ರಾಜ್ಯಸಭಾ ಚುನಾವಣೆಗೆ ಗೈರು; ಸ್ಪಷ್ಟನೆ ನೀಡಿದ ಶಾಸಕ ಶಿವರಾಮ ಹೆಬ್ಬಾರ

ಆದ್ಯೋತ್ ಸುದ್ದಿನಿಧಿ:
ರಾಜ್ಯದಲ್ಲಿ ರಾಜ್ಯಸಭಾ ಚುನಾವಣೆ ಮುಗಿದಿದೆ. ನಿರೀಕ್ಷೆಯಂತೆ ಕಾಂಗ್ರೆಸ್ ಮೂರು ಸ್ಥಾನವನ್ನು ಗೆದ್ದುಕೊಂಡಿದೆ.ಜೆಡಿಎಸ್ ತನ್ನ ೧೯ ಶಾಸಕರು ತನ್ನ ಜೊತೆಗೆ ಇದ್ದಾರೆ ಎಂದು ಖಚಿತಪಡಿಸಿಕೊಂಡಿದ್ದಾರೆ. ಆದರೆ ಬಿಜೆಪಿ ಮುಖಭಂಗಕ್ಕೆ ಈಡಾಗಿದೆ ಎಸ್.ಟಿ.ಸೊಮಶೇಖರ ನೇರವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದರೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಚುನಾವಣೆಗೆ ಗೈರಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ಎದುರಾಗಿದೆ. ಯಲ್ಲಾಪುರದಲ್ಲಿ ಪಪಂ ಸದಸ್ಯರೊಬ್ಬರು ಶಿವರಾಮ ಹೆಬ್ಬಾರ್ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೆಲ್ಲದರಿಂದ ಮುಜಗರಗೊಂಡಿರುವ ಶಿವರಾಮ ಹೆಬ್ಬಾರ್ ಬುಧವಾರ ಯಲ್ಲಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಗೈರಾದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ನನಗೆ ಅನಾರೋಗ್ಯ ಆಗಿತ್ತು ಬೆಂಗಳುರಿನ ವೈದ್ಯರು ನನಗೆ ೬ ಗಂಟೆಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಿದ್ದರು ಆದ್ದರಿಂದ ನಾನು ಎಲ್ಲೂ ಪ್ರಯಾಣ ಮಾಡದೆ ವಿಶ್ರಾಂತಿ ಪಡೆಯುತ್ತಿದ್ದೆ ನಾನು ಹೆದರಿಕೊಂಡು ಅಡಗಿಕೊಂಡಿದ್ದೆ ಪಲಾಯನಗೈದಿದ್ದೆ ಎನ್ನುವುದೆಲ್ಲ ಊಹಾಪೋಹ ನಾನು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನಾನು ಬಿಜೆಪಿಯ ಶಾಸಕನಾಗಿದ್ದು ಬಿಜೆಪಿಯಲ್ಲೆ ಇದ್ದೆನೆ ಇಲ್ಲಿ ವಿಪ್ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ ಕಾನೂನಾತ್ಮಕ ಕ್ರಮ ಜರುಗಿಸುವುದಿದ್ದರೆ ಜರುಗಿಸಲಿ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ಪಕ್ಷದ ಪದಾಧಿಕಾರಿಗಳೇ ಪಕ್ಷದ ವಿರುದ್ಧ ಪ್ರಚಾರ ಮಾಡಿದ್ದರು. ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದರ ಬಗ್ಗೆ ಅವರನ್ನು ಅಮಾನತು ಮಾಡಲಾಗಿತ್ತು ಆದರೆ ಕೆಲವೇ ದಿನದಲ್ಲಿ ಅದನ್ನು ರದ್ದು ಮಾಡಲಾಗಿತ್ತು ಇಂತಹದ್ದನ್ನು ಹೇಗೆ ಸಹಿಸಿಕೊಳ್ಳುವುದು

ರಾಜ್ಯ ಮತ್ತು ರಾಷ್ಟ್ರ ಬಿಜೆಪಿಯ ನಾಯಕರ ಬಗ್ಗೆ ನನಗೆ ಯಾವುದೇ ಅಸಮಧಾನ ಇಲ್ಲ. ಆದರೆ ನನ್ನ ಕ್ಷೇತ್ರದ ಕೆಲವು ಬಿಜೆಪಿ ಮುಖಂಡರು ನನ್ನ ವಿರುದ್ದ ಕೆಲಸ ಮಾಡಿದ್ದಾರೆ ಅವರ ಬಗ್ಗೆ ಯಾವುದೇ ಕ್ರಮವಾಗಿಲ್ಲ ಬಿಜೆಪಿ ಪದಾಧಿಕಾರಿಗಳ ಆಯ್ಕೆಯ ಬಗ್ಗೆ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನನ್ನ ಕ್ಷೇತ್ರದಲ್ಲಿ ಹೊಸದಾಗಿ ಆಯ್ಕೆಯಾದ ಅಧ್ಯಕ್ಷರುಗಳನ್ನು ನಾನು ಶಾಲು ಹೊದಿಸಿ ಸನ್ಮಾನಿಸಿದ್ದೇನೆ ಎಂದು ಹೆಬ್ಬಾರ್ ಹೇಳಿದರು.

ನನ್ನ ಕ್ಷೇತ್ರದ ಅಭಿವೃದ್ಧಿ ಆಗುವುದು ನನಗೆ ಮುಖ್ಯ ಆದ್ದರಿಂದ ನಾನು ಮುಖ್ಯಮಂತ್ರಿ,ಉಪಮುಖ್ಯಮAತ್ರಿಗಳನ್ನು ಭೆಟಿಯಾಗುತ್ತಿರುತ್ತೆನೆ ಇದರಲ್ಲಿ ರಾಜಕೀಯವಿಲ್ಲ ಕ್ಷೇತ್ರದ ಅಭಿವೃದ್ಧಿಗೆ ಕಿಂಚಿತ್ತೂ ತೊಂದರೆ ಆಗಲು ಬಿಡುವುದಿಲ್ಲ. ನಾನು ಎಲ್ಲೆ ಇರಲಿ ಹೇಗೆ ಇರಲಿ ಕ್ಷೇತ್ರದ ಜನತೆಗೆ ತೊಂದರೆಯಾಗುವುದಕ್ಕೆ ಬಿಡುವುದಿಲ್ಲ. ಕ್ಷೇತ್ರದ ಜನತೆಯ ಜೊತೆ ಇರುತ್ತೇನೆ. ಶಾಸಕ ಸ್ಥಾನಕ್ಕೆ ನಾನು ರಾಜಿನಾಮೆ ಕೊಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

About the author

Adyot

Leave a Comment