನು ಸ್ಥಾಪಿಸಲಾಗುವುದು. ನಮ್ಮ ಈ ಭಾಗದಲ್ಲಿ ಆರೋಗ್ಯದ ಚಿಕಿತ್ಸೆಗಾಗಿ ಬೇರೆ ಕಡೆಗೆ ಹೋಗುವ ಅನಿವಾರ್ಯತೆ ಇದೆ ಅದನ್ನು ತಪ್ಪಿಸುವುದಕ್ಕಾಗಿ ಕ್ಯಾನ್ಸರ್ ಸೇರಿದಂತೆ ಎಲ್ಲಾ ಮಹಾರೋಗಕ್ಕೆ ಉತ್ತಮವಾದ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಸಿಗುವ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ಶಂಕರಜಯಂತಿಯಂದು ಈ ಆಶ್ರಮದ ಅಡಿಗಲ್ಲು ಹಾಕಲಾಗಿದೆ ಫೆ.೧೯ ರಿಂದಫೆ.೨೬ರವರೆಗೆ ಇಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಇಲ್ಲಿ ವೀರಾಂಜನೇಯ ಪ್ರತಿಷ್ಠಾಪನೆ ಮಾಡಲಾಗಿದೆ. ದಶಸಹಸ್ರ ಮೋದಕ ಹವನ,ಮಹಾರುದ್ರ ಹವನ,ಪುರುಷಸೂಕ್ತ ಹವನ,ಶತಚಂಡೀಯಾಗ,ಗುರುಮಂತ್ರ ಹವನ,ಆದಿತ್ಯ ಹೃದಯ ಹೋಮ,ನರಸಿಂಹ ಮೂಲಮಂತ್ರ ಹೋಮ,೧೦೮ ಕುಂಬಾಭಿಷೇಕ ಮಹಾಪೂಜೆ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿದೆ ಎಂದು ಹೇಳಿದರು.

—–
ಈಗೀನ ಯುವ ಸಮೂಹಕ್ಕೆ ಸಾಕಷ್ಟು ಬುದ್ದಿ ಇದೆ, ನಮ್ಮ ಸಂಸ್ಕೃತಿ,ಸAಪ್ರದಾಯಗಳ ಬಗ್ಗೆ ಒಲವೂ ಇದೆ ಆದರೆ ಅವರಿಗೆ ಸರಿಯಾದ ಹಿರಿಯ ಮಾರ್ಗದರ್ಶಕರ ಅವಶ್ಯಕತೆ ಇದೆ. ಹಿರಿಯರು ತಾವು ಸರಿಯಾದ ರೀತಿಯಲ್ಲಿ ಸಂಸ್ಕಾರ-ಸAಸ್ಕೃತಿಯನ್ನು ಪಾಲಿಸುತ್ತಾ ಬಂದರೆ ಯುವಕರಿಗೆ ಮಾರ್ಗದರ್ಶನ ಮಾಡಲು ಸಾಧ್ಯ- ಶ್ರೀಮದಾತ್ಮಾನಂದ ಸರಸ್ವತೀ ಸ್ವಾಮೀಜಿ
—–
ಅಯೋಧ್ಯೆಯಲ್ಲಿ ಹಿಂದೆ ನಡೆದ ಕರಸೇವೆಯಲ್ಲಿ ನಾನೂ ಭಾಗವಹಿಸಿದ್ದೆ ರಾಮದೇವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಿದ್ದೆ ರಾಮನ ಅನುಗ್ರಹದಿಂದ ಜಗತ್ತಿನ ದೇಶದ,ರಾಜ್ಯದ ಸಮಸ್ಯೆ ನಿವಾರಣೆಯಾಗಲಿದೆ ಮಳೆ-ಬೆಳೆಗಳು ಉತ್ತಮವಾಗಲಿದ್ದು ಸುಭೀಕ್ಷ ಪ್ರಾಪ್ತವಾಗಲಿದೆ ರಾಜ್ಯದಲ್ಲಿ ರಾಜಕೀಯ ಬದಲಾವಣೆಯೂ ಆಗಲಿದೆ-ಶ್ರೀಮದಾತ್ಮಾನಂದ ಸರಸ್ವತೀ ಸ್ವಾಮೀಜಿ
—-

About the author

Adyot

Leave a Comment